Advertisement

ರಾಯಚೂರು ವಿವಿಗೆ ಪ್ರತ್ಯೇಕ ಸಿಬ್ಬಂದಿ ನೇಮಕಾತಿ: ಆಗ್ರಹ

04:59 PM Mar 21, 2017 | Team Udayavani |

ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯದಿಂದ ಬೇರ್ಪಟ್ಟು ರಾಯಚೂರಿನಲ್ಲಿ ನೂತನವಾಗಿ ಉದಯಿಸುತ್ತಿರುವ ವಿವಿಗೆ ಹೊಸ ಹುದ್ದೆ ಸೃಜಿಸಿ ಪ್ರತ್ಯೇಕ ಸಿಬ್ಬಂದಿ ನೇಮಕ ಮಾಡಬೇಕು ಎಂದು ಗುಲಬರ್ಗಾ ವಿವಿ ಶಿಕ್ಷಕೇತರ ನೌಕರರ ಒಕ್ಕೂಟದ ನೇತೃತ್ವದಲ್ಲಿ ಶಿಕ್ಷಕ ಹಾಗೂ ಶಿಕ್ಷಕೇತರ ನೌಕರರ ಎಲ್ಲ ಸಂಘಟನೆಗಳ ವೇದಿಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಗ್ರಹಿಸಿತು. 

Advertisement

ಈಚೆಗೆ ನಗರಕ್ಕೆ ಆಗಮಿಸಿದ್ದ ಮುಖ್ಯಮಂತ್ರಿಗಳನ್ನು ಭೇಟಿಯಾದ ವೇದಿಕೆ ಸದಸ್ಯರು ನೂತನವಾಗಿ ಸ್ಥಾಪನೆಯಾಗಲಿರುವ ರಾಯಚೂರಿನಲ್ಲಿ ವಿವಿಗೆ ಗುವಿವಿಯಿಂದ ಸಿಬ್ಬಂದಿಯನ್ನು ವರ್ಗಾವಣೆ ಮಾಡಬಾರದು. ರಾಯಚೂರು ವಿವಿಗೆ ಹೊಸ ಹುದ್ದೆಗಳನ್ನು ಸೃಜಿಸಬೇಕು ಎಂದು ಮನವಿ ಸಲ್ಲಿಸಿ ಆಗ್ರಹಿಸಿದರು. 

ಅಲ್ಲದೆ, ನಿವೃತ್ತಿ ವೇತನಕ್ಕೆ ವಿಶೇಷ ಅನುದಾನ 371ನೇ (ಜೆ) ವಿಶೇಷ ಕಲಂನ ಅಡಿಯಲ್ಲಿ ಎಲ್ಲ ಶಿಕ್ಷಕ, ಶಿಕ್ಷಕೇತರ ಹುದ್ದೆಗಳನ್ನು ಭರ್ತಿ ಮಾಡಬೇಕು. ಹೈದ್ರಾಬಾದ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅನುದಾನದಲ್ಲಿ ಪ್ರತಿಶತ 10ರಷ್ಟುನ್ನು ಗುವಿವಿಗೆ ಮಂಜೂರು ಮಾಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದರು. 

ಗುಲಬರ್ಗಾ ವಿವಿ ಶಿಕ್ಷಕೇತರ ನೌಕರರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಬಿ.ಎಂ. ರುದ್ರವಾಡಿ, ಉಪಾಧ್ಯಕ್ಷ ಪ್ರಕಾಶ ಹದನೂರು, ಆರ್‌.ಎಸ್‌. ಹೊಸಮಠ, ಶಂಕರ ವೈದ್ಯ, ಗುವಿವಿ ಸ್ನಾತಕೋತ್ತರ ಶಿಕ್ಷಕರ ಸಂಘದ ಉಪಾಧ್ಯಕ್ಷ ಪ್ರೋ| ಜಗನ್ನಾಥ ಸಿಂಧೆ, ಕೆ.ಎಸ್‌.ಮಾಲಿಪಾಟೀಲ ಹಾಗೂ ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next