Advertisement
ಎಲ್ಲೋ ಕೆಲವು ಕಡೆಗಳಲ್ಲಿ ಮಾತ್ರ ಇಂಥ ಪ್ಲಾಸ್ಟಿಕ್ ಮರು ಬಳಕೆಯ ಚಿಂತನೆಗಳು ನಡೆಯುತ್ತಿವೆ. ನಗರ ಅಭಿವೃದ್ಧಿ, ಸೌಂದರ್ಯದ ದೃಷ್ಟಿಯಿಂದಲೂ ಪ್ಲಾಸ್ಟಿಕ್ ಮರು ಬಳಕೆ ಮಾಡಿದರೆ ಬಹುತೇಕ ತ್ಯಾಜ್ಯ ಸಮಸ್ಯೆ ನಿವಾರಣೆಯಾದಂತೆಯೇ ಸರಿ. ಪ್ಲಾಸ್ಟಿಕ್ ಕವರ್ ಗಳನ್ನಾದರೆ ಸುಟ್ಟು ಹಾಕಬಹುದು ಅಥವಾ ಮರು ಬಳಕೆ ಮಾಡಬಹುದು. ಆದರೆ ಪ್ಲಾಸ್ಟಿಕ್ ಬಾಟಲಿಗಳು ವ್ಯರ್ಥವಾಗಿ ಪರಿಸರ ಸೇರುತ್ತದೆ. ಒಂದು ವರದಿಯಂತೆ ಜಗತ್ತಿನಲ್ಲಿ ವರ್ಷಕ್ಕೆ ಸುಮಾರು 50 ಬಿಲಿಯನ್ ಪ್ಲಾಸ್ಟಿಕ್ ಬಾಟಲಿಗಳು ಉತ್ಪಾದನೆಯಾಗುತ್ತಿವೆ. ಪ್ಲಾಸ್ಟಿಕ್ ಬಾಟಲಿ ಬಳಕೆ ನರವ್ಯೂಹ ಹಾಗೂ ಕ್ಯಾನ್ಸರ್ ನಂತ ಆಪಾಯಕಾರಿ ರೋಗಗಳನ್ನು ತಂದೊಡ್ಡುತ್ತಿದ್ದರೂ ಬಳಕೆ ಮಾಡುವುದು ಕಡಿಮೆಯಾಗಿಲ್ಲ.
ಪ್ಲಾಸ್ಟಿಕ್ ಮರು ಬಳಕೆಯತ್ತ ಹಲವು ಚಿಂತನೆಗಳು ನಡೆಯುತ್ತಿದ್ದರೂ ನಗರದ ಅಭಿವೃದ್ಧಿ ಮತ್ತು ಸೌಂದರ್ಯ ವರ್ಧನೆಯಲ್ಲಿ ಇದರ ಬಳಕೆ ಬಹಳ ಕಡಿಮೆ. ಉತ್ಪಾದಿಸಿದ ಮತ್ತು ಬಳಕೆ ಮಾಡಿದ ಪ್ಲಾಸ್ಟಿಕ್ ಅನ್ನು ಪರಿಸರ ಸ್ನೇಹಿಗೊಳಿಸಿದರೆ ಇದರ ಸಾಕಷ್ಟು ಪ್ರಯೋಜನ ಎಲ್ಲರಿಗೂ ಸಿಗುವುದು. ಅಷ್ಟೇ ಅಲ್ಲ ಸಿಸಾಕೆಟ್ ಪ್ರಾಂತ್ಯದ ಕಾಂಬೋಡಿಯಾ ಗಡಿಯಲ್ಲಿ ಪ್ಲಾಸ್ಟಿಕ್ ಬಾಟಲಿಗಳಿಂದ ನಿರ್ಮಾಣಗೊಂಡಿರುವ ಬಾಟಲಿ ಟೆಂಪಲ್ ಜಗದ್ವಿಖ್ಯಾತವಾಗಿದೆ. ಸಾಕಷ್ಟು ಪ್ರವಾಸಿಗರನ್ನೂ ಆಕರ್ಷಿಸುತ್ತಿವೆ. ಇನ್ನು ಕೆಲವು ದೇಶಗಳಲ್ಲಿ ಪ್ಲಾಸ್ಟಿಕ್ ಬಾಟಲಿಗಳಿಂದ ಸಾರ್ವಜನಿಕ ಉದ್ಯಾನವನ, ರೋಡ್ ಡಿವೈಡರ್ ಗಳನ್ನು ಆಕರ್ಷಕಗೊಳಿಸಲು ಬಳಸಲಾಗುತ್ತಿದೆ.
