Advertisement

ಯುಪಿ ಬಜೆಟ್‌: ಕಂಪ್ಯೂಟರ್ ಲ್ಯಾಬ್‌ಗಳನ್ನು ಸ್ಥಾಪಿಸಲು ಮದರಸಾಗಳಿಗೆ 1ಲಕ್ಷ ರೂ.

04:10 PM Feb 22, 2023 | Team Udayavani |

ಲಕ್ನೋ : ಉತ್ತರ ಪ್ರದೇಶ ಸರಕಾರ ಬುಧವಾರ ಮಂಡಿಸಿದ ಬಜೆಟ್‌ನಲ್ಲಿ ಕಂಪ್ಯೂಟರ್ ಲ್ಯಾಬ್‌ಗಳನ್ನು ಸ್ಥಾಪಿಸಲು ಮದರಸಾಗಳಿಗೆ ತಲಾ 1 ಲಕ್ಷ ರೂ. ಅನುದಾನ ಘೋಷಿಸಿದೆ. ಉತ್ತರ ಪ್ರದೇಶದಲ್ಲಿ ಅಂದಾಜು 23,000 ಮದರಸಾಗಳಿವೆ ಅವುಗಳಲ್ಲಿ 561 ಮಾತ್ರ ರಾಜ್ಯ ಸರಕಾರದಿಂದ ಅನುದಾನವನ್ನು ಪಡೆಯುತ್ತಿವೆ.

Advertisement

ಅಧಿಕೃತ ಹೇಳಿಕೆಯ ಪ್ರಕಾರ, ಅಲ್ಪಸಂಖ್ಯಾತ ಸಮುದಾಯಗಳ ಕಲ್ಯಾಣಕ್ಕಾಗಿ, ಯೋಗಿ ಆದಿತ್ಯನಾಥ್ ನೇತೃತ್ವದ ಸರಕಾರವು ಪದವೀಧರ ಶಿಕ್ಷಕರಿಗೆ ಮಾಸಿಕ 6,000 ರೂ. ಮತ್ತು ಬಿ.ಇಡಿಗೆ ಮಾಸಿಕ 12,000 ರೂ.ಗಳ ಗೌರವಧನವನ್ನು ಪಾವತಿಸಲು ನಿಬಂಧನೆಯನ್ನು ಮಾಡಿದೆ. ಹಿಂದಿ, ಇಂಗ್ಲಿಷ್, ಗಣಿತ, ವಿಜ್ಞಾನ ಮುಂತಾದ ಆಧುನಿಕ ವಿಷಯಗಳನ್ನು ಕಲಿಸುವ ಮಾಸ್ಟರ್ಸ್ ಹೊಂದಿರುವ ಶಿಕ್ಷಕರಿಗೆ ಗೌರವಧನ ನೀಡಲಾಗುತ್ತದೆ.

ಅಲ್ಪಸಂಖ್ಯಾತ ಸಂಸ್ಥೆಗಳಿಗೆ 2023-2024ರ ಆರ್ಥಿಕ ವರ್ಷದಲ್ಲಿ ಹಾಸ್ಟೆಲ್‌ಗಳು ಮತ್ತು ಶಾಲಾ ಕಟ್ಟಡಗಳ ನಿರ್ಮಾಣಕ್ಕೆ 681 ಲಕ್ಷ ರೂಪಾಯಿಗಳನ್ನು ಬಜೆಟ್‌ನಲ್ಲಿ ಒದಗಿಸಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಮುಂಬರುವ ಹಣಕಾಸು ವರ್ಷಕ್ಕೆ 32,721.96 ಕೋಟಿ ರೂ. ಮೌಲ್ಯದ ಹೊಸ ಯೋಜನೆಗಳು ಸೇರಿದಂತೆ 6,90,242.43 ಕೋಟಿ ರೂಗಳ ಬಜೆಟ್ ಅನ್ನು ರಾಜ್ಯ ಸರಕಾರ ಬುಧವಾರ ಮಂಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next