Advertisement
ಕೊನೆಯ ಕೆಲವು ಸೆಕೆಂಡ್‌ಗಳ ನಾಟಕೀಯ ಆಟದಲ್ಲಿ ಪಂದ್ಯ ಏರಿಳಿತ ಕಾಣುತ್ತ ಹೋಯಿತು. ಯುಪಿ ಯೋಧಾಸ್‌ನ ರೋಹಿತ್ ಕೊನೆಯ ಕ್ಷಣದಲ್ಲಿ ರೈಡ್ ನಡೆಸಿ ಒಂದಂಕ ತಂದು, ಅಂಕ ವ್ಯತ್ಯಾಸವನ್ನು ಒಂದಕ್ಕೆ ತಂದು ನಿಲ್ಲಿಸಿದರು. ಆಗ ಪಂದ್ಯದ ಮುಕ್ತಾಯಕ್ಕೆ ಇನ್ನೂ 2 ಸೆಕೆಂಡ್ ಬಾಕಿ ಇದ್ದುದರಿಂದ ಅಂಪಾಯರ್ ಇನ್ನೊಂದು ರೈಡ್‌ಗೆ ಅವಕಾಶ ನೀಡಿದರು. ಬೆಂಗಾಲ್ ಪಾಲಿಗೆ ಇದು ಡು ಆರ್ ಡೈ ರೈಡ್ ಆಗಿತ್ತು. ಗೆಲ್ಲಲು ಅದು ಅಂಕ ಗಳಿಸುವುದು ಅನಿವಾರ್ಯವಾಗಿತ್ತು. ಸ್ವತಃ ಬೆಂಗಾಲ್ ನಾಯಕ ಮಣಿಂದರ್ ರೈಡ್ಗೆಇಳಿದರೂ ಸುಮಿತ್ ಸಾಹಸ ಪ್ರದರ್ಶಿಸಿದರು; ಮಣಿಂದರ್ ಅವರನ್ನು ಅಂಕಣದಿಂದ ಹೊರತಳ್ಳುವ ಮೂಲಕ ಪಂದ್ಯವನ್ನು ಸಮಬಲದಲ್ಲಿ ಮುಗಿಸಿದರು.
ಮತ್ತೊಂದು ಪಂದ್ಯದಲ್ಲಿ ಡೆಲ್ಲಿ 40-33ರಿಂದ ಟೈಟಾನ್ಸ್‌ಗೆ ಸೋಲುಣಿಸಿತು. ಡೆಲ್ಲಿ ಜಯದಲ್ಲಿ ರೈಡರ್ ಆಶು ಮಲಿಕ್ ಪಾತ್ರ ಮಹತ್ವದ್ದಾಗಿತ್ತು (12 ಅಂಕ). ನಾಯಕ ನವೀನ್ ಕುಮಾರ್ 9 ಅಂಕ ಗಳಿಸಿದರು. ಟೈಟಾನ್ಸ್ ಸಿದ್ಧಾರ್ಥ್ ದೇಸಾಯಿ ಅವರನ್ನು ಹೆಚ್ಚು ಅವಲಂಬಿಸಿತು. ಅವರು 14 ಅಂಕ ತಂದು ಕೊಟ್ಟರು.