Advertisement

ಯುಪಿ ಸ್ಥಳೀಯ ಸಂಸ್ಥೆ ಚುನಾವಣೆ: BJP ಭರ್ಜರಿ ಸಾಧನೆ !

11:44 AM Dec 01, 2017 | |

ಲಕ್ನೋ: ಉತ್ತರ ಪ್ರದೇಶದ ಸ್ಥಳೀಯ ಸಂಸ್ಥೆ ಗಳಿಗೆ ನಡೆದ ಚುನಾವಣೆಯ ಮತ ಏಣಿಕೆ ಶುಕ್ರವಾರ ನಡೆಯುತ್ತಿದ್ದು ಆಡಳಿತಾರೂಢ ಬಿಜೆಪಿ ಭರ್ಜರಿ ಜಯಗಳಿಸಿ ಕೇಕೆ ಹಾಕಿದೆ. 

Advertisement

16  ಮಹಾನಗರ ಪಾಲಿಕೆಗಳ ಪೈಕಿ  14 ರಲ್ಲಿ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದ್ದು ಅಧಿಕಾರ ಹಿಡಿಯುವ ಎಲ್ಲಾ  ಸಾಧ್ಯತೆಗಳಿವೆ. ವಿಪಕ್ಷ ಬಿಎಸ್‌ಪಿ  2  ಪಾಲಿಕೆಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಎಸ್‌ಪಿ ಮತ್ತು ಕಾಂಗ್ರೆಸ್‌  ಒಂದೂ ಮಹಾನಗರ ಪಾಲಿಕೆ ಗೆಲ್ಲಲಾಗದೆ ತೀವ್ರ ಮುಖಭಂಗ ಅನುಭವಿಸಿವೆ. 

ಪ್ರಧಾನಿ ಮೋದಿ ಅವರು ಪ್ರತಿನಿಧಿಸುತ್ತಿರುವ ವಾರಣಾಸಿ ಸೇರಿದಂತೆ 14 ಪಾಲಿಕೆಗಳಲ್ಲಿ  ಬಿಜೆಪಿ ಭರ್ಜರಿ ಮುನ್ನಡೆ ಕಾಯ್ದುಕೊಂಡಿದೆ.

ರಾಹುಲ್‌ಗೆ ಮುಖಭಂಗ 

ರಾಹುಲ್‌ ಗಾಂಧಿ ಪ್ರತಿನಿಧಿಸುವ ಅಮೇಠಿಯಲ್ಲೂ ಕಾಂಗ್ರೆಸ್‌ ಮುಖಭಂಗ ಅನುಭವಿಸಿದ್ದು ಬಿಜೆಪಿ ಜಯಭೇರಿ ಬಾರಿಸಿದೆ. 

Advertisement

ಗೆಲುವಿನಲ್ಲೂ ಸಿಎಂಗೆ ಯೋಗಿಗೆ ಶಾಕ್‌ ! 
ಭರ್ಜರಿ ಗೆಲುವಿನ ಹೊರತಾಗಿಯೂ ಸಿಎಂ ಯೋಗಿ ಆದಿತ್ಯನಾಥ್‌ ಅವರ ಗೋರಖ್‌ನಾಥ್‌ ದೇವಾಲಯವಿರುವ  ವಾರ್ಡ್‌ನಲ್ಲೇ ಪಕ್ಷೇತರ ಅಭ್ಯರ್ಥಿ ಎದುರು ಬಿಜೆಪಿ ಅಭ್ಯರ್ಥಿಗೆ ಸೋಲಾಗಿದೆ. 

198 ನಗರ ಸಭೆಗಳ ಪೈಕಿ  ಬಿಜೆಪಿ 79 ರಲ್ಲಿ ಮುನ್ನಡೆ ಸಾಧಿಸಿದ್ದು, ಬಿಎಸ್‌ಪಿ 41, ಎಸ್‌ಪಿ  47 , ಕಾಂಗ್ರೆಸ್‌ 11 ಮತ್ತು ಇತರರು 20 ಕ್ಷೇತ್ರದಲ್ಲಿ ಮುನ್ನಡೆ ಸಾಧಿಸಿದ್ದಾರೆ.

ಮುಖ್ಯಮಂತ್ರಿ ಆದಿತ್ಯನಾಥ್‌ ಅವರಿಗೆ ಈ ಚುನಾವಣೆ ಅಗ್ನಿ ಪರೀಕ್ಷೆಯಾಗಿತ್ತು.  ಇದು ಮೋದಿ ಅವರ ಕೆಲಸಕ್ಕೆ ಸಂದ ಜಯ ಎಂದು ಗೆಲುವಿನ ಸಂಭ್ರಮದಲ್ಲಿಪ್ರತಿಕ್ರಿಯೆ ನೀಡಿದ್ದಾರೆ. 

ರಾತ್ರಿಯ  ವೇಳೆಗೆ ಫ‌ಲಿತಾಂಶದ ಸ್ಪಷ್ಟ ಚಿತ್ರಣ ಲಭ್ಯವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next