Advertisement

Kannada Cinema: ‘ಅನ್ಲಾಕ್ ರಾಘವ’ನ ಮತ್ತೊಂದು ಹಾಡು ಬಂತು

03:07 PM Nov 07, 2023 | Team Udayavani |

ಈಗಾಗಲೇ ತನ್ನ ಬಹುತೇಕ ಕೆಲಸಗಳನ್ನು ಪೂರ್ಣಗೊಳಿಸಿ ತೆರೆಗೆ ಬರಲು ತಯಾರಾಗುತ್ತಿರುವ “ಅನ್ಲಾಕ್‌ ರಾಘವ’ ಸಿನಿಮಾದ ಹಾಡೊಂದು ಇತ್ತೀಚೆಗೆ ಬಿಡುಗಡೆಯಾಗಿದೆ.

Advertisement

“ನನ್ನ ಹುಡುಗಿ…’ ಎಂಬ ಹಾಡಿಗೆ ಹೃದಯಶಿವ ಸಾಹಿತ್ಯ ಬರೆದಿದ್ದು, ಅನೂಪ್‌ ಸೀಳಿನ್‌ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದಿರುವ ಈ ಹಾಡಿಗೆ “ಕಾಂತಾರ’ ಸಿನಿಮಾದ “ವರಾಹ ರೂಪಂ…’ ಖ್ಯಾತಿಯ ಸಾಯಿ ವಿಘ್ನೇಶ್‌ ಧ್ವನಿಯಾಗಿದ್ದಾರೆ. “ಅನ್ಲಾಕ್‌ ರಾಘವ’ ಸಿನಿಮಾದ ನಾಯಕ ನಟ ಮಿಲಿಂದ್‌ ಗೌತಮ್‌ ಹುಟ್ಟುಹಬ್ಬದಂದು ಚಿತ್ರತಂಡ ಈ ಹಾಡನ್ನು ಬಿಡುಗಡೆ ಮಾಡಿದೆ.

ಇದೇ ವೇಳೆ ಮಾತನಾಡಿದ “ಅನ್ಲಾಕ್‌ ರಾಘವ’ ಸಿನಿಮಾದ ನಿರ್ದೇಶಕ ದೀಪಕ್‌ ಮಧುವನಹಳ್ಳಿ, “ಈಗಾಗಲೇ “ಅನ್ಲಾಕ್‌ ರಾಘವ’ ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿದ್ದು, ಸಿನಿಮಾದ ಪೋಸ್ಟ್‌ ಪ್ರೊಡಕ್ಷನ್‌ ವರ್ಕ್‌ ಬಿರುಸಿನಿಂದ ಸಾಗಿದೆ. ಸದ್ಯದಲ್ಲೇ ಪ್ರಥಮ ಪ್ರತಿ ಹೊರಬರಲಿದೆ. ನಾಯಕ ಮಿಲಿಂದ್‌ ಹುಟ್ಟುಹಬ್ಬದ ಪ್ರಯುಕ್ತ ಸಿನಿಮಾದ ಈ ಹಾಡನ್ನು ಬಿಡುಗಡೆ ಮಾಡಿದ್ದೇವೆ. ಈ ಹಾಡಿನ ಚಿತ್ರೀಕರಣ ಚಿತ್ರದುರ್ಗದಲ್ಲಿ ಎರಡು ದಿನಗಳ ಕಾಲ ನಡೆದಿದೆ. ಮುರಳಿ ಮಾಸ್ಟರ್‌ ಈ ಹಾಡಿಗೆ ನೃತ್ಯ ಸಂಯೋಜನೆ ಮಾಡಿದ್ದಾರೆ’ ಎಂದರು.

“ಅನಾÉಕ್‌ ರಾಘವ’ ಸಿನಿಮಾಕ್ಕೆ ಸತ್ಯಪ್ರಕಾಶ್‌ ಕಥೆ ಬರೆದಿದ್ದು, ದೀಪಕ್‌ ಮಧುವನಹಳ್ಳಿ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿಬರುತ್ತಿದೆ. ನಾಯಕ ಮಿಲಿಂದ್‌ ಕೂಡ ಸಿನಿಮಾದ ಬಗ್ಗೆ ಸಾಕಷ್ಟು ನಿರೀಕ್ಷೆಯ ಮಾತುಗಳನ್ನಾಡಿದ್ದಾರೆ.

ನಾಯಕಿ ರೆಚೆಲ್‌ ಡೇವಿಡ್‌, ಛಾಯಾಗ್ರಾಹಕ ಲವಿತ್‌, ಸಂಕಲನಕಾರ ಅಜಯ್‌ ಹಾಗೂ ನೃತ್ಯ ಸಂಯೋಜಕ ಮುರಳಿ ಮಾಸ್ಟರ್‌ ಮೊದಲಾದವರು ಹಾಡಿನ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.

Advertisement
Advertisement

Udayavani is now on Telegram. Click here to join our channel and stay updated with the latest news.

Next