ಫ್ಲೋರಿಡಾ, ಅಮೆರಿಕ : ಫ್ಲೋರಿಡಾದ ಜ್ಯಾಕ್ಸನ್‌ವಿಲೆಯಲ್ಲಿಯಲ್ಲಿ ನಿನ್ನೆ ಭಾನುವಾರ ನಡೆದಿದ್ದ ಮಾಸ್ ಶೂಟಿಂಗ್‌ನಲ್ಲಿ ಹಲವಾರು ಮಂದಿ ಗಾಯಗೊಂಡಿದ್ದು ಕೆಲವರು ಮೃತಪಟ್ಟಿರುವುದಾಗಿ ಶಂಕಿಸಲಾಗಿದೆ.
ಇದೇ ವೇಳೆ ಈ ಮಾಸ್ ಶೂಟಿಂಗ್‌ಗೆ ಕಾರಣನಾದ ಶಂಕಿತ ವ್ಯಕ್ತಿಯೋರ್ವ ಹತನಾಗಿರುವುದಾಗಿ ಸ್ಥಳೀಯ ಷರೀಫ್ ತಿಳಿಸಿದ್ದಾರೆ. ಸಾರ್ವಜನಿಕರು ಈ ಮಾಸ್ ಶೂಟಿಂಗ್ ನಡೆದಿರುವ ತಾಣಕ್ಕೆ ಸದ್ಯಕ್ಕೆ ಬರಬಾರದೆಂದು ಅವರು ವಿನಂತಿಸಿಕೊಂಡಿದ್ದಾರೆ.
ಈ ಮಾಸ್ ಶೂಟಿಂಗ್ ಪ್ರಕರಣದಲ್ಲಿ ಶಾಮೀಲಾಗಿರಬಹುದಾದ ಎರಡನೇ ಶಂಕಿತನಿಗಾಗಿ ಈಗ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ. ಒಬ್ಬ ಶಂಕಿತ ಈಗಾಗಲೇ ಹತನಾಗಿದ್ದಾನೆ. ಸ್ಥಳದಲ್ಲಿ ಗಾಯಾಳುಗಳಾಗಿ ಬಿದ್ದುಕೊಂಡಿದ್ದವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಮೃತರ ಸಂಖ್ಯೆ ಎಷ್ಟೆಂಬುದು ಇನ್ನೂ ಖಚಿತವಾಗಿಲ್ಲ ಎಂದು ಷರೀಫ್ ಕಾರ್ಯಾಲಯ ತನ್ನ ಟ್ವಿಟರ್‌ನಲ್ಲಿ ಹೇಳಿದೆ.
ಮಾಸ್ ಶೂಟಿಂಗ್‌ನಿಂದ ತಮ್ಮ ಪ್ರಾಣ ಉಳಿಸಿಕೊಳ್ಳಲು ಹಲವರು ಅಡಗಿಕೊಂಡಿದ್ದಾರೆ. ಹಾಗೆ ಅಡಗಿಕೊಂಡವರು ನಾವು ಹೇಳುವ ತನಕ ಹೊರಬರಬಾರದು ಮತ್ತು ಧೈರ್ಯದಿಂದ ಶಾಂತಿಯಿಂದ ಇರಬೇಕು; ಓಡಿಕೊಂಡು ಹೊರಬರಬಾರದು ಎಂದು ಷರೀಫ್ ಹೇಳಿದ್ದಾರೆ.
ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.