ದೋಹಾ: ಸಲಿಂಗ ಸಂಬಂಧಗಳು ಕಾನೂನು ಬಾಹಿರವಾಗಿರುವ ದೇಶದಲ್ಲಿ ಎಲ್‌ಜಿಬಿಟಿಕ್ಯು ಸಮುದಾಯವನ್ನು ಬೆಂಬಲಿಸಲು ಕಾಮನಬಿಲ್ಲು ಶರ್ಟ್ ಧರಿಸಿ ಕತಾರ್ ನ ವಿಶ್ವಕಪ್ ಕ್ರೀಡಾಂಗಣಕ್ಕೆ ಪ್ರವೇಶಿಸಲು ಪ್ರಯತ್ನಿಸಿದ ಅಮೆರಿಕದ ಪತ್ರಕರ್ತರನ್ನು ತಡೆಯಲಾಗಿದೆ.
ಈಗ ತನ್ನದೇ ವೆಬ್‌ಸೈಟ್ ಹೊಂದಿರುವ ಮಾಜಿ ಸ್ಪೋರ್ಟ್ಸ್ ಇಲಸ್ಟ್ರೇಟೆಡ್ ಪತ್ರಕರ್ತ ಗ್ರಾಂಟ್ ವಾಲ್ ಅವರನ್ನು ತಡೆಯಲಾಗಿದೆ. ಅಲ್ ರಯಾನ್ ನಲ್ಲಿರುವ ಅಹ್ಮದ್ ಬಿನ್ ಅಲಿ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ ವೇಲ್ಸ್ ವಿರುದ್ಧದ ಅಮೆರಿಕ ಪಂದ್ಯಕ್ಕೆ ಪ್ರವೇಶ ನಿರಾಕರಿಸಲಾಯಿತು.
ಅವರು ಧರಿಸಿದ್ದ ಎಲ್‌ಜಿಬಿಟಿಕ್ಯು ಬೆಂಬಲಿತ ಅಂಗಿಯನ್ನು ತೆಗೆಯುವಂತೆ ಹೇಳಿದರು. ಅಲ್ಲದೆ ಘಟನೆಯ ಬಗ್ಗೆ ಟ್ವೀಟ್ ಮಾಡಿದಾಗ ಅವರ ಫೋನ್ ಕಿತ್ತುಕೊಳ್ಳಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
‘ನಾನು ಕ್ಷೇಮವಾಗಿದ್ದೇನೆ. ಆದರೆ ಇದು ಅನಗತ್ಯವಾಗಿತ್ತು’ ಎಂದು ಗ್ರಾಂಟ್ ವಾಲ್ ಹೇಳಿದ್ದಾರೆ.
Related Articles
ಇದನ್ನೂ ಓದಿ:ಜೀವಕ್ಕೆ ಕುತ್ತು ತಂದ ಸೆಲ್ಫಿ: ಕುಡಿದ ಮತ್ತಿನಲ್ಲಿ ಬಂಡೆಯ ಮೇಲೆ ಸೆಲ್ಫಿ ತೆಗೆಯಲು ಹೋಗಿ ಸಾವು
ನಂತರ ಭದ್ರತಾ ಕಮಾಂಡರ್ ಅವರನ್ನು ಸಂಪರ್ಕಿಸಿ, ಕ್ಷಮೆಯಾಚಿಸಿ ಮೈದಾನಕ್ಕೆ ಪ್ರವೇಶಿಸಲು ಅವಕಾಶ ನೀಡಿದರು ಎಂದು ಅವರು ಹೇಳಿದರು. ಅಲ್ಲದೆ ಫಿಫಾ ಪ್ರತಿನಿಧಿ ಕೂಡಾ ಕ್ಷಮೆಯಾಚಿಸಿದರು ಎಂದು ಅವರು ಹೇಳಿದರು.
ಎಲ್‌ಜಿಬಿಟಿಕ್ಯು ಎಂಬುದು ಲೆಸ್ಬಿಯನ್, ಗೇ, ದ್ವಿಲಿಂಗಿ, ಟ್ರಾನ್ಸ್ಜೆಂಡರ್, ಕ್ವೀರ್, ಇಂಟರ್ಸೆಕ್ಸ್ ಮುಂತಾದವುಗಳಿಗೆ ಸೇರಿದ ಸಮುದಾಯ. ವಿಶ್ವಕಪ್ ನಡೆಯುತ್ತಿರುವ ಕತಾರ್ ನಲ್ಲಿ ಸಲಿಂಗ ಸಂಬಂಧಗಳು ಕಾನೂನು ಬಾಹಿರವಾಗಿದೆ.