Advertisement

1850ಕ್ಕೂ ಹೆಚ್ಚು ಭಾಷೆ ಇದ್ದರೂ ನಾವೆಲ್ಲರೂ ಒಂದೇ

11:39 AM Jan 27, 2019 | |

ತಿಪಟೂರು: ನಮ್ಮ ರಾಷ್ಟ್ರಧ್ವಜ, ರಾಷ್ಟ್ರಗೀತೆ, ರಾಷ್ಟ್ರ ಲಾಂಛನ, ಭಾಷೆ ನಮ್ಮ ದೇಶಕ್ಕೆ ನಮಗೆ ಶೋಭೆ ಯಾಗಿದ್ದು, ಭಾರತೀಯ ಹೆಮ್ಮೆಯ ಮಕ್ಕಳಾದ ನಾವೆಲ್ಲರೂ ಅನ್ಯ ಸಂಸ್ಕೃತಿ ಪ್ರೀತಿಸಿದರೂ ನಮ್ಮ ಸಂಸ್ಕೃತಿಯಲ್ಲಿ ಜೀವಿಸಿ ದೇಶಕಟ್ಟುವ ಜೊತೆ ದೇಶಕ್ಕೆ ಹೆಮ್ಮೆ ತರಬೇಕೆಂದು ಎಂದು ಉಪ ವಿಭಾಗಾಧಿಕಾರಿ ಎಸ್‌.ಪೂವಿತಾ ತಿಳಿಸಿದರು.

Advertisement

ನಗರದ ಕಲ್ಪತರು ಕ್ರೀಡಾಂಗಣದಲ್ಲಿ ನಡೆದ 70ನೇ ಗಣರಾಜ್ಯೋತ್ಸವ ಸಮಾರಂಭದ ಧ್ವಜಾ ರೋಹಣ ನೆರವೇರಿಸಿ ಮಾತನಾಡಿದ ಅವರು, ನಮ್ಮ ದೇಶದಲ್ಲಿ 1850ಕ್ಕೂ ಹೆಚ್ಚು ಭಾಷೆ, 25ಕ್ಕೂ ಹೆಚ್ಚು ಧರ್ಮ, ನೂರಾರು ಸಂಸ್ಕೃತಿ, ಹಲವಾರು ಹಬ್ಬ ಆಚರಣೆಗಳು ಇವೆ. ಆದರೆ, ಎಲ್ಲರಿಗೂ ಕಾನೂನು ಒಂದೇ. ಡಾ.ಬಿ.ಆರ್‌.ಅಂಬೇಡ್ಕರ್‌ರವರ ಮುಂದಾಲೋಚನೆ ಯಿಂದ ಪವಿತ್ರ ಸಂವಿಧಾನ ರಚಿಸಿ ಅದರಡಿಯಲ್ಲಿ ಎಲ್ಲರೂ ಜೀವಿಸುವಂತೆ ಅಗತ್ಯ ಕಾನೂನು ರೂಪಿಸಿದರು. ದೇಶದ ಮಹಿಳೆಯರು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದು, ಪುರುಷನಿಗೆ ಸರಿಸಮಾನಳು ಅನಿಸಿಕೊಂಡಿದ್ದಾಳೆ. ಇಂದಿನ ಮಕ್ಕಳೇ ಭವಿಷ್ಯದ ಪ್ರಜೆಗಳಾಗಿದ್ದು, ಪ್ರತಿಯೊಬ್ಬರೂ ತಮ್ಮ ಮಕ್ಕಳನ್ನು ಉನ್ನತ ವ್ಯಾಸಂಗ ಮಾಡಿಸುವತ್ತ ಗಮನ ನೀಡಬೇಕು ಎಂದರು.

ಸಹಕಾರ ಮುಖ್ಯ: ಅಧ್ಯಕ್ಷತೆ ವಹಿಸಿದ್ದ ಶಾಸಕ ಬಿ.ಸಿ.ನಾಗೇಶ್‌ ಮಾತನಾಡಿ, ಬ್ರಿಟಿಷರು ನಮ್ಮ ದೇಶವನ್ನು ಛಿದ್ರಗೊಳಿಸಿ ಸಂಪತ್ತು ಲೂಟಿ ಮಾಡಿ ನಮ್ಮನ್ನು ಆಳುತ್ತಿದ್ದರೂ ಮಹನ್‌ ಹೋರಾಟ ಗಾರರು ರಕ್ಷಿಸಿದರು. ಸೈನಿಕರು, ಪೊಲೀಸ್‌ ಪಡೆಯ ಕಾವಲಿನಿಂದ ನಾವು ಗಣರಾಜ್ಯೋತ್ಸವ ಆಚರಣೆ ಮಾಡುತ್ತಿದ್ದೇವೆ. ಪ್ರಪಂಚವೇ ನಮ್ಮ ಭಾರತೀಯ ವಿಜ್ಞಾನದ ಸಾಧನೆಗಳ ಕಡೆ ನೋಡು ವಂಥ ಸಾಧನೆ ಮಾಡಿದ್ದೇವೆ.

