Advertisement

ಲಂಕಾದಲ್ಲೂ UPI ಚಾಲ್ತಿಗೆ

08:54 PM Jul 21, 2023 | Team Udayavani |

ನವದೆಹಲಿ: ಸಿಂಗಾಪುರ, ಫ್ರಾನ್ಸ್‌, ಯುಎಇ ರಾಷ್ಟ್ರಗಳು ಭಾರತದ ಯುನಿಫೈಡ್‌ ಪೇಮೆಂಟ್‌ ಸಿಸ್ಟಮ್‌ (ಯುಪಿಐ)ಅನ್ನು ಅಳವಡಿಸಿಕೊಂಡ ಬೆನ್ನಲ್ಲೇ, ಈಗ ಪ್ರಧಾನಿ ನರೇಂದ್ರ ಮೋದಿ ಹಾಗೂ ಲಂಕಾ ಅಧ್ಯಕ್ಷ ರಣಿಲ್‌ ವಿಕ್ರಮಸಿಂಘೆ ಅವರ ಸಮ್ಮುಖದಲ್ಲಿ ಅಧಿಕೃತವಾಗಿ ಶ್ರೀಲಂಕಾದಲ್ಲಿ ಯುಪಿಐ ಅಳವಡಿಕೆಗೆ ಚಾಲನೆ ನೀಡಲಾಗಿದೆ.

Advertisement

ರಾಷ್ಟ್ರರಾಜಧಾನಿ ನವದೆಹಲಿಯಲ್ಲಿ ಉಭಯ ನಾಯಕರು ಭೇಟಿಯಾಗಿ, ಹಲವು ವಿಚಾರಗಳನ್ನು ಚರ್ಚಿಸಿ, ಲಂಕಾದಲ್ಲಿ ಯುಪಿಐ ಬಳಕೆಗೆ ಚಾಲನೆ ನೀಡಿದ್ದಾರೆ. ಈ ಕುರಿತು ಜಂಟಿ ಹೇಳಿಕೆಯನ್ನೂ ಬಿಡುಗಡೆಗೊಳಿಸಲಾಗಿದ್ದು, ಉಭಯ ರಾಷ್ಟ್ರಗಳ ನಡುವಿನ ಪ್ರವಾಸ ಸಂಪರ್ಕವನ್ನು ವಿಸ್ತರಿಸಲು ಉದ್ದೇಶಿಸಲಾಗಿದೆ. ಈ ನಿಟ್ಟಿನಲ್ಲಿ ಆರ್ಥಿಕ ಹಾಗೂ ತಾಂತ್ರಿಕ ಸಹಕಾರ ವಿಸ್ತರಣೆಯ ಕುರಿತೂ ಮಾತುಕತೆ ನಡೆಸಿದ್ದೇವೆ. ಈ ವಿಚಾರಗಳಿಗೆ ಯುಪಿಐ ಅಳವಡಿಕೆ ನೆರವಾಗಲಿದೆ ಎಂದೂ ಹೇಳಲಾಗಿದೆ.

ಇದೇ ವೇಳೆ ಶ್ರೀಲಂಕಾಗೆ ಆರ್ಥಿಕ ಬಿಕ್ಕಟ್ಟಿನಿಂದ ಹೊರಬರಲು ನೆರವಾಗುವ ನಿಟ್ಟಿನಲ್ಲಿ ಆರ್ಥಿಕ ಸುಧಾರಣೆಗೆ ಸಂಬಂಧಪಟ್ಟ ಒಪ್ಪಂದಗಳಿಗೂ ಸಹಿ ಹಾಕಲಾಗಿದೆ. ಜತೆಗೆ ಎರಡೂ ರಾಷ್ಟ್ರಗಳ ನಡುವಿನ ಸಂಪರ್ಕ ಅಭಿವೃದ್ಧಿಗೊಳಿಸಲು ಪ್ರಯಾಣಿಕ ನೌಕೆಗಳ ಅಭಿವೃದ್ಧಿ, ಸಾಗರ ಭದ್ರತೆ ಕುರಿತಾದ ಸಹಕಾರ ಹೆಚ್ಚಿಸುವ ಕುರಿತು ಮಾತುಕತೆಯನ್ನೂ ನಡೆಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next