Advertisement
ಕೆಎಸ್‌ಆರ್‌ಟಿಸಿ ಪುತ್ತೂರು ವಿಭಾಗ ವ್ಯಾಪ್ತಿಯ ಸುಳ್ಯದಲ್ಲಿ 3.5 ಕೋ.ರೂ.ವೆಚ್ಚದ ನೂತನ ಘಟಕ ಉದ್ಘಾಟನೆ ಸಮಾ ರಂಭದಲ್ಲಿ ಅವರು ಮಾತನಾಡಿದರು. ಸಭಾ ಕಾರ್ಯಕ್ರಮದಲ್ಲಿ ವಿಷಯ ಪ್ರಸ್ತಾಪಿಸಿದ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ, ಕಡಬ ತಾಲೂಕು ಕೇಂದ್ರವಾಗಿ ಘೋಷಣೆಯಾಗಿದ್ದು, ಅಲ್ಲಿಗೆ ಹೊಸ ಬಸ್ ನಿಲ್ದಾಣ, ನೆಲ್ಯಾಡಿಯಲ್ಲಿ ಬಸ್ ನಿಲ್ದಾಣ ಇದ್ದು, ಕೆಎಸ್‌ಆರ್‌ಟಿಸಿ ಬಸ್ ಪ್ರವೇಶ ಕಲ್ಪಿಸಲು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.
ನಗರ ಸಾರಿಗೆ ಬಸ್
ಪುತ್ತೂರು ವಿಭಾಗ ಕೇಂದ್ರಕ್ಕೆ ನಗರ ಸಾರಿಗೆ ಬಸ್ ಬಾರದಿರುವ ಬಗ್ಗೆ ಉಲ್ಲೇಖೀಸಿದ ಸಚಿವರು, ಬಿಎಸ್3, ಬಿಎಸ್4 ನಿಯಮದಿಂದ ಬಸ್ ಬರಲು ವಿಳಂಬವಾಗಿದೆ. ಆಗಸ್ಟ್ ಕೊನೆ ಯೊಳಗೆ ಇಲ್ಲಿಗೆ ನಗರ ಸಾರಿಗೆ ಬಸ್ ಒದಗಿಸಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದರು.
Related Articles
Advertisement
ಸುಬ್ರಹ್ಮಣ್ಯಕ್ಕೆ ಹೊಸ ಘಟಕಕ.ರಾ.ರ.ಸಾ. ನಿಗಮ ಅಧ್ಯಕ್ಷ ಕೆ. ಗೋಪಾಲ ಪೂಜಾರಿ ಮಾತನಾಡಿ, ಸುಬ್ರಹ್ಮಣ್ಯಕ್ಕೆ ನೂತನ ಬಸ್ ಘಟಕ ನಿರ್ಮಿಸುವ ಪ್ರಸ್ತಾಪವಿದ್ದು, ಅಲ್ಲಿ ಜಾಗದ ಕೊರತೆ ಎದುರಾಗಿದೆ. ಅರಣ್ಯ ಸಚಿವರಿಗೆ ಮನವಿ ಮಾಡಲಾಗಿದ್ದು, ಅವರು ಜಾಗದ ವ್ಯವಸ್ಥೆ ಮಾಡಿಕೊಟ್ಟ ತತ್‌ಕ್ಷಣವೇ ಅಲ್ಲಿ ಘಟಕ ನಿರ್ಮಾಣಕ್ಕೆ ಚಾಲನೆ ನೀಡಲಾಗುವುದು ಎಂದರು.ಈ ವರ್ಷದ ಡಿಸೆಂಬರ್‌ಗೆ ಮೊದಲು ಕಡಬ, ಕಾರ್ಕಳ, ಬೈಂದೂರಿನಲ್ಲಿ ಹೊಸ ಬಸ್ ನಿಲ್ದಾಣ ಹಾಗೂ ಘಟಕ ನಿರ್ಮಾಣದ ಪ್ರಕ್ರಿಯೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು. ವಿವಿಧ ಕಾಮಗಾರಿ ಉದ್ಘಾಟನೆ