ಆದರೆ, ದೇಶದಲ್ಲಿ ಅನೈತಿಕತೆ, ಭ್ರಷ್ಠಾಚಾರ, ಉಗ್ರರ ಆಟಾಟೋಪ ಗಳು ತಾಂಡವ ವಾಡುತ್ತಿದ್ದು, ಮುಂದಿನ ದಿನ ಗಳಲ್ಲಿ ಭಾರತ ಇವುಗಳನ್ನೆಲ್ಲ ಮಟ್ಟ ಹಾಕಲಿದ್ದು ಇದಕ್ಕೆ ಪ್ರತಿಯೊಬ್ಬರ ಸಹಕಾರ ಮುಖ್ಯವಾಗಿದೆ ಎಂದರು. ತಾಲೂಕು ಮಟ್ಟದ ಎಲ್ಲಾ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ಪೊಲೀಸರಿಂದ ಆಕರ್ಷಕ ಪಥ ಸಂಚಲನಾ ಕಾರ್ಯ ಕ್ರಮವಿತ್ತು.

ಶಾಲಾ ಮಕ್ಕಳು ಸ್ವಾತಂತ್ರ್ಯ ಹೋರಾಟ ಗಾರರ ವಿವಿಧ ವೇಷಭೂಷಣ ಧರಿಸಿ ಗಮನ ಸೆಳೆದರು. ನಂತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯ ಕ್ರಮಗಳು ನಡೆದವು.

Advertisement

ಕಾರ್ಯಕ್ರಮದಲ್ಲಿ ಜಿಪಂ ಸದಸ್ಯರಾದ ಜಿ.ನಾರಾಯಣ್‌, ಮಮತಾ ಉಮೇಶ್‌, ತಾಪಂ ಅಧ್ಯಕ್ಷ ಎನ್‌.ಎಂ.ಸುರೇಶ್‌, ನಗರಸಭೆ ಅಧ್ಯಕ್ಷ ಟಿ.ಎನ್‌.ಪ್ರಕಾಶ್‌, ಉಪಾಧ್ಯಕ್ಷೆ ಜಹೇರಾಜಬೀನ್‌, ಕನ್ನಡ ಸಾಹಿತ್ಯ ಪರಿಷತ್‌ ತಾಲೂಕು ಅಧ್ಯಕ್ಷ ಕೆ.ಬಾಲಕೃಷ್ಣ ಎಪಿಎಂಸಿ ಅಧ್ಯಕ್ಷ ಎಂ.ಬಿ.ಲಿಂಗ ರಾಜು, ಉಪಾಧ್ಯಕ್ಷ ಬಜಗೂರು ಮಂಜುನಾಥ್‌, ಪೊಲೀಸ್‌ ಉಪಾಧೀಕ್ಷಕ ಎಂ.ಕಲ್ಯಾಣ್‌ ಕುಮಾರ್‌, ತಹಶೀಲ್ದಾರ್‌ ಆರತಿ, ಪೌರಾಯುಕ್ತ ಮಧು, ತಾಲ್ಲೂಕು ಪಂಚಾಯಿತಿ ಇಓ ಸಿ. ಮಧನ್‌ಮೋಹನ್‌, ನಗರಸಭೆ ಸದಸ್ಯೆ ರೇಖಾ ಅನೂಪ್‌, ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು.

