Advertisement

ಉಪ್ಪಾರ ಸಮಾಜಕ್ಕೆ ಮೀಸಲಾತಿ ಪಡೆಯಲು ಭಗೀರಥ ಯತ್ನ ಅವಶ್ಯ

12:37 PM Oct 30, 2017 | |

ಹುಬ್ಬಳ್ಳಿ: ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಹಿಂದುಳಿದಿರುವ ಉಪ್ಪಾರ ಸಮಾಜಕ್ಕೆ ಮೀಸಲಾತಿ ಕೊಡಿಸಲು ಎಲ್ಲ ಸಮಾಜ ಬಾಂಧವರು ಭಗೀರಥ ಪ್ರಯತ್ನ ಮಾಡಬೇಕು ಎಂದು ಶ್ರೀ ಪುರುಷೋತ್ತಮಾನಂದಪುರಿ ಸ್ವಾಮೀಜಿ ಹೇಳಿದರು.

Advertisement

ಗೋಕುಲ ರಸ್ತೆಯ ಸಾಮ್ರಾಟ್‌ ಹಾಲ್‌ ನಲ್ಲಿ ರವಿವಾರ ಡಿ.ವೈ. ಉಪ್ಪಾರ ಶೈಕ್ಷಣಿಕ ಮತ್ತು ಸಾಮಾಜಿಕ ಪ್ರತಿಷ್ಠಾನದ ವತಿಯಿಂದ ಆಯೋಜಿಸಿದ್ದ ಪ್ರತಿಭಾವಂತ ವಿದ್ಯಾರ್ಥಿಗಳ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಉಪ್ಪಾರ ಸಮಾಜಕ್ಕೆ ಮೀಸಲಾತಿ ಒದಗಿಸಲು ರಾಜ್ಯ ಹಾಗೂ ಕೇಂದ್ರ ಸರಕಾರಕ್ಕೆ ಆಗ್ರಹಿಸಬೇಕು ಎಂದು ಅಭಿಪ್ರಾಯಪಟ್ಟರು. ಉಪ್ಪಾರ ಸಮಾಜಕ್ಕೆ ದೊಡ್ಡ ಚರಿತ್ರೆಯಿದ್ದು, 13 ಜನ ಜಗದ್ಗುರುಗಳನ್ನು ಕಂಡ ಸಮಾಜ ನಮ್ಮದು.

ಬಾಂಧವರು ಯಾರೂ ಸಹ ಕೀಳರಿಮೆ ಹೊಂದುವ ಅವಶ್ಯಕತೆಯಿಲ್ಲ. ಸಮಾಜ ಬಾಂಧವರಿಗೆ ಯಾವುದೇ ಉಪ್ಪಾರ ಬಾಂಧವರು ಶ್ರಮದ ಮೂಲಕ ಸಾಧನೆ ಮಾಡುತ್ತಿದ್ದಾರೆ. ಸಾಧನೆ ಮೂಲಕ ಸಮಾಜಕ್ಕೆ ದೊಡ್ಡ ಶಕ್ತಿಯಾಗಿ ಬೆಳೆಯಬೇಕು.

ನಮ್ಮಲ್ಲಿ ಪ್ರತಿಭೆಗಳಿಗೆ ಕೊರತೆಯಿಲ್ಲ. ಸಮಾಜದ ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸುತ್ತಿರುವುದು ಶ್ಲಾಘನೀಯ. ಇಂಥ ಕಾರ್ಯಕ್ರಮಗಳ ಸಂಖ್ಯೆ ಹೆಚ್ಚಬೇಕು ಎಂದು ಹೇಳಿದರು. ಪಡೆದುಕೊಳ್ಳುವುದು ಹಾಗೂ ಕಳೆದುಕೊಳ್ಳುವುದು ನಾಲಿಗೆಯ ಕಾರಣದಿಂದಲೇ. 

Advertisement

ಆದ್ದರಿಂದಲೇ ಶರಣರು ಮಾತೆ ಮುತ್ತು, ಮಾತೆ ಮೃತ್ಯು ಎಂದು ಹೇಳಿದ್ದಾರೆ. ನಾಲಿಗೆ ನಮ್ಮ ಸಂಸ್ಕಾರವನ್ನು ತಿಳಿಸುತ್ತದೆ. ನಾಲಿಗೆ ಮೇಲೆ ಲಕ್ಷ್ಮೀ ಹಾಗೂ ಸರಸ್ವತಿ ವಾಸ ಮಾಡುತ್ತಾರೆಂದು ಹಿರಿಯರು ಹೇಳುತ್ತಿದ್ದರು. ಸದಾ ಒಳ್ಳೆಯ ಮಾತುಗಳನ್ನಾಡಬೇಕು ಎಂದರು. 

ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶ ಎಚ್‌. ಬಿಲ್ಲಪ್ಪ ಮತ್ತು ವಾಣಿಜ್ಯ ತೆರಿಗೆ ಇಲಾಖೆ ಅಪರ ಆಯುಕ್ತ ಜಗನ್ನಾಥ ಸಾಗರ, ಲಕ್ಷ್ಮಣ ಉಪ್ಪಾರ ಮಾತನಾಡಿದರು. ಶರಣ ಬಂಡಿ, ಶಾಂತಪ್ಪ ಗೋಟಖೀಂಡಿ, ಎನ್‌.ಎಸ್‌. ವರದರಾಜು, ಬಸವರಾಜ ಮೆಳವಂಕಿ, ಉಮಾದೇವಿ ಬಸಾಪುರ, ಈಶ್ವರ ಶಿರಕೋಳ ಇದ್ದರು.   

Advertisement

Udayavani is now on Telegram. Click here to join our channel and stay updated with the latest news.

Next