ಬಾಗಿಲು ತೆರೆಯಿತು
ಶಾಲೆಯ ಬಾಗಿಲು ಮಾತ್ರ ಮುಚ್ಚಿದ್ದು ಶಾಲೆಯ ಹಳೆ ವಿದ್ಯಾರ್ಥಿಗಳ, ಎಸ್.ಡಿ.ಎಂ.ಸಿ. ಅಧ್ಯಕ್ಷ ಅಬ್ದುಲ್ ಅಜೀಜ್, ಸದಸ್ಯರ ಮನಸ್ಸು ಮುಚ್ಚಿರಲಿಲ್ಲ. ಇವರೆಲ್ಲಾ ಶಾಲಾವರಣದಲ್ಲಿ ಒಟ್ಟಾಗಿ ಶಾಲೆ ತೆರೆಯುವ ಬಗ್ಗೆ ಚಿಂತಿಸಿದರು. ಮನೆ ಮನೆಗೆ ತೆರಳಿ ಶಾಲೆಯನ್ನು ಪುನ: ತೆರೆಯುತ್ತಿದ್ದೇವೆ; ತಮ್ಮ ಮಕ್ಕಳನ್ನು ನಮ್ಮ ಶಾಲೆಗೇ ಸೇರಿಸಿ ಎಂದು ವಿನಂತಿಸಿದರು. ಶಾಲೆಯ ಮೂಲ ಅವಶ್ಯಕತೆಗಳಿಗಾಗಿ ಹಣಕಾಸಿಗೆ ಚರ್ಚಿಸಿದರು. ಹೆತ್ತವರ ಮನವೊಲಿಸುವಲ್ಲಿ ಹಳೆ ವಿದ್ಯಾರ್ಥಿಗಳು ಎಸ್.ಡಿ.ಎಂ.ಸಿ.ಯವರು ಯಶಸ್ವಿಯಾದರು. ಮುಂದಿನ ಶೈಕ್ಷಣಿಕ ವರ್ಷದಲ್ಲೇ ಶಾಲೆಯ ಬಾಗಿಲು ತೆರೆಯಿತು!
Advertisement
ವಿದೇಶದಲ್ಲೂ ಸಭೆಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಲಾಲಾ ಅನ್ವರ್ ಊರು ಹಾಗೂ ವಿದೇಶದಲ್ಲಿರುವ ಹಳೆ ವಿದ್ಯಾರ್ಥಿಗಳ ಜತೆ ಸಂವಾದ ನಡೆಸಿದ ಫಲವಾಗಿ ಪ್ರಸ್ತುತ ಬಸೂÅರಿನ ಉರ್ದು ಶಾಲೆಗೀಗ 2 ಲಕ್ಷ ರೂ. ವೆಚ್ಚದ ಶಾಲಾ ಬಸ್ ಮಕ್ಕಳ ಸಂಚಾರಕ್ಕಾಗಿಯೇ ಮೀಸಲಿರಿಸಲಾಗಿದೆ. ಪೂರ್ವ ಪ್ರಾ. ಶಾಲಾ ವಿದ್ಯಾರ್ಥಿಗಳ ಸಂಚಾರಕ್ಕಾಗಿ 55 ಸಾವಿರ ರೂ. ವೆಚ್ಚದಲ್ಲಿ ಕಾರಿನ ವ್ಯವಸ್ಥೆ ಮಾಡಲಾಯಿತು.
ಶಾಲೆಯ ಪುನಶ್ಚೇತನ ಕಾರ್ಯ ಇಷ್ಟಕ್ಕೇ ನಿಂತಿಲ್ಲ. ಪೂರ್ವ ಪ್ರಾಥಮಿಕ ಶಾಲೆಯ “ಆಯಾ’ರ ವೇತನಕ್ಕಾಗಿ ರೂ. 30,000, ಮಕ್ಕಳ ಸಂಖ್ಯೆ ಹೆಚ್ಚಾದಾಗ ಶಿಕ್ಷಕರ ಕೊರತೆಯಾಗದಂತೆ ಗೌರವ ಶಿಕ್ಷಕರಿಗೆ ರೂ. 70,000 ಹಣವನ್ನು ಹಳೆ ವಿದ್ಯಾರ್ಥಿಗಳು, ಎಸ್. ಡಿ.ಎಂ.ಸಿ.ಯವರು ಹೊಂದಿಸಿದ್ದಾರೆ. ಇದೆಲ್ಲ ಶಾಲೆಯ ಏಳಿಗೆಗೆ ಕಾರಣವಾಗಿ ಮಕ್ಕಳಿಲ್ಲದೇ ಮುಚ್ಚಲಾಗಿದ್ದ ಈ ಉರ್ದು ಶಾಲೆಯಲ್ಲೀಗ ಮಕ್ಕಳ ಕಲರವ ರಿಂಗಿಣಿಸುತ್ತದೆ! ಶಾಲೆಯಲ್ಲಿ ನಾಲ್ವರು ಶಿಕ್ಷಕರ ಜತೆಗೆ ಮೂವರು ಗೌರವ ಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ದಾನಿಗಳ ನೆರವು
ಕೊಠಡಿಗಾಗಿ ದಾನಿಯೊಬ್ಬರ ಸ್ಥಳದಾನದಿಂದ 3 ಕೊಠಡಿಗಳನ್ನು ಕಟ್ಟಲಾಯಿತು. ದಾನಿಗಳಿಂದಾಗಿ ರೂ. 25,000 ವೆಚ್ಚದಲ್ಲಿ ಧ್ವನಿವಧìಕ ಖರೀದಿಸಲಾಯಿತು. ವಿದ್ಯುತ್ ಮೋಟಾರ್, ಪ್ರತ್ಯೇಕ ಶೌಚಾಲಯ, ನೀರಿನ ಟ್ಯಾಂಕ್‌ಗಳು, ನೆಲಕ್ಕೆ ಟೈಲ್ಸ್, ಮಕ್ಕಳಿಗೆ ಊಟಕ್ಕೆ ಕುಳಿತುಕೊಳ್ಳಲು ನೆಲದ ಮೇಲಿನ ಹಾಸು ಮತ್ತು ತಿಂಗಳಿಗೊಮ್ಮೆ ಹೆತ್ತವರಿಗೆ ಮಕ್ಕಳ ಜತೆ ವಿಶೇಷ ಭೋಜನ ವ್ಯವಸ್ಥೆಯನ್ನೂ ಮಾಡಲಾಗಿದ್ದು ಶಾಲೆಯೀಗ ಹೊಸ ಕಳೆಯಿಂದ ಕಂಗೊಳಿಸುತ್ತಿದೆ! ಶಾಲಾ ವಾಹನ ಮತ್ತಿತರ ಕಾರ್ಯಗಳಿಗಾಗಿ ಒಟ್ಟು ರೂ. 3.55 ಲಕ್ಷ ಹಣವನ್ನು ಶಾಲೆಯ ಏಳಿಗೆಗಾಗಿ ವ್ಯಯಿಸಲಾಗುತ್ತಿದೆ.
