Advertisement

10 ವರ್ಷ ಠಿಕಾಣಿ ಹೂಡಿದ್ದ ಆರೋಗ್ಯ ಸಿಬ್ಬಂದಿ ಎತ್ತಂಗಡಿ

07:15 AM Aug 06, 2017 | Harsha Rao |

ಬೆಂಗಳೂರು: ಆರೋಗ್ಯ ಇಲಾಖೆಯಲ್ಲಿ 10 ವರ್ಷದಿಂದ ಒಂದೇ ಪ್ರದೇಶದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಯನ್ನು ಕಡ್ಡಾಯವಾಗಿ ವರ್ಗ ಮಾಡಲು ನಿರ್ಧರಿಸಲಾಗಿದೆ ಎಂದು ಇಲಾಖೆಯ ಆಯುಕ್ತ ಸುಬೋಧ್‌ ಯಾದವ್‌ ಹೇಳಿದ್ದಾರೆ. ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 10 ವರ್ಷಗಳಿಂದ ಒಂದೇ ಕಡೆಯಲ್ಲಿ ಸಿಬ್ಬಂದಿ ಕೆಲಸ ಮಾಡುತ್ತಿರುವುದರಿಂದ ಇಲಾಖೆಯಲ್ಲಿ ಜಿಡ್ಡುಗಟ್ಟಿದ ವಾತಾವರಣ ನಿರ್ಮಾಣವಾಗಿದೆ. ಅಲ್ಲದೇ ಕೆಲಸದಲ್ಲಿ ಸಿಬ್ಬಂದಿ ಕಾಳಜಿ ತೋರದಿರುವುದು ಕಂಡು ಬಂದಿದೆ. ದೂರುಗಳನ್ನು ಎದುರಿಸುವ ಸಿಬ್ಬಂದಿಯನ್ನು ವರ್ಗಾವಣೆ
ಮಾಡಲು ಇಲಾಖೆ ತೀರ್ಮಾನಿಸಿದೆ ಎಂದರು. ಸಾರ್ವಜನಿಕ ಹಿತದೃಷ್ಟಿಯಿಂದ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ವರ್ಗಾವಣೆ ಮಾಡಲಾಗುತ್ತಿದ್ದು, ಇದೀಗ ವರ್ಗಾವಣೆಯ ಪ್ರಮಾಣವನ್ನು ಶೇ.5 ರಿಂದ 15ಕ್ಕೆ ಹೆಚ್ಚಳ ಮಾಡಲಾಗಿದೆ ಎಂದು ತಿಳಿಸಿದರು.

Advertisement

ವೈದ್ಯರು ಚೀಟಿ ಕೊಡುವುದು ನಿಷೇಧ: ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರು ರೋಗಿಗಳಿಗೆ ಚಿಕಿತ್ಸೆ ನೀಡಿ, ಔಷಧಕ್ಕಾಗಿ ಚೀಟಿ ಬರೆಯುವುದಕ್ಕೆ ಆರೋಗ್ಯ ಇಲಾಖೆ ನಿಷೇಧ ಹೇರಿದೆ. ಯಾವುದೇ ಮಾತ್ರೆ ಅಥವಾ ಔಷಧಿಗೂ ವೈದ್ಯರು ಚೀಟಿ ಬರೆಯುವಂತಿಲ್ಲ. ಎಲ್ಲವನ್ನೂ ಸರ್ಕಾರಿ ಆಸ್ಪತೆಯಲ್ಲಿರುವ ಜೆನರಿಕ್‌ ಔಷಧ ಮಳಿಗೆಯಿಂದಲೇ ನೀಡಬೇಕು ಎಂದು
ಕಟ್ಟುನಿಟ್ಟಿನ ಆದೇಶ ಹೊರಡಿಸಲಾಗಿದೆ. ಕೆಲವು ಆಸ್ಪತ್ರೆಗಳಲ್ಲಿ ತುರ್ತು ಔಷಧಗಳು ದೊರೆಯುತ್ತಿಲ್ಲ ಎಂಬ ಆರೋಪಗಳು ಬಂದಿವೆ. ಹೀಗಾಗಿ ನಾಲ್ಕು ವರ್ಷದಿಂದ ಒಂದೇ ಕಡೆ ಡ್ರಗ್ಸ್‌ ಲಾಜಿಸ್ಟಿಕ್ಸ್‌ನಲ್ಲಿ ಕೆಲಸ ಮಾಡುವವರನ್ನು ಸಾಮೂಹಿಕವಾಗಿ ವರ್ಗಾವಣೆ ಮಾಡಲು ತೀರ್ಮಾನಿಸಲಾಗಿದೆ ಎಂದು ಆರೋಗ್ಯ ಸಚಿವ ರಮೇಶ್‌ ಕುಮಾರ್‌ ತಿಳಿಸಿದ್ದಾರೆ.

ಹಿಮೋμಲಿಯಾ ಚಿಕಿತ್ಸೆಗೆ ಆರೋಗ್ಯ ಕೇಂದ್ರ:
ಹಿಮೋμàಲಿಯಾ ರೋಗಕ್ಕೆ ಚಿಕಿತ್ಸೆ ನೀಡಲು ಜಿಲ್ಲಾ ಆಸ್ಪತೆಗಳಲ್ಲಿ ಪ್ರತ್ಯೇಕ ಆರೋಗ್ಯ ಕೇಂದ್ರ ಸ್ಥಾಪಿಸಲಾಗಿದೆ. ಚಿಕಿತ್ಸೆಗಾಗಿ ಎಲ್ಲ ಜಿಲ್ಲಾಸ್ಪತ್ರೆಗಳಲ್ಲಿ ಚಿಕಿತ್ಸಾ ಕೇಂದ್ರ ತೆರೆಯಲಾಗಿದ್ದು, ಅದಕ್ಕಾಗಿ 6.15 ಕೋಟಿ ರೂ. ಮೀಸಲಿಡಲಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next