ಉಳ್ಳಾಲ: ರಾಜ್ಯದಲ್ಲೇ ಅತ್ಯುತ್ತಮ ನಗರಸಭೆಯಾಗಿ ಉಳ್ಳಾಲ ಬದಲಾಗುತ್ತಿದ್ದು, ಒಂದು ವರ್ಷದಲ್ಲಿ ಶಾಸಕರ ನಿಧಿಯಿಂದ ಎರಡು ಕೋಟಿ ರೂ. ಅಲ್ಲದೆ 25 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ನಗರ ಮಟ್ಟದ ಸಂಪೂರ್ಣ ಸವಲತ್ತು ಉಳ್ಳಾಲದ ಜನತೆಗೆ ಮುಂದಿನ ದಿನಗಳಲ್ಲಿ ಸಿಗಲಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ. ಖಾದರ್ ಅಭಿಪ್ರಾಯಪಟ್ಟರು.ಉಳ್ಳಾಲ ಬೈಲಿನ ಮುಖ್ಯ ರಸ್ತೆಯಿಂದ ಉಳ್ಳಾಲಬೈಲು ಶ್ರೀ ವೈದ್ಯನಾಥ ದೇವಸ್ಥಾನ ಸಂಪರ್ಕಿಸುವ ನೂತನ ಕಾಂಕ್ರೀಟ್ ರಸ್ತೆ ಉದ್ಘಾಟಿಸಿ ಮಾತನಾಡಿದರು.
ಅಭಿವೃದ್ಧಿಗೆ ಹೆಚ್ಚಿನ ಒತ್ತು
ಉಳ್ಳಾಲ ಪ್ರದೇಶದ ಪ್ರಮುಖ ರಸ್ತೆ ಸಹಿತ ಒಳರಸ್ತೆಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಈ ರಸ್ತೆ ಅಭಿವೃದ್ಧಿಯಾಗುತ್ತಿದಂತೆ ಜನವರಿ ಮೊದಲ ವಾರದಲ್ಲಿ ದೈವಸ್ಥಾನದಿಂದ ಧರ್ಮನಗರ ಸಂಪರ್ಕಿಸುವ ರಸ್ತೆಗೆ 17 ಲಕ್ಷ ರೂ. ವೆಚ್ಚದಿಂದ ಕಾಂಕ್ರೀಟ್ ಹಾಕಲಾಗುವುದು. ಮುಖ್ಯ ರಸ್ತೆಯನ್ನು ರಾಜಮಾರ್ಗವಾಗಿ ಮಾರ್ಪಾಡು ಮಾಡಲು ಐದು ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ನಡೆಯಲಿದ್ದು, ಕೋಟೆಪುರ ರಸ್ತೆ, ಪ್ಯಾರಿಸ್ ಜಂಕ್ಷನ್ ರಸ್ತೆ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದರು. ಉಳ್ಳಾಲ ಬೈಲು ಶ್ರೀ ವೈದ್ಯನಾಥ ದೇವಸ್ಥಾನದ ಪ್ರಧಾನ ಅರ್ಚಕ ದಾಮೋದರ ಪೂಜಾರಿ ನೂತನ ರಸ್ತೆ ಉದ್ಘಾಟನೆಯ ಧಾರ್ಮಿಕ ವಿಧಿ ನೆರವೇರಿಸಿದರು.
ಉಳ್ಳಾಲ ನಗರಸಭಾ ಅಧ್ಯಕ್ಷ ಹುಸೈನ್ ಕುಂಞಿಮೋನು, ಸ್ಥಾಯೀ ಸಮಿತಿ ಅಧ್ಯಕ್ಷ ಉಸ್ಮಾನ್ ಕಲ್ಲಾಪು, ಸದಸ್ಯರಾದ ಬಾಝಿಲ್ ಡಿ’ಸೋಜಾ, ರವಿ ಗಾಂಧಿನಗರ, ಕಿಶೋರ್ ತೊಕ್ಕೊಟ್ಟು, ರಿಚಾರ್ಡ್ ಉಳ್ಳಾಲ, ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಸುರೇಶ್ ಭಟ್ನಗರ, ದಿನೇಶ್ ಕುಂಪಲ ಮುಖಂಡರಾದ ಮನೋಜ್ ಉಳ್ಳಾಲಬೈಲು, ಹರೀಶ್ ಉಳ್ಳಾಲಬೈಲು, ಶ್ರೀನಿವಾಸ್ ಸುಳಾಯ, ಜಗದೀಶ್ ಸುಳಾಯ, ಬಾಬು ಉಳ್ಳಾಲ ಬೈಲ್, ಲಿಖೀತ್ ಪೂಜಾರಿ, ಸುಮಂತ್ ಪೂಜಾರಿ, ಜಗದೀಶ್ ಭಂಡಾರ ಮನೆ, ತುಕರಾಮ್ ಉಳ್ಳಾಲಬೈಲು, ರಾಜೇಶ್ ಕುಂಪಲ, ಪದ್ಮನಾಭ ಉಳ್ಳಾಲಬೈಲು, ರಾಜೇಶ್ ಭಂಡಸಾಲೆ, ಸಿರಾಜ್ ಕಿನ್ಯಾ, ಸೇವಾ ದಳದ ಸಂಚಾಲಕ ನಾಗೇಶ್ ತೊಕ್ಕೊಟ್ಟು, ವಾಝಿ ಉಳ್ಳಾಲಬೈಲು ಉಪಸ್ಥಿತರಿದ್ದರು.