ಚಿಕ್ಕಮಗಳೂರು: ವಿವಾದಿತ ದತ್ತಪೀಠದಲ್ಲಿ ಇಂದಿನಿಂದ ಮೂರು ದಿನಗಳ ಉರುಸ್ ಆಚರಣೆ ಆರಂಭವಾಗಿದೆ. ಇನಾಂ ದತ್ತಾತ್ರೇಯ ಬಾಬಾ ಬುಡನ್ ದರ್ಗಾದಲ್ಲಿ ಉರುಸ್ ಆರಂಭಗೊಂಡಿದೆ.
ರಾಜ್ಯ ಸರ್ಕಾರ ರಚನೆ ಮಾಡಿದ್ದ ದತ್ತಪೀಠ ವ್ಯವಸ್ಥಾಪನ ಮಂಡಳಿಯ ತೀವ್ರ ವಿರೋಧ ವ್ಯಕ್ತವಾಗಿದೆ. ಜಿಲ್ಲಾಡಳಿತದ ನೇತೃತ್ವದಲ್ಲಿ ಉರುಸ್ ಆಚರಣೆ ನಡೆಯಲಿದೆ. ಇಂದು ನಡೆಯುವ ಉರುಸ್ ಆಚರಣೆಯಿಂದ ಮುಸ್ಲಿಂ ಸಮುದಾಯ ದೂರ ಉಳಿಯುವ ಸಾಧ್ಯತೆಯಿದೆ. ವ್ಯವಸ್ಥಾಪನ ಮಂಡಳಿ ನೇತೃತ್ವದಲ್ಲಿ ಉರುಸ್ ಆಚರಣೆ ನಡೆಯುವುದರಿಂದ ಮುಸ್ಲಿಂ ಸಮುದಾಯದ ನಾಯಕರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.
ಮಾರ್ಚ್ 8,9,10,ರಂದು ವಿವಾದಿತ ಇನಾಂ ದತ್ತಾತ್ರೇಯ ಬಾಬಾ ಬುಡನ್ ದರ್ಗಾದಲ್ಲಿ ಉರುಸ್ ಕಾರ್ಯಕ್ರಮ ನಡೆಯಲಿದ್ದು, ರಾಜ್ಯ ಹೊರ ರಾಜ್ಯದಿಂದ ಉರುಸ್ ಗೆ ಮುಸ್ಲಿಂ ಸಮುದಾಯದವರು ಆಗಮಿಸಲಿದ್ದಾರೆ.
ಉರೂಸ್ ನಿಂದ ದೂರ ಉಳಿದಿರುವ ಮುಸ್ಲಿಂದ ಸಮುದಾಯದ ಮುಖಂಡರು ರಾಜ್ಯ ಸರ್ಕಾರಕ್ಕೆ ನಾಲ್ಕು ಬೇಡಿಕೆ ಇಟ್ಟಿದ್ದಾರೆ. ಅರ್ಚಕ ನೇಮಕಾತಿ ರದ್ದು, ವ್ಯವಸ್ಥಾಪನ ಮಂಡಳಿ ರದ್ದು, ಗೋರಿಗಳಿಗೆ ಹಸಿರು ಬಟ್ಟೆ ಹೊದಿಸಿ ಪೂಜೆ ,ನಮಾಜ್ ಮಾಡಲು ಅವಕಾಶ ನೀಡುವಂತೆ ಪಟ್ಟು ಹಿಡಿದಿದ್ದಾರೆ.
ಬೇಡಿಕೆಗಳನ್ನು ಈಡೇರಿಸದಿದ್ದರೆ ರಾಜ್ಯ ಸರ್ಕಾರ , ಜಿಲ್ಲಾಡಳಿತದ ವಿರುದ್ಧ ನಾಳೆ ವಿವಾದಿತ ಸ್ಥಳದಲ್ಲಿ ಪ್ರತಿಭಟನೆ ನಡೆಸುವ ಸಾಧ್ಯತೆಯಿದೆ.