ಲಾಸ್ ಏಂಜಲೀಸ್: 1995 ರ ಗ್ಯಾಂಗ್‌ಸ್ಟಾಸ್ ಪ್ಯಾರಡೈಸ್ ಹಾಡುಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಯುಎಸ್ ರಾಪರ್ ಕೂಲಿಯೊ ಅವರು ಬುಧವಾರ ಲಾಸ್ ಏಂಜಲೀಸ್‌ನಲ್ಲಿ ನಿಧನರಾದರು ಎಂದು ಅವರ ಮ್ಯಾನೇಜರ್ ತಿಳಿಸಿದ್ದಾರೆ
ರಾಪರ್ ಕೂಲಿಯೊ ಅವರ ನಿಜವಾದ ಹೆಸರು ಆರ್ಟಿಸ್ ಲಿಯಾನ್ ಐವಿ ಜೂನಿಯರ್. 59 ವರ್ಷದ ಅವರು ಸ್ನೇಹಿತನ ಮನೆಯಲ್ಲಿ ನಿಧನರಾದರು ಎಂದು ಅವರ ದೀರ್ಘಕಾಲದ ಮ್ಯಾನೇಜರ್ ಜರೆಜ್ ಪೋಸಿ ಅಸೋಸಿಯೇಟೆಡ್ ಪ್ರೆಸ್ ಗೆ ತಿಳಿಸಿದರು. ಅವರ ಸಾವಿನ ಕಾರಣವನ್ನು ತಿಳಿಸಲಾಗಿಲ್ಲ.
1995 ರಲ್ಲಿ ಡೇಂಜರಸ್ ಮೈಂಡ್ಸ್ ಚಿತ್ರದ ಗ್ಯಾಂಗ್‌ಸ್ಟಾಸ್ ಪ್ಯಾರಡೈಸ್ ನಿಂದ ಕೂಲಿಯೊ ಜಾಗತಿಕ ಮಟ್ಟದ ಖ್ಯಾತಿಯನ್ನು ಗಳಿಸಿದರು. ಮುಂದಿನ ವರ್ಷದ ಗ್ರ್ಯಾಮಿ ಅವಾರ್ಡ್ಸ್ ನಲ್ಲಿ ಅದೇ ಟ್ರ್ಯಾಕ್ ಗಾಗಿ ಅವರಿಗೆ ಅತ್ಯುತ್ತಮ ರಾಪರ್ ಪ್ರಶಸ್ತಿ ನೀಡಲಾಯಿತು. 80 ರ ದಶಕದ ಅಂತ್ಯದಲ್ಲಿ ಪ್ರಾರಂಭವಾದ ವೃತ್ತಿಜೀವನದ ಅವಧಿಯಲ್ಲಿ ಕೂಲಿಯೊ ಐದು ಗ್ರ್ಯಾಮಿಗಳಿಗೆ ನಾಮಿನೇಟ್ ಆಗಿದ್ದರು.
ಇದನ್ನೂ ಓದಿ:ಟಿಯಾಗೋ ಇವಿ ರಿಲೀಸ್; ಒಂದು ಬಾರಿ ಚಾರ್ಜ್ ಮಾಡಿದರೆ 312 ಕಿಮೀ ಸಂಚಾರ
ಕೂಲಿಯೊ ದಕ್ಷಿಣ ಪೆನ್ಸಿಲ್ವೇನಿಯಾದ ಮೊನೆಸ್ಸೆನ್ ನಲ್ಲಿ ಜನಿಸಿದರು. ಕೂಲಿಯೊ ನಂತರ ಕ್ಯಾಲಿಫೋರ್ನಿಯಾದ ಸಮುದಾಯ ಕಾಲೇಜಿನಲ್ಲಿ ವ್ಯಾಸಂಗ ಮಾಡಿದರು. ಅವರು ಸ್ವಯಂಸೇವಕ ಅಗ್ನಿಶಾಮಕ ದಳದವರಾಗಿ ಮತ್ತು ವಿಮಾನ ನಿಲ್ದಾಣದ ಭದ್ರತೆಯಲ್ಲಿ ಕೆಲಸ ಮಾಡಿದ್ದರು.