Advertisement
ನ್ಯೂಯಾರ್ಕ್ ನಗರದ ಜೆಡ್ಡಿ ವಿಲ್ ಎಂಬ 22 ವರ್ಷದ ಸಂಗೀತಗಾರ ಇತ್ತೀಚೆಗೆ ತನ್ನಿಂದ ಗರ್ಭಿಣಿಯರಾದ ಐವರಿಗೆ ಜಂಟಿಯಾಗಿ ಬೇಬಿ ಶವರ್ ನ್ನು ಆಯೋಜಿಸಿದ್ದಾನೆ.
Related Articles
Advertisement
ತಾಯಿಯಾಗಲಿರುವ ಐವರು ಆಶ್ಲೀಗ್, ಬೋನಿ ಬಿ, ಕೇ ಮೆರಿ, ಜಿಲೀನ್ ವಿಲಾ ಮತ್ತು ಇಯಾನ್ಲಾ ಕಲಿಫಾ ಗ್ಯಾಲೆಟ್ಟಿ ಒಬ್ಬರನ್ನೊಬ್ಬರು ಒಪ್ಪಿಕೊಂಡಿದ್ದಾರೆ. ಏಕೆಂದರೆ ದೊಡ್ಡ ಕುಟುಂಬದಲ್ಲಿ ಬೆಳೆಯಲು ಇದು ನಮ್ಮ ಚಿಕ್ಕ ಮಕ್ಕಳಿಗೆ ಉತ್ತಮವಾಗಿದೆ ಎಂದು ಆಶ್ಲೀಗ್ ಹೇಳಿರುವುದಾಗಿ ವರದಿ ತಿಳಿಸಿದೆ.
“ನಾವು ನಮ್ಮ ಬೇಬಿ ಡ್ಯಾಡಿಯನ್ನು ಪ್ರೀತಿಸುತ್ತೇವೆ! ನಾವು ನಮ್ಮ ಮಕ್ಕಳ ಜೀವನವನ್ನು ಹಾಳುಮಾಡುವುದಿಲ್ಲ! ನಮ್ಮ ಕುಟುಂಬಗಳು ಇದನ್ನು ಒಪ್ಪಿಕೊಂಡಿವೆ!” ಎಂದು ಅವರು ಬರೆದುಕೊಂಡಿದ್ದಾರೆ.
ಬೇಬಿ ಶವರ್‌ನ ವೀಡಿಯೊವು 5 ಅಮ್ಮಂದಿರು ಒಟ್ಟಿಗೆ ನೃತ್ಯ ಮಾಡುವುದು ಮತ್ತು ಒಟ್ಟಿಗೆ ತಿನ್ನುವುದು ಮತ್ತು ಪರಸ್ಪರ ಜೊತೆಯಾಗಿ ಆನಂದಿಸುವುದನ್ನು ತೋರಿಸುತ್ತದೆ.
ಆದರೆ ಇಂಟರ್ ನೆಟ್ ಬಳಕೆದಾರರಲ್ಲಿ ಕೆಲವರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
“ಇದು ಮುಜುಗರದ ಸಂಗತಿ, ಸುಳ್ಳು ಹೇಳಲು ಹೋಗುವುದಿಲ್ಲ” ಎಂದು ಒಬ್ಬ ಟಿಕ್‌ಟಾಕ್ ಬಳಕೆದಾರರು ಬರೆದಿದ್ದಾರೆ. “ಇದು ನಿಜವಲ್ಲ ಎಂದು ದಯವಿಟ್ಟು ಹೇಳಿ” ಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ.
ಇದನ್ನು ಲೈಕ್ಸ್ ಪಡೆಯಲು ಮಾಡಿದ್ದಾರೆ ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ.