Advertisement

ಯುಪಿ ಮೈತ್ರಿ ಕೂಟ: ಕಾಂಗ್ರೆಸ್‌ ರಣತಂತ್ರಕ್ಕೆ ಲಕ್ನೋದಲ್ಲಿ ನಾಯಕರ ಸಭೆ

11:42 AM Jan 12, 2019 | udayavani editorial |

ಲಕ್ನೋ : ಉತ್ತರ ಪ್ರದೇಶದದಲ್ಲಿನ 80 ಲೋಕಸಭಾ ಸೀಟುಗಳಲ್ಲಿ  ತಮಗೆ 76 ಸೀಟುಗಳನ್ನು ಇಟ್ಟುಕೊಂಡು ರಾಷ್ಟ್ರೀಯ ಪಕ್ಷವಾಗಿರುವ ಕಾಂಗ್ರೆಸ್‌ಗೆ ಕೇವಲ 2 ಸೀಟುಗಳನ್ನು (ರಾಹುಲ್‌ ಗಾಂಧಿ ಅವರ ಅಮೇಠಿ ಮತ್ತು ಸೋನಿಯಾ ಗಾಂಧಿ ಅವರ ರಾಯ್‌ ಬರೇಲಿ) ಬಿಟ್ಟುಕೊಟ್ಟಿರುವ ಎಸ್‌ಪಿ-ಬಿಎಸ್‌ಪಿ ಮೈತ್ರಿಕೂಟದ ವಿರುದ್ದ  2019ರ ಲೋಕಸಭಾ ಚುನಾವಣೆಗೆ ತನ್ನ ರಣತಂತ್ರ ಹೇಗಿರಬೇಕು ಎಂಬುದನ್ನು ಚರ್ಚಿಸಲು ಎಐಸಿಸಿ ಪ್ರಭಾರಿ ಗುಲಾಂ ನಬೀ ಆಜಾದ್‌ ಸೇರಿದಂತೆ ಹಿರಿಯ ಕಾಂಗ್ರೆಸ್‌ ನಾಯಕರು ನಾಳೆ ಭಾನುವಾರ ಇಲ್ಲಿ ಮಹತ್ವದ ಸಭೆ ನಡೆಸಲಿದ್ದಾರೆ.

Advertisement

ಗುಲಾಂ ನಬೀ ಆಜಾದ್‌, ಯುಪಿಸಿಸಿ ಅಧ್ಯಕ್ಷ ರಾಜ್‌ ಬಬ್ಬರ್‌ ಮತ್ತು ಹಿರಿಯ ಕಾಂಗ್ರೆಸ್‌ ನಾಯಕರು ನಾಳೆ ರಾಜಧಾನಿ ಲಕ್ನೋಗೆ ಬರಲಿದ್ದು ಪಕ್ಷದ ಚುನಾವಣಾ ರಣತಂತ್ರವನ್ನು ಅಂತಿಮ ಗೊಳಿಸಲು ಸಭೆ ನಡೆಸಲಿದ್ದಾರೆ ಎಂದು ಪ್ರದೇಶ್‌ ಕಾಂಗ್ರೆಸ್‌ ಸಮಿತಿ ವಕ್ತಾರ ಅಂಶು ಅವಸ್ಥಿ ಇಂದಿಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ರಾಷ್ಟ್ರೀಯ ಸಮಿತಿಯಲ್ಲಿರುವ ಉತ್ತರ ಪ್ರದೇಶದ ಎಲ್ಲ ನಾಯಕರು ಮತ್ತು ಎಐಸಿಸಿ ಕಾರ್ಯದರ್ಶಿಗಳು ನಾಳೆಯ ಸಭೆಯಲ್ಲಿ ಹಾಜರಿರುತ್ತಾರೆ ಎಂದು ಅವಸ್ಥಿ ಹೇಳಿದರು.

ಉ.ಪ್ರ.ದಲ್ಲಿ ಕಾಂಗ್ರೆಸ್‌ ಪಕ್ಷವನ್ನು ಹೊರಗಿಟ್ಟು ಎಸ್‌ಪಿ – ಬಿಎಸ್‌ಪಿ ಮೈತ್ರಿ ರಚಿಸಿಕೊಂಡು 76 ಸ್ಥಾನಗಳಲ್ಲಿ ಜತೆಗೂಡಿ ಸ್ಪರ್ಧಿಸಲು ನಿರ್ಧರಿಸಿರುವ ಬಗ್ಗೆ ಸುದ್ದಿಗಾರರು ಕೇಳಿದ ಪ್ರತಿಕ್ರಿಯೆಗೆ ಆಜಾದ್‌ ಉತ್ತರಿಸಿದ್ದು ಹೀಗೆ : 

1. ಎಸ್‌ಪಿ – ಬಿಎಸ್‌ಪಿ ಮೈತ್ರಿ ಬಗ್ಗೆ ನಮ್ಮಲ್ಲಿ ಯಾರೊಬ್ಬರೂ ಏನನ್ನೂ ಮಾತನಾಡುವುದಿಲ್ಲ. ನಮ್ಮಲ್ಲಿ ಯಾರಾದರೂ ಈ ಬಗ್ಗೆ ಏನನ್ನು ಹೇಳಿದರೂ ಅದು ಅನಧಿಕೃತವಾಗಿರುತ್ತದೆ.  

Advertisement

2.  ಉತ್ತರ ಪ್ರದೇಶದಲ್ಲಿ ನಾವು ಏಕಾಂಗಿಯಾಗಿ ಲೋಕಸಭಾ ಚುನಾವಣೆಯನ್ನು ಹೋರಾಡಲು ಸಿದ್ಧರಿದ್ದೇವೆ. ನಮ್ಮದು ಅತ್ಯಂತ ಹಳೆಯ ರಾಷ್ಟ್ರೀಯ ಪಕ್ಷ.

3. ವಿರೋಧ ಪಕ್ಷಗಳ ಯಾವತ್ತೂ ಮೈತ್ರಿ ಕೂಟಗಳು ಅಥವಾ ಮಹಾ ಘಟಬಂಧನ ರಾಷ್ಟ್ರೀಯ ಪಕ್ಷವಾಗಿರುವ ಕಾಂಗ್ರೆಸ್‌ ಅನ್ನು ಮುಂದಿಟ್ಟುಕೊಂಡು ಆಗಬೇಕೇ ಹೊರತು ಪ್ರಾದೇಶಿಕ ಪಕ್ಷಗಳೇ ಮುಂಚೂಣಿಯಲ್ಲಿ ಇರುವ ಮಹಾಮೈತ್ರಿಕೂಟಕ್ಕೆ ಮಹತ್ವ ಇರುವುದಿಲ್ಲ. ಕಾಂಗ್ರೆಸ್‌ ಪಕ್ಷಕ್ಕೆ ರಾಷ್ಟ್ರೀಯ ಮುಖ ಇದೆ. 

4. ಉತ್ತರ ಪ್ರದೇಶದಲ್ಲಿ ನಾವು ಏಕಾಂಗಿಯಾಗಿ 45 ಸೀಟುಗಳನ್ನು ಹೊಂದುವೆವು ಮತ್ತು ಯಾವುದೇ ಸಂದರ್ಭದಲ್ಲಿ ಇದು ಪ್ರಾದೇಶಿಕ ಪ್ರಕ್ಷಗಳಿಗಿಂತ ದೊಡ್ಡ ಸಂಖ್ಯೆಯಾಗಿದೆ. 

5. ನಮ್ಮ ಜತೆಗೆ ಸಮಾನ ಮನಸ್ಕ ಪಕ್ಷಗಳನ್ನು ಹೊಂದಿರಲು ನಾವು ಸಿದ್ಧರಿದ್ದೇವೆ. 

6. ನಾವೀಗ ನಮ್ಮ ರಣತಂತ್ರ ರೂಪಣೆಗಾಗಿ ಜಿಲ್ಲಾವಾರು ನಾಯಕರೊಂದಿಗೆ ಸಭೆ, ಮಾತುಕತೆ ನಡೆಸುತ್ತಿದ್ದೇವೆ. ಕಳೆದೆರಡು ದಿನಗಳಲ್ಲಿ ನಾವು ಪಶ್ಚಿಮ ಉತ್ತರಪ್ರದೇಶದ ಜನರನ್ನು ಭೇಟಿಯಾಗಿದ್ದೇವೆ. ಅಂತೆಯೇ ನಾವು ನಾಳೆ ಪಕ್ಷದ ಕಾರ್ಯಕರ್ತರನ್ನು ಭೇಟಿಯಾಗುತ್ತೇವೆ. 

Advertisement

Udayavani is now on Telegram. Click here to join our channel and stay updated with the latest news.

Next