ನವದೆಹಲಿ: ಲಾಜಿಸ್ಟಿಕ್ಸ್, ಕೃಷಿ, ಶಿಕ್ಷಣ ಸೇರಿದಂತೆ ವಿವಿಧ ಕ್ಷೇತ್ರಗಳಿಗೂ ಯುಪಿಐ(ಯುನಿಫೈಡ್ ಪೇಮೆಂಟ್ ಇಂಟರ್‌ಫೇಸ್) ಮಾದರಿ ಪ್ಲಾಟ್‌ಫಾರಂ ಇದ್ದರೆ ಹೇಗಿರುತ್ತದೆ?
ಕೇಂದ್ರ ಸರ್ಕಾರವು ಈ ನಿಟ್ಟಿನಲ್ಲಿ ಹೆಜ್ಜೆಯಿಟ್ಟಿದ್ದು, ರಾಷ್ಟ್ರೀಯ ಡಿಜಿಟಲ್ ಆರೋಗ್ಯ ಯೋಜನೆಯೊಂದಿಗೆ ಸಮಾಲೋಚನೆ ನಡೆಸುತ್ತಿದೆ.
ಎಲ್ಲ ವಲಯಗಳಲ್ಲೂ ಯುಪಿಐ ಮಾದರಿ ವ್ಯವಸ್ಥೆಯವನ್ನು ಬಳಸಿಕೊಂಡು, ಎಲ್ಲರೂ ಅದನ್ನು ಬಳಸುವಂತೆ ಮಾಡುವುದೇ ಸರ್ಕಾರದ ಉದ್ದೇಶ ಎಂದು ಕೇಂದ್ರ ಐಟಿ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
ಯುಪಿಐ, ಜನಧನ ಖಾತೆಗಳು, ಫಲಾನುಭವಿಗಳ ಖಾತೆಗೆ ನೇರ ಹಣ ವರ್ಗಾವಣೆ ಮುಂತಾದ ಯೋಜನೆಗಳಿಗೆ ಹೇಗೆ ತಂತ್ರಜ್ಞಾನವನ್ನು ಬಳಸಿ, ಸಫಲತೆ ಕಾಣಲಾಗಿದೆಯೋ ಅದೇ ರೀತಿ ಇತರೆ ಕ್ಷೇತ್ರಗಳಲ್ಲೂ ತಂತ್ರಜ್ಞಾನ ಬಳಕೆಗೆ ಉದ್ದೇಶಿಸಲಾಗಿದೆ. ಯುಪಿಐನಲ್ಲಿ ಸರ್ಕಾರವು ಒಂದು ಪ್ಲಾಟ್‌ಫಾರಂ ಅಭಿವೃದ್ಧಿಪಡಿಸಿತು.
ಉಳಿದವರೆಲ್ಲರೂ ಅದಕ್ಕೆ ಸೇರ್ಪಡೆಯಾದರು.
ಅದೇ ರೀತಿ, ಸರಕು ಸಾಗಣೆ, ಕೃಷಿ, ಶಿಕ್ಷಣ… ಹೀಗೆ ಎಲ್ಲ ಕ್ಷೇತ್ರಗಳಲ್ಲೂ ಇಂಥ ವ್ಯವಸ್ಥೆ ಜಾರಿಗೆ ತರಲು ಚಿಂತನೆ ನಡೆಸಲಾಗುತ್ತಿದೆ ಎಂದರು.