ವಾಷಿಂಗ್ಟನ್ : ಅಗತ್ಯ ಮತಗಳ ಕೊರತೆಯಿಂದಾಗಿ ಖರ್ಚು ಮಸೂದೆಯನ್ನು ಸೆನೆಟ್ ತಡೆದಿರುವ ಪರಿಣಾಮ ಅಮೆರಿಕ ಸರಕಾರ ವಸ್ತುತಃ ಬಾಗಿಲು ಮುಚ್ಚಿದೆ ಸ್ಥಿತಿಗೆ ತಲುಪಿದೆ.
ಖರ್ಚು ಮಸೂದೆ ಪಾಸಾಗಲು ನಿನ್ನೆ ಮಧ್ಯ ರಾತ್ರಿ ಗಡುವಾಗಿತ್ತು. ಆದರೆ ಮಸೂದೆ ಪಾಸಾಗುವುದಕ್ಕೆ ಅಗತ್ಯವಿರುವಷ್ಟು ಮತಗಳು ಸೆನೆಟ್‌ನಲ್ಲಿ ಇರಲಿಲ್ಲ. ಮಸೂದೆ ಪಾಸಾಗುವುದಕ್ಕೆ ಇದ್ದ ಗಡುವು ನಿನ್ನೆ ಮಧ್ಯ ರಾತ್ರಿ ಮುಗಿದ ಬಳಿಕವೂ ಚರ್ಚೆ-ಮಾತುಕತೆ ಮುಂದುವರಿದಿತ್ತು.
ಖರ್ಚು ಮಸೂದೆ ಪಾಸಾಗಲು 60 ಮತಗಳ ಕೊರತೆ ಇದ್ದ ಸ್ಥಿತಿಯಲ್ಲಿ ಸೆನೆಟ್ ಬಹುಸಂಖ್ಯಾಕ ನಾಯಕ ಮಿಚ್ ಮೆಕೊನೆಲ್ ಅವರು ಮತದಾನವನ್ನು ಮುಕ್ತವಾಗಿರಿಸಿದರು.
ಫೆ.16ರ ವರೆಗಿನ ಕಿರು ಅವಧಿಗೆ ಸರಕಾರದ ಖರ್ಚುಗಳನ್ನು ನಿಭಾಯಿಸುವುದಕ್ಕೆ ಅವಶ್ಯವಿರುವ ಹಣವನ್ನು ಒದಗಿಸುವ ಈ ಮಸೂದೆಯ ಸೆನೆಟ್‌ನಲ್ಲಿ ಅಗತ್ಯ ಸಂಖ್ಯೆಯ ಮತಗಳ ಕೊರತೆಯಿಂದಾಗಿ ತಡೆಯಲ್ಪಟ್ಟಿತು.
ನಡು ರಾತ್ರಿಯ ಗಡುವು ಮುಗಿದೊಡನೆಯೇ ಅನ್ಯ ಮಾರ್ಗೋಪಾಯಗಳನ್ನು ಚರ್ಚಿಸುವುದಕ್ಕಾಗಿ ಮೆಕೋನೆಲ್ ಮತ್ತು ಸೆನೆಟ್‌ನ ಡೆಮೊಕ್ರಾಟಿಕ್ ನಾಯಕ ಚಕ್ ಶೂಮರ್ ಅವರು ಸೆನೆಟ್ ಅಂತಸ್ತಿಗೆ ಸಮೀಪವೇ ಇರುವ ಕೋಣೆಯೊಂದರಲ್ಲಿ ಸಭೆ ಸೇರಿದರು. ಆದರೆ ಫಲಶ್ರುತಿ ಏನೆಂಬುದು ಗೊತ್ತಾಗಲಿಲ್ಲ.
ಮಸೂದೆ ಪಾಸಾಗುವ ನಿನ್ನೆ ನಡುರಾತ್ರಿಯ ಗಡುವು ಮುಗಿದಿರುವ ಕಾರಣ ತಡೆ ಉಂಟಾಗಿರುವುದರಿಂದ ಈಗ ವಸ್ತುತಃ ಅಮೆರಿಕ ಸರಕಾರ ತಾಂತ್ರಿಕವಾಗಿ ಖರ್ಚು ನಿಭಾವಣೆಗೆ ಚಿಕ್ಕಾಸು ಕೂಡ ಇಲ್ಲದ ಸ್ಥಿತಿಗೆ ಗುರಿಯಾಗಿದೆ.