ನ್ಯೂಯಾರ್ಕ್: ಆರನೇ ಶ್ರೇಯಾಂಕದ ಅಮೆರಿಕದ ಜೆಸ್ಸಿಕಾ ಪೆಗುಲಾ ಅವರು ಶನಿವಾರ ನಡೆಯುವ ಯುಎಸ್ ಓಪನ್ ಗ್ರ್ಯಾನ್ ಸ್ಲಾಮ್ ಕೂಟದ ವನಿತೆ ಯರ ಫೈನಲ್ ಹೋರಾಟದಲ್ಲಿ ಎರಡನೇ ಶ್ರೇಯಾಂಕದ ಅರಿನಾ ಸಬಲೆಂಕಾ ಅವರ ಸವಾಲನ್ನು ಎದುರಿಸಲಿದ್ದಾರೆ.
ಸೆಮಿಫೈನಲ್ ಕಾದಾಟದಲ್ಲಿ ಪೆಗುಲಾ ಅತ್ಯಂತ ಕಳಪೆಯಾಗಿ ಆಟ ಆರಂಭಿಸಿ ಮೊದಲ ಸೆಟ್ ಕಳೆದುಕೊಂಡಿದ್ದರು. ಆದರೆ ಆಬಳಿಕ ಅದ್ಭುತ ಹೋರಾಟ ನೀಡಿದ ಪೆಗುಲಾ ಅವರು ಕರೋಲಿನಾ ಮುಚೋವಾ ಅವರನ್ನು 1-6, 6-4, 6-2 ಸೆಟ್ಗಳಿಂದ ಸೋಲಿಸಿ ಫೈನಲಿಗೇರಿದರು.
ನ್ಯೂಯಾರ್ಕ್ನವರೇ ಆದ 30ರ ಹರೆ ಯದ ಪೆಗುಲಾ ಕಳೆದ 16 ಪಂದ್ಯಗಳಲ್ಲಿ 15ರಲ್ಲಿ ಜಯ ಸಾಧಿಸಿದ್ದು ಪ್ರಶಸ್ತಿ ಗೆಲ್ಲುವ ಭರವಸೆ ಮೂಡಿಸಿದ್ದಾರೆ. ಆದರೆ ಅವರ ಫೈನಲ್ ಎದುರಾಳಿ ಅರಿನಾ ಸಬಲೆಂಕಾ ಉತ್ತಮ ಫಾರ್ಮ್ನಲ್ಲಿದ್ದಾರೆ. ಸಬಲೆಂಕಾ ಕಳೆದ ವರ್ಷ ಇಲ್ಲಿ ಫೈನಲ್ನಲ್ಲಿ ಕೊಕೊ ಗಾಫ್ ಅವರಿಗೆ ಶರಣಾಗಿ ರನ್ನರ್ ಅಪ್ ಸ್ಥಾನ ಪಡೆದಿದ್ದರು. ಈ ಬಾರಿ 13ನೇ ಶ್ರೇಯಾಂಕದ ಎಮ್ಮಾ ನವಾರೊ ಅವರನ್ನು 6-3, 7-6 (2) ಸೆಟ್ಗಳಿಂದ ಸೋಲಿಸಿ ಮತ್ತೆ ಫೈನಲಿಗೇರಿದ ಸಾಧನೆ ಮಾಡಿದ್ದಾರೆ. ಈ ಬಾರಿ ಪ್ರಶಸ್ತಿಗೆ ಕಣ್ಣು ಹಾಯಿಸಿದ್ದಾರೆ.
ಎರ್ರಾನಿ, ವವಸ್ಸೋರಿಗೆ ಮಿಕ್ಸೆಡ್ ಡಬಲ್ಸ್ ಪ್ರಶಸ್ತಿ
ನ್ಯೂಯಾರ್ಕ್: ಸಾರಾ ಎರ್ರಾನಿ ಮತ್ತು ಆಂದ್ರೇಯ ವವಸ್ಸೋರಿ ಅವರು ಗುರುವಾರ ನಡೆದ ಮಿಕ್ಸೆಡ್ ಡಬಲ್ಸ್ನ ಫೈನಲ್ನಲ್ಲಿ ಟೌನ್ಸೆಂಡ್ ಮತ್ತು ಡೋನಾಲ್ಡ್ ಯಂಗ್ ಅವರನ್ನು 7-6 (0),7-5 ಸೆಟ್ಗಳಿಂದ ಸೋಲಿಸಿ ಪ್ರಶಸ್ತಿ ಗೆದ್ದರು.