Advertisement
ಅಂಪಾರು ಪೇಟೆ ಬೈಂದೂರು- ವಿರಾಜಪೇಟೆ ಹಾಗೂ ಕುಂದಾಪುರ- ಶಿವಮೊಗ್ಗ ರಾಜ್ಯ ಹೆದ್ದಾರಿ ಹಾದುಹೋಗಿದೆ. ಪೇಟೆಯಲ್ಲಿ ಆಗಾಗ ಅಪಘಾತಗಳು ನಡೆಯುತ್ತಿರುತ್ತವೆ. ಇದನ್ನು ತಪ್ಪಿಸುವ ಉದ್ದೇಶದಿಂದ ಲೋಕೋಪಯೋಗಿ ಇಲಾಖೆ ಒಂದು ದೊಡ್ಡದಾದ ಸರ್ಕಲ್ ನಿರ್ಮಾಣಕ್ಕೆ ಮುಂದಾಗಿದೆ.
ನಾಲ್ಕು ಮಾರ್ಗಗಳಲ್ಲಿ ಎರಡು ಮಾರ್ಗಗಳು ಮಾತ್ರ ಸರ್ಕಲ್ ಬಳಸಿದರೆ, ಉಳಿದ ಎರಡು ಮಾರ್ಗಗಳು ಸರ್ಕಲ್ ಬಳಸದೆ ನೆರವಾಗಿ ಸಾಗುತ್ತವೆ. ಇದರ ಪರಿಣಾಮ ಮೊದಲಿನಂತೆ ಪೇಟೆಯ ಸರ್ಕಲ್‌ನಲ್ಲಿ ಅಪಘಾತಗಳು ನಡೆಯುವ ಸಾಧ್ಯತೆ ಇದೆ. ವಿರಾಜಪೇಟೆ ರಾಜ್ಯ ಹೆದ್ದಾರಿಯಿಂದ ಕೊಲ್ಲೂರಿನಿಂದ ಧರ್ಮಸ್ಥಳಕ್ಕೆ ಹೋಗುವ ವಾಹನ ಸವಾರರಿಗೆ, ಕುಂದಾಪುರದಿಂದ ಶಿವಮೊಗ್ಗದ ಕಡೆಗೆ ಹೋಗುವ ವಾಹನ ಸವಾರರು ಈ ಸರ್ಕಲ್ ಬಳಸುತ್ತಿಲ್ಲ. ಸಿದ್ದಾಪುರ – ಕೊಲ್ಲೂರಿಗೆ ಹಾಗೂ ಕುಂದಾಪುರದಿಂದ ಕೊಲ್ಲೂರು ಹಾಗೂ ಶಂಕರನಾರಾಯಣ ಕಡೆಗಳಿಗೆ ಹೋಗುವ ವಾಹನ ಸವಾರರಿಗೆ ಮಾತ್ರ ಸರ್ಕಲ್ ಬಳಕೆಯಾಗುತ್ತಿದೆ.
Related Articles
ಕೋಟಿ ಮೊತ್ತ ವ್ಯಯಮಾಡಿಯೂ ಮೊದಲಿನಂತೆ ಅಪಘಾತಗಳು ನಡೆಯುವುದಾದರೆ ಸರ್ಕಲ್ ನಿರ್ಮಾಣ ಅಗತ್ಯ ಇದೆಯೇ? ಅವೈಜ್ಞಾನಿಕ ಯೋಜನೆಯಿಂದಾಗಿ ಅಸುರಕ್ಷಿತವಾಗಿದೆ. ನಿರ್ಮಾಣ ಹಂತದಲ್ಲಿಯೇ ಪ್ಲಾನ್ ಬದಲಾಯಿಸಿ ಎಂಬ ಬೇಡಿಕೆಯನ್ನು ಸಾರ್ವಜನಿಕರು ಇಟ್ಟಿದ್ದಾರೆ.
Advertisement