ಇದು ರಿಯಲ್ ಸ್ಟಾರ್ ಉಪೇಂದ್ರ ಅವರ ಅಭಿಮಾನಿಗಳ ಪಾಲಿಗೆ ತುಂಬಾ ಸ್ಪೆಷಲ್ ಡೇ. ಅದಕ್ಕೆ ಕಾರಣ ಅಂದು ನಟ ಉಪೇಂದ್ರ ಅವರ ಹುಟ್ಟು ಹಬ್ಬ. ಜೀರೋದಿಂದ ಬಂದು ಹೀರೋ ಆದ ನಟ ಉಪೇಂದ್ರ ಎಂಬುದು ಗೊತ್ತಿದೆ. ಅದೇ ಕಾರಣದಿಂದ ಅವರನ್ನು ಅಂತರಾಳ ದಿಂದ ಮನಸಾರೆ ಪ್ರೀತಿಸುವ, ಆರಾಧಿಸುವ ಅಭಿಮಾನಿಗಳ ಬಳಗ ದೊಡ್ಡದಿದೆ. ಹಾಗಾಗಿಯೇ ಅವರ ಹುಟ್ಟುಹಬ್ಬ ದಿನ ಮನೆ ಮುಂದೆ ಬಂದು ನೆಚ್ಚಿನ ನಟನಿಗೆ ಹಾರೈಸುತ್ತಾರೆ.
ಆದರೆ, ಕಳೆದ ವರ್ಷ (2020) ಈ ಅವಕಾಶ ಅಭಿಮಾನಿಗಳಿಗೆ ಸಿಕ್ಕಿಲ್ಲ. ಅದಕ್ಕೆ ಕಾರಣ ಕೊರೊನಾ. ಆದರೆ, ಈ ವರ್ಷವಾದರೂ ಸಿಗುತ್ತಾ ಎಂಬ ಪ್ರಶ್ನೆಗೆ ಉತ್ತರಿಸೋದು ಕಷ್ಟ. ಇದರ ಜೊತೆಗೆ ಅಭಿಮಾನಿಗಳಲ್ಲಿ ಮತ್ತೂಂದು ಪ್ರಶ್ನೆ ಕಾಡುತ್ತಿದೆ. ಅದೇನೆಂದರೆ ಈ ವರ್ಷವಾದರೂ ಉಪೇಂದ್ರ ನಿರ್ದೇಶನದ ಸಿನಿಮಾ ಅನೌನ್ಸ್ ಮಾಡು ತ್ತಾರಾ ಎಂಬುದು. ಈ ಕುತೂಹಲಕ್ಕೆ ಒಂದು ಕಾರಣವಿದೆ. ಅದು ಉಪೇಂದ್ರ ನಿರ್ದೇಶನದ ಸಿನಿಮಾ ಬಾರದೇ ಬರೋಬ್ಬರಿ 6 ವರ್ಷಗಳಾಗಿವೆ.
2015ರಲ್ಲಿ ಉಪ್ಪಿ-2 ಬಿಟ್ಟರೆ ಮತ್ತೆ ಉಪೇಂದ್ರ ನಿರ್ದೇಶನದಲ್ಲಿ ಯಾವುದೇ ಸಿನಿಮಾ ಬಂದಿಲ್ಲ. ಹಾಗಾಗಿ, ಈ ಬಾರಿಯಾದರೂ ಅನೌನ್ಸ್ ಮಾಡುತ್ತಾರಾ ಎಂಬ ಕಾತರ ಸಿನಿಪ್ರೇಮಿಗಳದ್ದು. ಅದೇ ಕಾರಣದಿಂದ ಉಪೇಂದ್ರ ಎಲ್ಲೇ ಹೋದರೂ ಅವರ ಅಭಿಮಾನಿಗಳು ಕೇಳುವ ಒಂದೇ ಒಂದು ಪ್ರಶ್ನೆ ಎಂದರೆ ಅದು ನಿರ್ದೇಶನ ಯಾವಾಗ ಎಂಬುದು.
ಈ ಪ್ರಶ್ನೆಗೆ ಉಪ್ಪಿ ಉತ್ತರಿಸೋದು ಹೀಗೆ “ನಿರ್ದೇಶನಕ್ಕೆ ಬೇಕಾದ ಕಥೆ ಸಿದ್ಧವಾಗಿದೆ. ಎರಡ್ಮೂರು ಸ್ಕ್ರಿಪ್ಟ್ ಮಾಡಿಕೊಂಡಿದ್ದೇನೆ. ಒಮ್ಮೆ ನಿರ್ದೇಶನಕ್ಕೆ ಇಳಿದರೆ ಪೂರ್ಣ ಪ್ರಮಾಣದಲ್ಲಿ ಅದರಲ್ಲಿ ತೊಡಗಿಸಿಕೊಳ್ಳ ಬೇಕು. ಸದ್ಯ ಬೇರೆ ಬೇರೆ ಸಿನಿಮಾಗಳ ಕಮಿಟ್ ಮೆಂಟ್‌ಗಳಿವೆ. ಜೊತೆಗೆ ಕೊರೊನಾ ಪೂರ್ಣ ಪ್ರಮಾಣದಲ್ಲಿ ಹೋಗಿಲ್ಲ. ಎಲ್ಲವನ್ನು ನೋಡಿಕೊಂಡು ನನ್ನ ನಿರ್ದೇಶನದ ಸಿನಿಮಾವನ್ನು ಅನೌನ್ಸ್ ಮಾಡುತ್ತೇನೆ’ ಎಂದರು.
ಬರ್ತ್‌ಡೇ ಆಚರಿಸಲ್ಲ: ಉಪೇಂದ್ರ ಈ ಬಾರಿಯೂ ಬರ್ತ್‌ಡೇ ಆಚರಿಸಿಕೊಳ್ಳುವುದಿಲ್ಲ. ಅದಕ್ಕೆ ಮತ್ತದೇ ಕಾರಣ, ಕೊರೊನಾ. “ಅಭಿಮಾನಿಗಳು ಪ್ರೀತಿಯಿಂದ ಬರ್ತ್ ಡೇ ಆಚರಿಸುತ್ತಿದ್ದರು. ಹಲವಾರು ಕೇಕ್, ಗಿಫ್ಟ್ ಗಳನ್ನು ತರುತ್ತಿದ್ದರು. ಆದರೆ, ಕಳೆದ ವರ್ಷದಿಂದ ಆಸಂಭ್ರಮವಿಲ್ಲ. ಈ ವರ್ಷವೂ ನಾನು ಬರ್ತ್‌ಡೇ ದಿನ ಮನೆಯಲ್ಲಿ ಇರೋದಿಲ್ಲ. ಅಭಿಮಾನಿಗಳು ಇದ್ದಲ್ಲಿಂದಲೇ ವಿಶ್ ಮಾಡಿ. ಎಲ್ಲಾ ಸರಿ ಹೋದರೆ ಮುಂದಿನ ವರ್ಷ ಅದ್ಧೂರಿಯಾಗಿ ಆಚರಿಸುವ’ ಎನ್ನುವುದು ಉಪೇಂದ್ರ ಮಾತು.