Advertisement
ತಾಲೂಕಿನ ಎಸ್. ಅಗ್ರಹಾರ ಕೆರೆಯಲ್ಲಿ ತುಂಬಿರುವ ಕೆ.ಸಿ.ವ್ಯಾಲಿ ನೀರನ್ನು ಕೋಡಿ ಮೂಲಕ ಹರಿಯಲು ಬಿಡದೆ ಕೆರೆ ಕಟ್ಟೆ ಮಧ್ಯ ಭಾಗದಲ್ಲಿರುವ ತೂಬಿನ ಮೂಲಕ ಹರಿಸಲು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಮುಂದಾಗಿದ್ದು, ಇದರಿಂದ ಎಸ್.ಅಗ್ರಹಾರ ಮತ್ತು ಸುತ್ತಮುತ್ತಲ ಗ್ರಾಮಗಳಿಗೆ ಅನ್ಯಾಯ ಮಾಡಿದಂತಾಗುತ್ತದೆ ಎಂದು ಗ್ರಾಮಸ್ಥರು ಆರೋಪಿಸಿದರು. ಎಸ್.ಅಗ್ರಹಾರ ಕೆರೆಗೆ ಕಳೆದ ಕೆಲವು ದಿನಗಳಿಂದ ನೀರು ಹರಿದು ಬರುತ್ತಿದ್ದು ಕೋಡಿ ಹರಿಯುವ ಹಂತಕ್ಕೆ ಬಂದಿದೆ. ಆದರೆ, ರಮೇಶ್ ಕುಮಾರ್ ತಮ್ಮ ಶ್ರೀನಿವಾಸಪುರ ಕ್ಷೇತ್ರಕ್ಕೆ ಕೊಂಡೊಯ್ಯಲು ಪೊಲೀಸರ ಬಂದೋಬಸ್ತ್ನಲ್ಲಿ ಕೆರೆಯ ತೂಬು ಗಳನ್ನು ಎರಡು ಭಾಗದಲ್ಲಿ ಕಿತ್ತು ನೀರು ಹರಿಯು ತೆ ಮಾಡಲಾಗಿದೆ ಎಂದು ಕಿಡಿಕಾರಿದ್ದಾರೆ.
ಹೋಗುವ ಅವಸರದಲ್ಲಿ ಇಲ್ಲಿನ ಜನರ ಕ್ಷೇಮವನ್ನು ಹಾಳು ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಎಸ್.ಅಗ್ರಹಾರ ಕೆರೆಯಲ್ಲಿ ಶೇ.50 ನೀರು ಉಳಿಸಿ ಉಳಿದ ನೀರನ್ನು ಮುಂದಿನ ಕೆರೆಗಳಿಗೆ ಬಿಡಲಾಗುತ್ತಿದೆ, ಕೆರೆಯ ಸಂಪೂರ್ಣ ನೀರನ್ನು ಕೆರೆ ತೂಬುಗಳಿಂದ ಬಿಡುವುದಿಲ್ಲ ಎಂದು ಸಣ್ಣ
ನೀರಾವರಿ ಇಲಾಖೆ ಕಾರ್ಯನಿರ್ವಾಹಕ ಎಂಜಿನೀಯರ್ ಸುರೇಶ್ ಕುಮಾರ್ ತಿಳಿಸಿದರು.