ಮಹಾನಗರ: ಅಸಮರ್ಪಕ ಚರಂಡಿ ಕಾಮ ಗಾರಿ ಹಿನ್ನೆಲೆಯಲ್ಲಿ ಫುಟ್ಪಾತ್ ಅನ್ನು ಅವೈಜ್ಞಾನಿಕವಾಗಿ ನಿರ್ಮಿಸಿದ ಕಾರಣ ಬಿಜೈ ಸಮೀಪದಲ್ಲಿ ಪಾದಚಾರಿಗಳು ನಿತ್ಯ ಅಪಾಯಕಾರಿ ಸ್ಥಿತಿ ಎದುರಿಸುವಂತಾಗಿದೆ ಎಂಬ ಆರೋಪ ಕೇಳಿಬಂದಿದೆ.
ಕೆಎಸ್‌ಆರ್‌ಟಿಸಿಯಿಂದ ಸರ್ಕೀಟ್ ಹೌಸ್ ಭಾಗಕ್ಕೆ ಹೋಗುವ ರಸ್ತೆಯ ಎಡ ಭಾಗದಲ್ಲಿ ಚರಂಡಿ ಕಾಮಗಾರಿ ಯನ್ನು ಪಾಲಿಕೆ ಕೈಗೆತ್ತಿಕೊಂಡಿದೆ. ಇದೇ ರಸ್ತೆಯಲ್ಲಿರುವ ಖಾಸಗಿ ಸಮುಚ್ಚಯವೊಂದರ ಮುಂಭಾಗದಲ್ಲಿಯೂ ಚರಂಡಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಆದರೆ ಸಮುಚ್ಚ ಯವು ರಸ್ತೆಗಿಂತ ಎತ್ತರದಲ್ಲಿರುವ ಕಾರಣದಿಂದ ಫುಟ್ಪಾತ್‌ನ ಎತ್ತರವನ್ನು ಪಾಲಿಕೆಯು ಅಸಮರ್ಪಕ ರೀತಿಯಲ್ಲಿ ಏರಿಸುವ ಮೂಲಕ ಪಾದಚಾರಿಗಳಿಗೆ ಸಮಸ್ಯೆ ಸೃಷ್ಟಿಸಿದೆ.
ಸಮರ್ಪಕವಾಗಿದ್ದ ಫುಟ್ಪಾತ್‌ನ್ನು ಚರಂಡಿ ಕಾಮ ಗಾರಿಯ ಹಿನ್ನೆಲೆಯಲ್ಲಿ ಇದನ್ನು ತೆಗೆದು ಪುನರ್ ನಿರ್ಮಿ ಸಲಾಗಿದೆ. ಈ ಕಾಮಗಾರಿ ಮಾಡುವಾಗ ನಡೆದಾಡಲು ಅವಕಾಶವಿಲ್ಲದ ರೀತಿಯಲ್ಲಿ ಕೆಲಸ ಮಾಡಲಾಗಿದೆ ಎಂಬುದು ಸ್ಥಳೀಯರ ಆಕ್ಷೇಪ. ಹೀಗಾಗಿ ಫುಟ್ಪಾತ್‌ನಿಂದ ಸಮುಚ್ಚಯಕ್ಕೆ ಹೋಗಬೇಕಾದರೆ ಹತ್ತಿಕೊಂಡು ತೆರಳಬೇಕಿರುವುದರಿಂದಾಗಿ ಮಹಿಳೆಯರು, ಹಿರಿಯರು, ಮಕ್ಕಳು ಕಷ್ಟದಿಂದ ನಡೆದುಕೊಂಡು ಹೋಗಬೇಕಿದೆ.
ಈ ಮಧ್ಯೆ ಸಮುಚ್ಚಯದಲ್ಲಿರುವ ಅಂಗಡಿಗೆ ಹೋಗಿ ರಸ್ತೆಗೆ ಬರುವಾಗಲೂ ಅಪಾಯಕಾರಿ ಸ್ಥಿತಿಯಲ್ಲಿ ನಡೆಯ ಬೇಕು. ಸ್ವಲ್ಪ ಎಚ್ಚರ ತಪ್ಪಿದರೂ ಇಲ್ಲಿ ದೊಪ್ಪನೆ ಬೀಳುವ ಪರಿಸ್ಥಿತಿ ಇದೆ. ಕೆಲವೇ ದಿನಗಳ ಹಿಂದೆ ಒಂದೆರಡು ಜನ ಇದೇ ಕಾರಣದಿಂದ ಬಿದ್ದಿದ್ದಾರೆ ಎಂದು ಸ್ಥಳೀಯರು ತಿಳಿಸಿ ದ್ದಾರೆ. ಮೇಲಿನಿಂದ ಬರುವಾಗ ಇಳಿಜಾರು ಮಾದರಿಯಲ್ಲಿ ಫುಟ್ಪಾತ್ ಇರುವುದರಿಂದ ಈ ಸಮಸ್ಯೆ ಎಂಬುದು ಸಾರ್ವಜನಿಕರ ಆರೋಪ.
ಸಮಸ್ಯೆ ಪರಿಹಾರಕ್ಕೆ ಕ್ರಮ
ಬಿಜೈ ರಸ್ತೆಯ ಒಂದು ಸಮುಚ್ಚಯದ ಭಾಗದಲ್ಲಿ ಫುಟ್ಪಾತ್ ಸಮಸ್ಯೆಯ ಬಗ್ಗೆ ಪಾಲಿಕೆ ಗಮನಕ್ಕೆ ಬಂದಿದೆ. ಅಲ್ಲಿನ ಖಾಸಗಿ ಸಮುಚ್ಚಯದವರು ಪರ್ಯಾಯ ವ್ಯವಸ್ಥೆ ಮಾಡಬೇಕಿದೆ. ಇಲ್ಲಿ ಮೆಟ್ಟಿಲು ಅಥವಾ ಗೋಡೆ ಕಟ್ಟಿ ಒಂದು ಭಾಗದಲ್ಲಿ ಮಾತ್ರ ಜನರಿಗೆ ಓಡಾಡಲು ಅವಕಾಶ ಕಲ್ಪಿಸುವ ಕುರಿತಂತೆ ಬುಧವಾರ ವಸತಿ ಸಮುಚ್ಚಯದ ಮಾಲಕರ ಜತೆಗೆ ಮಾತುಕತೆ ನಡೆಸಲಾಗುವುದು.
– ಲ್ಯಾನ್ಸಿಲಾಟ್ಪಿಂಟೋ,
ಕಾರ್ಪೊರೇಟರ್