Advertisement
2018ರ ನ. 16ರಂದು ಕುಂದಾಪುರಕ್ಕೆ ಭೇಟಿ ನೀಡಿದ್ದ ಆಗಿನ ಸಾರಿಗೆ ಸಚಿವ ಡಿ.ಸಿ. ತಮ್ಮಣ್ಣ ಅವರು, ಕುಂದಾಪುರದ ಬಸ್ರೂರು ಮೂರುಕೈ ಬಳಿಯಿರುವ ಹಳೆಯ ಕೆಎಸ್‌ಆರ್‌ಟಿಸಿ ಘಟಕವನ್ನು ಕೆಡವಿ, ಮರು ನಿರ್ಮಾಣಕ್ಕೆ 4.5 ಕೋ.ರೂ. ಅನುದಾನವನ್ನು ಘೋಷಿಸಿದ್ದರು. ಸಚಿವರು ಅನುದಾನ ಘೋಷಿಸಿ, 3 ವರ್ಷ ಕಳೆದರೂ, ಇನ್ನೂ ನವೀಕರಣ ಕಾಮಗಾರಿ ಮಾತ್ರ ಕೈಗೂಡಿರಲಿಲ್ಲ.
ಈಗಿರುವ ಕೆಎಸ್‌ಆರ್‌ಟಿಸಿ ಡಿಪೋ ಇರುವ ಜಾಗದಲ್ಲಿಯೇ ಅದನ್ನು ಕೆಡವಿ ಹೊಸದಾಗಿ ಕಟ್ಟಡ, ಬಸ್ ನಿಲ್ಲಿಸುವ ಬೇ, ದುರಸ್ತಿಗೆ ಅನುಕೂಲವಾಗುವಂತಹ ಬೇಗಳು, ಹೊಸ ಜನರೇಟರ್, ಚಾಲಕ – ನಿರ್ವಾಹಕರಿಗೆ ವಿಶ್ರಾಂತಿ ಕೊಠಡಿ, ವಾಷಿಂಗ್ ರ್‍ಯಾಂಪ್, ಆವರಣ ಗೋಡೆ ಹೊಸದಾಗಿ ನಿರ್ಮಾಣವಾಗಲಿದೆ. ಇದಲ್ಲದೆ ಹೆದ್ದಾರಿಯ ಮಳೆ ನೀರು ಹರಿದು ಬರದಂತೆ ಸಹ ವ್ಯವಸ್ಥೆಯಾಗಲಿದೆ. ಈಗ ಕಾಮಗಾರಿ ಆರಂಭವಾಗಲಿದ್ದು, ಮುಂದಿನ ಒಂದು ವರ್ಷದೊಳಗೆ ಪೂರ್ಣಗೊಳ್ಳಲಿದೆ. 103 ಬಸ್ ನಿಲುಗಡೆ
ಕುಂದಾಪುರದಿಂದ ಬೆಂಗಳೂರು, ಶಿವಮೊಗ್ಗ, ಮೈಸೂರು, ಉತ್ತರ ಕನ್ನಡ, ಹುಬ್ಬಳ್ಳಿ ಸಹಿತ ರಾಜ್ಯದ ಹೆಚ್ಚಿನ ಎಲ್ಲ ಜಿಲ್ಲೆಗಳಿಗೂ ಬಸ್ ಸಂಪರ್ಕವಿದೆ. ಪ್ರಸ್ತುತ ಇಲ್ಲಿ 103 ಬಸ್‌ಗಳ ನಿಲುಗಡೆಯಿದೆ.
Related Articles
ಡಿಪೋ ನವೀಕರಣ ಕಾಮಗಾರಿ ಸಲುವಾಗಿ ಈಗ ಇಲ್ಲಿರುವ ಬಸ್‌ಗಳನ್ನು ನಿಲ್ಲಿಸಲು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಮುಂಭಾಗದಲ್ಲಿ ಜಾಗ ಸಮತಟ್ಟು ಮಾಡಲಾಗಿದೆ. ಇಲ್ಲಿ ಕೆಲವು ಬಸ್‌ಗಳನ್ನು ನಿಲ್ಲಿಸಲು ವ್ಯವಸ್ಥೆ ಮಾಡಲಾಗಿದೆ.
Advertisement
1 ವರ್ಷದವರೆಗೆ ಕಾಮಗಾರಿಕುಂದಾಪುರ ಕೆಎಸ್‌ಆರ್‌ಟಿಸಿ ಘಟಕದ ನವೀಕರಣ ಕಾಮಗಾರಿ ಜ.31 ರಿಂದ ಆರಂಭವಾಗಲಿದೆ. ಈಗಿರುವ ಬಸ್‌ಗಳ ನಿಲುಗಡೆಗೆ ಪರ್ಯಾಯ ವ್ಯವಸ್ಥೆ ಆಗಬೇಕಿರು ವುದರಿಂದ ಸ್ವಲ್ಪ ವಿಳಂಬವಾಗಿದೆ. ಮುಂದಿನ ಒಂದು ವರ್ಷದವರೆಗೆ ಕಾಮಗಾರಿ ನಡೆಯಲಿದೆ. ಹೊಸ ಕಟ್ಟಡ, ರ್‍ಯಾಂಪ್, ಬಸ್ ಬೇ ಸಹಿತ 4.5 ಕೋ.ರೂ. ವೆಚ್ಚದಲ್ಲಿ ಕಾಮಗಾರಿ ನಡೆಯಲಿದೆ.
-ಸುಜಾತಾ, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ (ಪ್ರಭಾರ), ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