Advertisement

Urfi Javed: ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಕುಡುಕರಿಂದ ಉರ್ಫಿ ಜಾವೇದ್‌ಗೆ ಕಿರುಕುಳ

01:59 PM Jul 22, 2023 | Team Udayavani |

ಮುಂಬಯಿ: ತನ್ನ ಉಡುಗೆ -ತೊಡುಗೆಯಿಂದಲೇ ಸುದ್ದಿಯಾಗುವ ನಟಿ ಉರ್ಫಿ ಜಾವೇದ್ ಅವರಿಗೆ ವಿಮಾನದಲ್ಲಿ ಕೆಲ ಕುಡುಕ ವ್ಯಕ್ತಿಗಳು ಕಿರುಕುಳ ನೀಡಿದ್ದಾರೆ ಎಂದು ಇನ್‌ ಸ್ಟಾ ಗ್ರಾಮ್‌ ನಲ್ಲಿ ಅವರು ಬರೆದುಕೊಂಡಿದ್ದಾರೆ.

Advertisement

ಉರ್ಫಿ ತನ್ನ ಕೂದಲನ್ನು ಪಿಂಕ್‌ ಬಣ್ಣವಾಗಿ ಡೈ ಮಾಡಿಸಿಕೊಂಡಿದ್ದಾರೆ. ಇದೇ ನ್ಯೂ ಲುಕ್‌ ನಲ್ಲಿ ಅವರು ಜು.20 ರ ರಾತ್ರಿ ಮುಂಬಯಿಯಿಂದ ಗೋವಾಕ್ಕೆ ಹೊರಟಿದ್ದಾರೆ. ಈ ವೇಳೆ ವಿಮಾನದಲ್ಲಿ ಕೆಲ ಹುಡುಗರು ಅವರಿಗೆ ಅಸಭ್ಯವಾಗಿ ಮಾತನಾಡಿ ಕಿರುಕುಳ ನೀಡಿದ್ದಾರೆ. ಈ ಘಟನೆ ಬಗ್ಗೆ ಅವರು ಇನ್‌ ಸ್ಟಾಗ್ರಾಮ್‌ ನಲ್ಲಿ ಬರೆದುಕೊಂಡಿದ್ದಾರೆ.

“ನಿನ್ನೆ ಮುಂಬೈನಿಂದ ಗೋವಾಗೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದಾಗ ಕಿರುಕುಳ ಅನುಭವಿಸಬೇಕಾಯಿತು. ಕೆಲ ಯುವಕರು ಅಸಹ್ಯಕರ ಮಾತುಗಳನ್ನು ಹೇಳುತ್ತಿದ್ದರು. ಅಸಹ್ಯವಾಗಿ ಕೆಲ ಹೆಸರುಗಳಿಂದ ಕರೆಯುತ್ತಿದ್ದರು. ಅದರಲ್ಲಿ ಒಬ್ಬರು ತಮ್ಮ ಸ್ನೇಹಿತರು ಕುಡಿದಿದ್ದಾರೆ ಎಂದಿದ್ದಾರೆ. ಈ ರೀತಿಯ ವರ್ತನೆ ಕ್ಷಮೆಗೆ ಅರ್ಹವಲ್ಲ. ನಾನು ಸಾರ್ವಜನಿಕೆ ವ್ಯಕ್ತಿ ಹೌದು. ಆದರೆ ಸಾರ್ವಜನಿಕ ಆಸ್ತಿಯಲ್ಲ” ಎಂದು ಉರ್ಫಿ ಬರೆದುಕೊಂಡಿದ್ದಾರೆ.

ಒಂದಲ್ಲ ಒಂದು ಉಡುಗೆಯಿಂದ ಸುದ್ದಿಯಾಗುವ ಫ್ಯಾಷನ್‌ ಮಾಡೆಲ್‌ ಉರ್ಫಿ ಇತ್ತೀಚೆಗೆ ಟೊಮ್ಯಾಟೋವನ್ನು ಕಿವಿಯೋಲೆಯಾಗಿ ಮಾಡಿ ಗಮನ ಸೆಳೆದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next