ಉಪ್ಪಿನಂಗಡಿ: ಸಹಕಾರಿ ವ್ಯಾವಸಾಯಿಕ ಸಂಘ ನಿಯಮಿತ ಉಪ್ಪಿನಂಗಡಿ ಇದರ ಅಮೃತ ಮಹೋತ್ಸವ ವರ್ಷಾಚರಣೆಯ ಅಂಗ ವಾಗಿ ವರ್ಷಪೂರ್ತಿ ನಡೆಯಲಿರುವ ಅಮೃತ ಸಂಗಮ ಕಾರ್ಯಕ್ರಮದ ಉದ್ಘಾಟನೆಯೊಂದಿಗೆ ಅಮೃತ ಸಂಗಮ ಗೋಷ್ಠಿ -ಕೃಷಿ ವಿಚಾರ ಸಂಗಮ ನಡೆಯಿತು.
ವಿಟ್ಲ ಕೇಂದ್ರೀಯ ತೋಟದ ಬೆಳೆಗಳ ಸಂಶೋಧನ ಸಂಸ್ಥೆಯ ವಿಜ್ಞಾನಿ ಡಾ| ಭವಿಷ್ಯ ಅಡಿಕೆಯೊಂದಿಗೆ ಬಹುಬೆಳೆ ಕೃಷಿ ಪದ್ಧತಿ ಮತ್ತು ಅದರ ನಿರ್ವಹಣೆ ಬಗ್ಗೆ ಸಂವಾದ ನಡೆಸಿ ಹೊಸ ತಳಿ ಬಳಕೆ, ಕೃಷಿಯನ್ನು ವೈಜ್ಞಾನಿಕವಾಗಿ ಮಾಡುವ ಬಗ್ಗೆ, ಅದರ ಪೋಷಣೆ ಮೊದಲಾದ ವಿಧಾನಗಳ ಬಗ್ಗೆ ಮಾಹಿತಿ ನೀಡಿದರು.
ಬೋರ್ಡೋ ದ್ರಾವಣ ತಯಾರಿಕೆ ಬಗ್ಗೆ ವಿಟ್ಲ ಕೇಂದ್ರೀಯ ತೋಟದ ಬೆಳೆಗಳ ಸಂಶೋಧನ ಸಂಸ್ಥೆಯ ತಾಂತ್ರಿಕ ಅಧಿಕಾರಿ ಪುರಂದರ ಸಿ. ಮಾಹಿತಿ ನೀಡುತ್ತಾ, ರಸಗೊಬ್ಬರವನ್ನು ಹಿತಮಿತದಲ್ಲಿ ಗಿಡಗಳಿಗೆ ನೀಡಬೇಕು. ಸಾವಯವ ಗೊಬ್ಬರ ಬಳಕೆಯಿಂದ ಗಿಡಗಳ ಬಾಳಿಕೆ ಹೆಚ್ಚು ಎಂದರು.
ಸಹಕಾರಿ ಸಂಘದ ನಿವೃತ್ತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಿವಾಕರ ರೈ ಅಧ್ಯಕ್ಷತೆ ವಹಿಸಿದ್ದರು. ಪ್ರವೀಣ್ ಆಳ್ವ ಸ್ವಾಗತಿಸಿ, ಶೋಭಾ ವಂದಿಸಿದರು. ಸುಬ್ಬಪ್ಪ ಕೈಕಂಬ ಕಾರ್ಯಕ್ರಮ ನಿರೂಪಿಸಿದರು.
ವಿಚಾರ ಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ಕೆ. ವಿ. ಪ್ರಸಾದ್, ಉಪಾಧ್ಯಕ್ಷ ಸುನಿಲ್ ದಡ್ಡು ಪ್ರಮುಖರಾದ ವಸಂತ ಪ್ರಭು, ಸದಾನಂದ ಕಾರ್‌ಕ್ಲಬ್, 34ನೇ ನೆಕ್ಕಿಲಾಡಿ ಸಿ.ಎ. ಬ್ಯಾಂಕ್ ನಿವೃತ್ತ ಕಾರ್ಯನಿರ್ವಣಾಧಿಕಾರಿ ಗೋಪಾಲ ಹೆಗ್ಡೆ, ನಿವೃತ್ತ ಪ್ರಾಂಶುಪಾಲ ಕೈಲಾರು ಸುಬ್ರಹ್ಮಣ್ಯ ಭಟ್, ಹರೀಶ ನಟ್ಟಿಬೈಲು ಮತ್ತಿತರರು ಉಪಸ್ಥಿತರಿದ್ದರು.