Related Articles
ಬಸ್ರೂರಿನ ಉರ್ದು ಶಾಲೆಯ ಕಟ್ಟಡ ಬೀಳುತ್ತಿದೆ ಎಂದು 2 ವರ್ಷಗಳ ಹಿಂದೆ ಅನೇಕ ಬಾರಿ ಜನ ಪ್ರತಿನಿಧಿಗಳಿಗೆ ಮನವಿ ಮಾಡಲಾಗಿತ್ತಾದರೂ ಪ್ರಯೋಜನವಾಗಿರಲಿಲ್ಲ. ಸ್ಥಳೀಯ ಗ್ರಾ.ಪಂ.ನವರು ಶಾಲೆಯ ಮಾಡು ಬೀಳದಂತೆ ತುರ್ತು ಸಹಾಯವನ್ನು ಮಾತ್ರ ಒಮ್ಮೆ ಮಾಡಿದ್ದರು. ಬೀಳುತ್ತಿರುವ ಕಟ್ಟಡದ ಬಗ್ಗೆ ಪತ್ರಿಕೆಯಲ್ಲಿಯೂ ಸಚಿತ್ರ ವರದಿಯೂ ಪ್ರಕಟವಾಗಿತ್ತು.ಅನೇಕ ದಿನಗಳ ಅನಂತರ ಸರಕಾರದಿಂದ ನೂತನ ಕಟ್ಟಡ ಮಂಜೂರಾಗಿ ಹೊಸ ಕಟ್ಟಡದ ರಚನೆಯೂ ಆಯಿತು. ಇಲಾಖೆಯ ಜತೆಗೆ ದಾನಿಗಳ ನೆರವಿನಿಂದ ಶಾಲೆಯೀಗ ಯಾವುದೇ ಆಂಗ್ಲ ಮಾಧ್ಯಮ ಶಾಲೆಗಿಂತ ಕಡಿಮೆಯಿಲ್ಲದ ಶಾಲೆಯಾಗಿ ರೂಪುಗೊಂಡಿದೆ.
Advertisement
ಸರ್ವರ ಸಹಕಾರಹಳೆವಿದ್ಯಾರ್ಥಿಗಳು, ಶಿಕ್ಷಕರು, ಎಸ್.ಡಿ. ಎಂ.ಸಿ. ಸದಸ್ಯರು ಮಾತ್ರವಲ್ಲದೆ ಊರ ಶಿಕ್ಷಣಾಭಿಮಾನಿಗಳು ಹೆಗಲು ಕೊಡುತ್ತಿದ್ದಾರೆ. ಇವರೆಲ್ಲರ ಸಹಕಾರದಿಂದ ಶಾಲೆಯ ಸರ್ವತೋಮುಖ ಏಳಿಗೆಯಾಯಿತು.
– ಅಬ್ದುಲ್ ಅಜೀಜ್,ಎಸ್.ಡಿ.ಎಂ.ಸಿ. ಅಧ್ಯಕ್ಷ ಇಲಾಖೆಯೂ ಸ್ಪಂದಿಸಿದೆ
ಬಸ್ರೂರಿನ ಉರ್ದು ಶಾಲೆಯ ಉಳಿವಿಗೆ ಶಿಕ್ಷಣ ಇಲಾಖೆಯೂ ಸಹಕರಿಸುತ್ತಿದ್ದು ಮಕ್ಕಳಿಗೆ ಸಮವಸ್ತ್ರ, ಶೂ, ಮಧ್ಯಾಹ್ನದ ಬಿಸಿಯೂಟ, ವಿದ್ಯಾರ್ಥಿ ವೇತನ, ಬೆಳಗ್ಗೆ ಕುಡಿಯಲು ಹಾಲು ಮತ್ತಿತರ ಸೌಕರ್ಯಗಳನ್ನು ನೀಡಿದ್ದು ಶಾಲೆಯನ್ನು ಉತ್ತಮ ರೀತಿಯಲ್ಲಿ ರೂಪುಗೊಳಿಸಲು ಸಹಕಾರವಾಯಿತು.
– ಲಾಲಾ ಅನ್ವರ್,
ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ – ದಯಾನಂದ ಬಳ್ಕೂರು