Advertisement

ರಸ್ತೆ ನಿರ್ಮಾಣ, ಅಭಿವೃದ್ಧಿ: ಗಡ್ಕರಿ ಸಾಧನೆ ಮೆಚ್ಚಿದ ಸೋನಿಯಾ

11:45 AM Feb 07, 2019 | udayavani editorial |

ಹೊಸದಿಲ್ಲಿ : ರಸ್ತೆ, ಸೇತುವೆಯೇ ಮೊದಲಾದ ದೇಶದ ಮೂಲ ಸೌಕರ್ಯವನ್ನು ಅಭಿವೃದ್ಧಿಪಡಿಸುವಲ್ಲಿ ಕೇಂದ್ರ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಮಾಡಿರುವ ಅದ್ಭುತ ಕೆಲಸಗಳಿಗೆ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಇಂದು ಗುರುವಾರ ಲೋಕಸಭೆಯಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದರು. 

Advertisement

ಕೆಲ ತಿಂಗಳ ಹಿಂದೆ ತನ್ನ ರಾಯ್‌ಬರೇಲಿ ಕ್ಷೇತ್ರದಲ್ಲಿ ಆಗಬೇಕಿರುವ ರಸ್ತೆ ಅಭಿವೃದ್ಧಿ ಕುರಿತಾಗಿ ಸೋನಿಯಾ ಅವರು ಗಡ್ಕರಿಗೆ ಪತ್ರ ಬರೆದಿದ್ದರು. 

ಇಂದು ಲೋಕಸಭೆಯಲ್ಲಿ ತನ್ನ ಇಲಾಖೆಗೆ ಸಂಬಂಧಿಸಿದ ಪ್ರಶೆಗೆ ಉತ್ತರಿಸುತ್ತಾ ದೇಶದಲ್ಲಿ ಈಗಾಗಲೇ ಆಗಿರುವ ಮತ್ತು ಆಗುತ್ತಿರುವ ರಸ್ತೆ ಕಾಮಗಾರಿಗಳ ವಿವರ ನೀಡಿದರು.

‘ನನ್ನ ಕೆಲಸಗಳನ್ನು ಪಕ್ಷಭೇದವಿಲ್ಲದೆ ಎಲ್ಲ ಕ್ಷೇತ್ರಗಳ ಪ್ರತಿನಿಧಿಗಳು ಮೆಚ್ಚಿಕೊಂಡಿರುವುದಕ್ಕೆ ಧನ್ಯವಾದಗಳು’ ಎಂದು ಗಡ್ಕರಿ ಹೇಳಿದಾಗ ಸೋನಿಯಾ ಗಾಂಧಿ ಡೆಸ್ಕ್ ಗುದ್ದಿ  ಗಡ್ಕರಿಯನ್ನು ಅಭಿನಂದಿಸಿದರು. ಇದನ್ನು ಕಂಡ ಮಲ್ಲಿಕಾರ್ಜುನ ಖರ್ಗೆ ಮತ್ತು ಇತರ ಕಾಂಗ್ರೆಸ್‌ ಸಂಸದರು ಕೂಡ ಡೆಸ್ಕ್ ಗುದ್ದಿ ಅಭಿನಂದಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next