ಇದೇ ಸಂದರ್ಭ 1 ಕೋ.ರೂ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ 11 ವಸತಿ ಗೃಹಕ್ಕೆ ಸಚಿವ ರಮಾನಾಥ ರೈ ಶಿಲಾನ್ಯಾಸ ನೆರವೇರಿಸಿದರು. ಐದು ಹೊಸ ರೂಟ್‌ಗಳಲ್ಲಿ ಸಂಚರಿಸುವ ಬಸ್‌ಗಳನ್ನು ಶಾಸಕ ಅಂಗಾರ, ಶಕುಂತಳಾ ಟಿ. ಶೆಟ್ಟಿ ಹಾಗೂ ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಉದ್ಘಾಟಿಸಿದರು. ಕೇರಳ ಚೆಂಡೆ ವಾದನದ ಮೂಲಕ ಅತಿಥಿಗಳನ್ನು ಸ್ವಾಗತಿಸಲಾಯಿತು. ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿ ಗೋಡು, ಶಾಸಕಿ ಶಕುಂತಳಾ ಟಿ ಶೆಟ್ಟಿ, ಸುಳ್ಯ ನ.ಪಂ.ಅಧ್ಯಕ್ಷೆ ಶೀಲಾವತಿ ಮಾಧವ, ತಾ.ಪಂ. ಅಧ್ಯಕ್ಷ ಚನಿಯ ಕಲ್ತಡ್ಕ, ವಾರ್ಡ್ ಸದಸ್ಯ ಎನ್.ಎ. ರಾಮಚಂದ್ರ, ಜಿ.ಪಂ. ಸದಸ್ಯರಾದ ಎಸ್.ಎನ್. ಮನ್ಮಥ, ಪುಷ್ಪಲತಾ ಬಾಳಿಲ, ಹರೀಶ್ ಕಂಜಿಪಿಲಿ, ಪಿ.ಪಿ. ವರ್ಗಿಸ್, ಪ್ರಮೀಳಾ ಜನಾರ್ದನ, ಮಂಡಳಿ ನಿರ್ದೇಶಕರಾದ ರಮೇಶ್ ಶೆಟ್ಟಿ, ಟಿ.ಕೆ. ಸುಧೀರ್. ಶೌಕತ್ ಆಲಿ, ಸಾರಿಗೆ ಇಲಾಖೆಯ ಜಗದೀಶ್ಚಂದ್ರ, ಪುತ್ತೂರು ವಿಭಾಗೀಯ ನಿಯಂತ್ರಣಾಧಿಕಾರಿ ನಾಗರಾಜ ಶಿರಾಲಿ
ಮೊದಲಾದವರು ಉಪಸ್ಥಿತರಿದ್ದರು. ಉಮೇಶ್ ವಾಗ್ಲೆಗೆ ಶ್ಲಾಘನೆ
ನೂತನ ಬಸ್ ಘಟಕ ಹಾಗೂ ಬಸ್ ನಿಲ್ದಾಣ ನಿರ್ಮಾಣಕ್ಕೆ ಸ್ಥಳದ ಕಾನೂನು ಹೋರಾಟಕ್ಕೆ ಸಂಬಂಧಿಸಿ ಹತ್ತಾರು ವರ್ಷಗಳಿಂದ ಯಾರಿಂದಲೂ ಫಲಾಪೇಕ್ಷೆ ಬಯಸದೆ ಹೋರಾಟ ನಡೆಸಿ ಯಶಸ್ವಿಯಾದ ಉಮೇಶ್ ವಾಗ್ಲೆ ಅವರ ಶ್ರಮವನ್ನು ಶಾಸಕ ಎಸ್. ಅಂಗಾರ ಉಲ್ಲೇಖೀಸಿದರು. ಸಚಿವ ರಾಮಲಿಂಗಾ ರೆಡ್ಡಿ ತನ್ನ ಭಾಷಣದಲ್ಲಿ ಈ ವಿಷಯ ಪ್ರಸ್ತಾಪಿಸಿ, ಉಮೇಶ್ ವಾಗ್ಲೆ ಅವರ ಕಾರ್ಯವನ್ನು ಶ್ಲಾಘಿಸಿದರು. ಸಮಾರಂಭದಲ್ಲಿ ಉಮೇಶ್ ವಾಗ್ಲೆ ಅವರನ್ನು ಸಚಿವರು ಸಮ್ಮಾನಿಸಿದರು. ಉತ್ತಮ ಕಾಮಗಾರಿ ನಿರ್ವಹಿಸಿದ ಗುತ್ತಿಗೆದಾರ ಸುಧೀರ್ ಕುಮಾರ್ ಶೆಟ್ಟಿ ಅವರನ್ನು ಸಮ್ಮಾನಿಸಲಾಯಿತು.