Advertisement
ಜಿಲ್ಲೆಯ ಪಾವಗಡ ತಾಲೂಕು ರ‍್ರಮ್ಮನಹಳ್ಳಿ ನ್ಯಾಯ ಬೆಲೆ ಅಂಗಡಿಯ ಅಕ್ಕಿಯಲ್ಲಿ ಯೂರಿಯ ಪ್ರಕರಣ ಮಾಸುವ ಮುನ್ನವೇ ಕುಣಿಗಲ್ ತಾಲೂಕಿನ ಅಮೃತೂರಿನಲ್ಲಿ ಇಂತದ್ದೇ ಒಂದು ಘಟನೆ ನಡೆದಿದ್ದು, ಪಡಿತದಾರರ ಆತಂಕಕ್ಕೆ ಕಾರಣವಾಗಿದೆ.
Related Articles
Advertisement
ಗ್ರಾಹಕರಿಂದ ವಾಪಸ್ ಪಡೆದ ಅಕ್ಕಿ : ಅಕ್ಕಿಯಲ್ಲಿ ಯೂರಿಯ ಇರುವುದು ಪತ್ತೆಯಾಗುತ್ತಿರುವ ವಿಚಾರ ತಿಳಿಯುತ್ತಿದಂತೆ ಎಚ್ಚೆತುಕೊಂಡ ಆಹಾರ ಇಲಾಖೆಯ ಪ್ರಭಾರ ಶಿರಸ್ತೇದಾರ್ ಸಚಿನ್ ಸ್ಥಳಕ್ಕೆ ದೌಡಾಯಿಸಿ, ಸೋಮವಾರ ಎಷ್ಟು ಮಂದಿಗೆ ಅಕ್ಕಿ ವಿತರಣೆಯಾಗಿದೆ ಎಂಬ ಮಾಹಿತಿಯನ್ನು ನ್ಯಾಯ ಬೆಲೆ ಅಂಗಡಿ ಮಾಲೀಕರಿಂದ ಪಡೆದುಕೊಂಡು ಪಡಿತದಾರರ ಮನೆಗೆ ಖುದ್ದು ಬೇಟಿ ನೀಡಿ ವಿತರಣೆ ಮಾಡಲಾಗಿದ್ದ ಅಕ್ಕಿಯನ್ನು ಪಡಿತದಾರರಿಂದ ವಾಪಸ್ಸ್ ಪಡೆದು ಬೇರೆ ಅಕ್ಕಿಯನ್ನು ನೀಡಿದ್ದಾರೆ, ಬಳಿಕ ಅಧಿಕಾರಿಗಳು ಖುದ್ದು ನ್ಯಾಯ ಬೆಲೆ ಅಂಗಡಿ ಬಳಿ ಇದ್ದು ಪ್ರತಿಯೊಂದು ಚೀಲವನ್ನು ತೆರೆದು ಅಕ್ಕಿಯನ್ನು ಪರಿಶೀಲಿಸಿದ ಬಳಿಕ ಅಕ್ಕಿ ವಿತರಣೆಗೆ ಕ್ರಮಕೈಗೊಂಡಿದ್ದಾರೆ.
ಸತ್ತೋದರೆ ಗತಿ ಏನು : ಕೂಲಿ, ನಾಲಿ ಮಾಡಿಕೊಂಡು ಜೀವನ ಮಾಡೋಣ, ಇದನ್ನು ತಿಂದ್ದು ಸತ್ತರೇ ನಮ್ಮ ಗತಿ ಏನು ಎಂದು ಪಡಿತದಾರರು ನ್ಯಾಯ ಬೆಲೆ ಅಂಗಡಿ ಮುಂದೆ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
” ರೇಣುಕಾ ನ್ಯಾಯ ಬೆಲೆ ಅಂಗಡಿಯಿಂದ 60 ಮಂದಿ ಪಡಿತದಾರರಿಗೆ ಅಕ್ಕಿ ವಿತರಣೆ ಮಾಡಲಾಗಿದೆ, ಈ ಪೈಕಿ ಕೆಲ ಮಂದಿ ಪಡಿತದಾರರಿಗೆ ಯೂರಿಯ ಮಿಶ್ರಿತ ಇರುವ ಅಕ್ಕಿಯನ್ನು ವಿತರಣೆ ಮಾಡಲಾಗಿದೆ, ಅಧಿಕಾರಿಗಳು ಮನೆ ಮನೆಗೆ ಖುದ್ದು ಬೇಟಿ ನೀಡಿ ಪರಿಶೀಲಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ, ಅಕ್ಕಿ ಚೀಲದಲ್ಲಿ ಯೂರಿಯ ಯಾವ ರೀತಿ ಬಂದಿದೆ ಎಂಬುದರ ಬಗ್ಗೆ ತನಿಖೆಗೆ ಮಾಡಲಾಗುವುದು”– ಮಹಬಲೇಶ್ವರ ತಹಶೀಲ್ದಾರ್ ” ಅಕ್ಕಿ ಯೂರಿಯ ಹಾಗೂ ಇತರೆ ವಸ್ತುಗಳು ರೈಲ್ವೆ ಬೋಗಿಯಲ್ಲಿ ಸರಬರಾಜು ಆಗುತ್ತಿರುತ್ತದೆ, ಆ ವೇಳೆ ಅಮಾಲೀಗಳು ಚೀಲಗಳಿಗೆ ಅಕ್ಕಿ ತುಂಬವ ವೇಳೆ, ಯೂರಿಯ ತುಂಬಿರ ಬಹುದು ಎಂಬದು ಸಂಶಯ ಇದೆ, ಈ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ”
– ಸಚಿನ್, ಪ್ರಭಾರ ಆಹಾರ ಶಿರಸ್ತೇದಾರ್