Related Articles
Advertisement
ರಸ್ತೆಯ ಡಿವೈಡರ್ ನಲ್ಲಿ ಹೂಗಿಡಗಳನ್ನು ನೆಡಲು, ಉದ್ಯಾನ ವನಗಳನ್ನು ಸುಂದರಗೊಳಿಸಲು ಮರು ಬಳಕೆ ಮಾಡಬಹುದು. ಇದು ಪ್ರವಾಸಿಗರನ್ನು ತನ್ನತ್ತ ಸೆಳೆಯುವುದು ಮಾತ್ರವಲ್ಲ ಇದರಿಂದ ತ್ಯಾಜ್ಯವೊಂದನ್ನು ಸಂಪೂರ್ಣ ಮರು ಬಳಕೆ ಮಾಡಿದಂತಾಗುವುದು.
ನೈಜೀರಿಯಾ ಮಾದರಿಆಫ್ರಿಕಾ ಖಂಡದ ನೈಜೀರಿಯಾ ದೇಶದಲ್ಲಿ ಉತ್ಪಾದನೆಯಾಗುತ್ತಿದ್ದ ಪ್ಲಾಸ್ಟಿಕ್ ಬಾಟಲಿಗಳನ್ನು ಪರಿಸರ ಸ್ನೇಹಿಯನ್ನಾಗಿ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಈ ಪ್ಲಾಸ್ಟಿಕ್‌ಗಳನ್ನು ಮನೆ ನಿರ್ಮಾಣ ಕಾರ್ಯಕ್ಕೆ ಬಳಕೆ ಮಾಡುತ್ತಿದ್ದಾರೆ. ಏನಿಲ್ಲವಾದರೂ ಸುಮಾರು 3 ಮಿಲಿಯನ್ ಪ್ಲಾಸ್ಟಿಕ್ ಬಾಟಲಿಗಳಿಂದ ಮನೆಯ ಟೆರೇಸ್, ಪ್ರತ್ಯೇಕ ಕೊಠಡಿ, ಒಳಾಂಗಣವನ್ನು ಆಕರ್ಷಣೀಯಗೊಳಿಸಲು ಬಳಕೆ ಮಾಡಲಾಗುತ್ತಿದೆ. ಸುಮಾರು 17 ಮಿಲಿಯನ್ ಮನೆಗಳ ನಿರ್ಮಾಣಕ್ಕೆ ಪ್ಲಾಸ್ಟಿಕ್ ಬಾಟಲಿಗಳನ್ನು ಬಳಸಿಕೊಳ್ಳಲಾಗಿದೆ. ಈ ಪ್ಲಾಸ್ಟಿಕ್ ಬಾಟಲಿಯಿಂದ ನಿರ್ಮಾಣ ಮಾಡಿದ ಮನೆಗಳು ಪ್ರಾಣಿ ಹಾಗೂ ಮಾನವ ತ್ಯಾಜ್ಯದಿಂದ ಬಿಡುಗಡೆಯಾಗುವ ಮಿಥೇನ್, ಸೌರ ಶಕ್ತಿಯನ್ನೂ ನಿಯಂತ್ರಿಸುವುದರಿಂದಾಗಿ ಈ ಮನೆಗಳು ಕಾರ್ಬನ್ ಮುಕ್ತ ಮನೆಗಳಾಗುತ್ತವೆ. ಈ ಮಾದರಿಯ ಮನೆಗಳ ನಮ್ಮ ಮಂಗಳೂರಿಗೂ ಬಂದರೆ ಉತ್ತಮವಲ್ಲವೇ? ಶಿವ ಸ್ಥಾವರಮಠ