Advertisement

ಮತದಾರನಿಗೆ ನೈಸಾಗಿ ಮಸಾಜ್, ಬಸ್ಕಿ ಹಾಕಿ ಕ್ಷಮೆ ಕೇಳಿದ್ದ ಅಭ್ಯರ್ಥಿಗೆ ಜಯ!

03:54 PM Mar 11, 2022 | Team Udayavani |

ಲಕ್ನೋ : ಉತ್ತರಪ್ರದೇಶದಲ್ಲಿ ಬಿಜೆಪಿ ಭರ್ಜರಿ ಬಹುಮತ ಪಡೆದು ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿದಿದೆ, ಇದೆ ವೇಳೆ ವೃದ್ಧ ಮತದಾರರೊಬ್ಬರಿಗೆ ಆಯಿಲ್ ಮಸಾಜ್ ಮಾಡಿ, ಬಹಿರಂಗವಾಗಿ ಬಸ್ಕಿ ಹೊಡೆದು ಕ್ಷಮೆ ಕೇಳಿ ಸುದ್ದಿಯಾಗಿದ್ದ ಬಿಜೆಪಿ ಅಭ್ಯರ್ಥಿ ಗೆಲುವು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

ಸೋನ್‌ಭದ್ರಾ ಜಿಲ್ಲೆಯ ರಾಬರ್ಟ್ಸ್‌ಗಂಜ್ ಕ್ಷೇತ್ರದ ಭೂಪೇಶ್ ಚೌಬೆ ಅವರು ಶೇಕಡಾ 40.29 ಗಳಿಸಿ, ಹತ್ತಿರದ ಪ್ರತಿಸ್ಪರ್ಧಿ ಸಮಾಜವಾದಿ ಪಕ್ಷದ ಅವಿನಾಶ್ ಕುಶ್ವಾಹಾ ಅವರನ್ನು 5,600 ಕ್ಕೂ ಹೆಚ್ಚು ಮತಗಳಿಂದ ಸೋಲಿಸಿದ್ದಾರೆ.

47 ರ ಹರೆಯದ ಭೂಪೇಶ್ ಚೌಬೆ ಸಾರ್ವಜನಿಕ ಸಮಾವೇಶದಲ್ಲಿ ಕಿವಿಗಳನ್ನು ಹಿಸಿದುಕೊಂಡುಬಸ್ಕಿ ಹೊಡೆದು ಮತದಾರರ ಕ್ಷಮೆ ಕೇಳಿದ್ದು, ಇನ್ನೊಂದೆಡೆ ಪ್ರಚಾರಕ್ಕೆ ತೆರಳಿದ್ದ ವೇಳೆ ಮತದಾರನಿಗೆ ಮಸಾಜ್ ಮಾಡಿ ವಿಪಕ್ಷಗಳಿಂದ ಭಾರೀ ಟೀಕೆಗೆ ಒಳಗಾಗಿದ್ದರು. ಅವರ ವಿಡಿಯೋಗಳು ವೈರಲ್ ಆಗಿ ಹಾಸ್ಯಕ್ಕೂ ಕಾರಣವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next