Advertisement

UPI: ದೇಶದಲ್ಲಿ ಯುಪಿಐ ವಿಕ್ರಮ ಅಕ್ಟೋಬರ್‌ನಲ್ಲಿ ದಾಖಲೆ

01:22 AM Nov 04, 2024 | |

ಹೊಸದಿಲ್ಲಿ: ದೇಶದಲ್ಲಿ ಯುಪಿಐ (ಏಕೀಕೃತ ಪಾವತಿ ವ್ಯವಸ್ಥೆ) ಜಾರಿಯಾದ ಬಳಿಕ ಇದೇ ಮೊದಲ ಬಾರಿಗೆ ಅಂದರೆ ಎಂಟೂವರೆ ವರ್ಷಗಳ ಬಳಿಕ ದಾಖಲೆ ವಹಿವಾಟು ನಡೆದಿದೆ. ಅಕ್ಟೋಬರ್‌ನಲ್ಲಿ ದೇಶಾದ್ಯಂತ 23.5 ಲಕ್ಷ ಕೋಟಿ ರೂ. ಮೌಲ್ಯದ 1,658 ಕೋಟಿ ಯುಪಿಐ ವಹಿವಾಟು ನಡೆಯುವ ಮೂಲಕ ದಾಖಲೆ ಸೃಷ್ಟಿಯಾಗಿದೆ.

Advertisement

ಕಳೆದ ವರ್ಷದ ಅಕ್ಟೋಬರ್‌ಗೆ ಹೋಲಿಸಿದರೆ ಈ ಬಾರಿ ವಹಿವಾಟಿನ ಪ್ರಮಾಣದಲ್ಲಿ ಶೇ. 45 ಮತ್ತು ಮೌಲ್ಯದಲ್ಲಿ ಶೇ. 34ರಷ್ಟು ಏರಿಕೆ ದಾಖಲಾಗಿದೆ ಎಂದು ರಾಷ್ಟ್ರೀಯ ಪಾವತಿ ನಿಗಮ ಮಾಹಿತಿ ನೀಡಿದೆ. ಇದೇ ವರ್ಷದ ಸೆಪ್ಟಂಬರ್‌ಗೆ ಹೋಲಿಸಿದರೆ ಅಕ್ಟೋಬರ್‌ನಲ್ಲಿ ಯುಪಿಐ ವಹಿವಾಟು ಪ್ರಮಾಣ ಶೇ. 10, ಮೌಲ್ಯ ಶೇ. 14ರಷ್ಟು ಹೆಚ್ಚಳವಾಗಿದೆ. ಅ. 30ರ ಧನ್‌ಥೇರಾಸ್‌ನಂದು ಒಂದೇ ದಿನದಲ್ಲಿ 54.6 ಕೋಟಿ ಯುಪಿಐ ವಹಿವಾಟು ನಡೆದಿದೆ.

ಕಳೆದ ವರ್ಷ ಅಕ್ಟೋಬರ್‌ನಲ್ಲಿ ದಿನಕ್ಕೆ ಸರಾಸರಿ 50 ಕೋಟಿ ವಹಿವಾಟು ನಡೆದಿತ್ತು. ಈ ಬಾರಿ ಇದು 53.50 ಕೋಟಿಗೇರಿದೆ.

ಹಿಂದಿನ ದಾಖಲೆ
ಯುಪಿಐ ವಹಿವಾಟಿನಲ್ಲಿ ಈ ಹಿಂದೆ 2024ರ ಸೆಪ್ಟಂಬರ್‌ನಲ್ಲಿ 1,504 ಕೋಟಿ ವಹಿವಾಟು ನಡೆದದ್ದೇ ದಾಖಲೆಯಾಗಿತ್ತು. 20.64 ಲಕ್ಷ ಕೋಟಿ ರೂ. ಮೌಲ್ಯದ ವಹಿವಾಟಿನೊಂದಿಗೆ 2024ರ ಜುಲೈ ತಿಂಗಳು ದಾಖಲೆ ಬರೆದಿತ್ತು. 2016ರ ಎಪ್ರಿಲ್‌ನಲ್ಲಿ ದೇಶದಲ್ಲಿ ಡಿಜಿಟಲ್‌ ಪಾವತಿ ವ್ಯವಸ್ಥೆ ಜಾರಿಯಾಗಿತ್ತು.

ಈ ಅಕ್ಟೋಬರ್‌ ತಿಂಗಳಿನಲ್ಲಿ 46.7 ಕೋಟಿ ಐಎಂಪಿಎಸ್‌ ವಹಿವಾಟು ನಡೆದಿದ್ದು, ಸೆಪ್ಟಂಬರ್‌ಗೆ (43 ಕೋಟಿ) ಹೋಲಿಸಿದರೆ ಶೇ. 9 ಹೆಚ್ಚಳವಾಗಿದೆ. ಇದೇ ವೇಳೆ ಫಾಸ್ಟ್‌ಟ್ಯಾಗ್‌ ವಹಿವಾಟು ಸೆಪ್ಟಂಬರ್‌(31.8 ಕೋಟಿ)ಗೆ ಹೋಲಿಸಿದರೆ ಅಕ್ಟೋಬರ್‌ನಲ್ಲಿ ಶೇ. 8 (34.5 ಕೋಟಿ) ಹೆಚ್ಚಳವಾಗಿದೆ.

Advertisement

ದಾಖಲೆ ಬರೆದ ಯುಪಿಐ
-2023ರ ಅಕ್ಟೋಬರ್‌ಗೆ ಹೋಲಿಸಿದರೆ ಶೇ.45 ವಹಿವಾಟು ಹೆಚ್ಚಳ
– ವಹಿವಾಟಿನ ಮೌಲ್ಯದಲ್ಲಿ ಶೇ.34, ಮೌಲ್ಯದಲ್ಲಿ ಶೇ. 34 ಏರಿಕೆ
– ಅ.30ರ ಒಂದೇ ದಿನ 54.6 ಕೋಟಿ ಯುಪಿಐ ವಹಿವಾಟು
-ದಿನಕ್ಕೆ ಸರಾಸರಿ 50 ಕೋಟಿ ರೂ. ಹಣ ವರ್ಗಾವಣೆ
– ಪ್ರಸಕ್ತ ವರ್ಷದ ಸೆಪ್ಟಂಬರ್‌ಗೆ ಹೋಲಿಸಿದರೆ ವಹಿವಾಟು ಶೇ.10 ಏರಿಕೆ

Advertisement

Udayavani is now on Telegram. Click here to join our channel and stay updated with the latest news.

Next