Advertisement

ವೈರಲ್ ಆಯ್ತು ಉಸೇನ್ ಬೋಲ್ಟ್ ರ ಸಾಮಾಜಿಕ ಅಂತರ ಫೋಟೊ

01:20 PM Apr 16, 2020 | keerthan |

ವಾಷಿಂಗ್ಟನ್‌: ಕೋವಿಡ್-19 ಸೋಂಕಿನಿಂದ ಇಡೀ ವಿಶ್ವವೇ ಸ್ತಬ್ಧಗೊಂಡಿದೆ. ವಿಶ್ವದ ಪ್ರಮುಖ ನಾಯಕರು ಮತ್ತು ಗಣ್ಯವ್ಯಕ್ತಿ ಗಳು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಕರೆ ನೀಡುತ್ತಿದ್ದಾರೆ.

Advertisement

ಇದೀಗ ಖ್ಯಾತ ಸ್ಟ್ರಿಂಟರ್‌ ಜಮೈಕಾದ ಉಸೇನ್‌ ಬೋಲ್ಟ್ ಕೂಡ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಕುರಿತು ತಮ್ಮದೇ ರೀತಿಯಲ್ಲಿ ಮನವಿ ಮಾಡಿದ್ದಾರೆ. ಅದು ಭಾರೀ ತಮಾಷೆ ಸೃಷ್ಟಿಸಿದೆ.

ಟ್ವಿಟ್ಟರ್‌ನಲ್ಲಿ ಪ್ರತಿಕ್ರಿಯಿಸಿರುವ ಬೋಲ್ಟ್ ಒಲಿಂಪಿಕ್ಸ್‌ನಲ್ಲಿ ತಮ್ಮ ಪ್ರತಿಸ್ಪರ್ಧಿಗಳಿಂದ ಅಂತರ ಕಾಯ್ದು ಕೊಂಡು ಪದಕ ಗೆದ್ದ ಚಿತ್ರವನ್ನು ಪ್ರಕಟಿಸಿ ಸಾಮಾಜಿಕ ಅಂತರ ಎಂದರೇ ಇದು. ಈ ರೀತಿಯಲ್ಲಿ ನೀವೆಲ್ಲರೂ ಅಂತರ ಕಾಯ್ದುಕೊಂಡರೆ ಕೋವಿಡ್-19 ಸೋಂಕು ಮಹಾಮಾರಿಯನ್ನು ಗೆಲ್ಲಬಹುದು ಎಂದು ಬೋಲ್ಟ್ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next