Advertisement
ಉಪ್ಪಳ ರೈಲು ನಿಲ್ದಾಣವನ್ನು ಪರಂಪ ರಾಗತ ನಿಲ್ದಾಣವಾಗಿ ಉನ್ನತಿಗೊಳಿಸಿ ನವೀಕರಿಸ ಲಾಗುವುದು., ನೇತ್ರಾವತಿ ರೈಲುಗಾಡಿಗೆ ಟ್ರಯಲ್ ರನ್‌ಗೆ ಅನುಮತಿ ನೀಡಲಾಗುವುದೆಂದೂ ಭರವಸೆ ನೀಡಿದ್ದಾರೆ. ಪ್ರತ್ಯೇಕವಾಗಿ ಸಜ್ಜುಗೊಳಿಸಿದ ರೈಲು ಗಾಡಿಯಲ್ಲಿ ಬಂದಿಳಿದ ಮೂವತ್ತರಷ್ಟು ರೈಲ್ವೇ ಅಧಿಕಾರಿಗಳನ್ನು ಹ್ಯೂಮನ್ ರೈಟ್ಸ್ ಪ್ರೊಟೆಕ್ಷನ್ ಮಿಶನ್ ರಾಷ್ಟ್ರೀಯ ಅಧ್ಯಕ್ಷ ಪ್ರಕಾಶ್ ಚೆನ್ನಿತ್ತಲ, ಕೋಶಾಧಿಕಾರಿ ಎಂ.ವಿ.ಜಿ.ನಾಯರ್, ರಾಜ್ಯ ಅಧ್ಯಕ್ಷ ಕೈಲಾಸ್‌ನಾಥ್, ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಎಸ್.ರಾಧಾಮಣಿಯಮ್ಮ, ಕಾರ್ಯಾಧ್ಯ ಕ್ಷ ಕೂಕಲ್ ಬಾಲಕೃಷ್ಣನ್, ಯುವಜನ ಸೆಲ್ ರಾಜ್ಯ ಅಧ್ಯಕ್ಷ ಡಾ|ಜಿಪ್ಸನ್ ವರ್ಗೀಸ್, ಕೋಶಾಧಿಕಾರಿ ನಾಸರ್ ಚೆರ್ಕಳ, ಜಿಲ್ಲಾ ಅಧ್ಯಕ್ಷ ಕೆ.ಬಿ.ಮುಹಮ್ಮದ್ ಕುಂಞಿ, ಚಳವಳಿ ಸಮಿತಿ ಅಧ್ಯಕ್ಷ ಕೆ.ಎಫ್ ಇಕ್ಬಾಲ್ ಉಪ್ಪಳ ಮೊದಲಾದವರು ಸ್ವಾಗತಿಸಿದರು.
Related Articles
ರಾಷ್ಟ್ರೀಯ ಅಧ್ಯಕ್ಷ ಪ್ರಕಾಶ್ ಚೆನ್ನಿತ್ತಲ ಕೇಂದ್ರ ರೈಲ್ವೇ ಸಚಿವ ಪೀಯೂಸ್ ಗೋಯಲ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದರು. ಉಪ್ಪಳ ಹಾಗೂ ಪಾಲಾ^ಟ್‌ನಲ್ಲಿ ಹಿರಿಯ ರೈಲ್ವೇ ಅಧಿಕಾರಿಗಳೊಂದಿಗೆ ಚರ್ಚಿಸಿದ್ದರು. ರೈಲ್ವೇ ಸಚಿವ ಗೋಯಲ್ ಅವರ ನಿರ್ದೇಶದಂತೆ ಸೈಲ್ವೇ ಜಿ.ಎಂ. ಕುಲಶ್ರೇಷ್u, ಡಿ.ಆರ್.ಎಂ. ಪ್ರತಾಪ್ ಸಿಂಗ್ ಶಾಮಿ ನೇತೃತ್ವದಲ್ಲಿ ಹಿರಿಯ ರೈಲ್ವೇ ಅಧಿಕಾರಿಗಳು ಉಪ್ಪಳ ರೈಲು ನಿಲ್ದಾಣಕ್ಕೆ ಭೇಟಿ ನೀಡಿದರು.
Advertisement