ಸಂವಿಧಾನ ಕಾನೂನು ಕಟ್ಟಳೆಗಳ ಬಂಧನ

ಶಿರಾ: ಸಂವಿಧಾನ ಎಂದರೆ ನಮ್ಮನ್ನು ನಾವೇ ನಿಯಂತ್ರಣಕ್ಕೆ ಒಳಪಡಿಸಿಕೊಳ್ಳುವ ಕಾನೂನು ಕಟ್ಟಳೆಗಳ ಬಂಧನ. ಡಾ. ಅಂಬೇಡ್ಕರ್‌ ಇದರ ನೇತೃತ್ವ ವಹಿಸಿಕೊಂಡು ಪ್ರಪಂಚದಲ್ಲೇ ಉತ್ಕೃಷ್ಟ ವಾದ ಸಂವಿಧಾನ ನೀಡಿದ್ದಾರೆ ಎಂದು ನಗರದ ವಿವೇಕಾನಂದ ಕ್ರೀಡಾಂಗಣ ದಲ್ಲಿ ಜರುಗಿದ 70 ನೇ ಗಣ ರಾಜ್ಯೋತ್ಸವ ದಿನಾಚರಣೆಯ ಅಧ್ಯಕ್ಷತೆ ವಹಿಸಿದ್ದ ಶಾಸಕ ಬಿ. ಸತ್ಯನಾರಾಯಣ ತಿಳಿಸಿದರು. ಧ್ವಜಾರೋಹಣ ನಡೆಸಿದ ನಂತರ ಗೌರವ ಸ್ವೀಕರಿಸಿ ಮಾತನಾಡಿದ ತಾಲೂಕು ದಂಡಾಧಿಕಾರಿ ರಂಗೇಗೌಡ, ಮಹತ್ಮಾಗಾಂಧಿಯವರ ಪ್ರಕಾರ ದುರ್ಬಲ ರಿಗೂ ಸಮಾನ ಅಧಿಕಾರ ಹಾಗೂ ಅವಕಾಶ ಕಲ್ಪಿಸುವುದೇ ಪ್ರಜಾಪ್ರಭುತ್ವ ಎಂದು ತಿಳಿಸಿದರು. ತಾಲೂಕಿನ ವಿವಿಧ ಶಾಲೆಗಳು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮಗಳು ಎಲ್ಲರ ಕಣ್ಮನ ಸೆಳೆಯುವಂತಿತ್ತು.

ಸಾಂಸ್ಕೃತಿಕ ಕಾರ್ಯಕ್ರಮ: ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಕುಮಾರ್‌ ಹಾಗೂ ಎಲ್ಲಾ ದೈಹಿಕ ಶಿಕ್ಷಕರ ಸಹ ಯೋಗದೊಂದಿಗೆ ಪಥಸಂಚಲನೆ ರಾಷ್ಟ್ರಗೀತೆ, ವಂದೇ ಮಾತರಂ ಗೀತೆ ಹಾಗೂ ಸರಳ ಸಲಕರಣೆಗಳ ಲಘು ವ್ಯಾಯಾಮ ಮತ್ತು ಸಾಂಸ್ಕೃತಿಕ ಕಾರ್ಯ ಕ್ರಮ ನಡೆಸಿಕೊಟ್ಟರು. ನಗರದ ಎಲ್ಲಾ ಶಾಲಾ-ಕಾಲೇಜು ಹಾಗೂ ಸರ್ಕಾರಿ ಕಚೇರಿ ಗಳು ಧ್ವಜಾರೋಹಣ ಮಾಡುವುದರ ಮೂಲಕ ಗಣರಾಜ್ಯೋತ್ಸವ ದಿನಾಚರಣೆ ಆಚರಿಸಿದರು.

ಸನ್ಮಾನ: ಈ ವೇಳೆ ತಾಲೂಕಿನಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇಕಡ 100ರಷ್ಟು ಫ‌ಲಿತಾಂಶ ಪಡೆದ 11 ಶಾಲೆಗಳ ಮುಖ್ಯಸ್ಥ ರನ್ನು ಸನ್ಮಾನಿಸಲಾಯಿತು. ಇತ್ತಿಚೆಗೆ ರಾಷ್ಟ್ರ ಪ್ರಶಸ್ತಿ ಪುರಸ್ಕೃತೆ ಅಂಗನವಾಡಿ ಕಾರ್ಯಕರ್ತೆ ಮಹದೇವಮ್ಮರವರ ಜೊತೆಗೆ ಕ್ರೀಡೆ ಯಲ್ಲಿ ರಾಷ್ಟ್ರಮಟ್ಟದಲ್ಲಿ ಸಾಧನೆಗೈದ ವಿದ್ಯಾರ್ಥಿ ರೋಹಿತ್‌ ಎಂ., ವಿಕಲ ಚೇತನ ರಾಜ್ಯ ಪ್ರಶ‌ಸ್ತಿ ವಿಜೇತ ಮೋಹನ್‌ ವಿ.ಎಸ್‌.ತಿಪ್ಪೇಸ್ವಾಮಿ ಹಾಗೂ ಮಂಜುನಾಥ್‌ರವರನ್ನು ಸನ್ಮಾನಿಸ ಲಾಯಿತು. ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷ ಅಮಾನುಲ್ಲಾಖಾನ್‌, ತಾಪಂ ಅಧ್ಯಕ್ಷೆ ಹಂಸವೇಣಿ ಶ್ರೀನಿವಾಸ್‌, ಆರಕ್ಷಕ ಉಪ ನಿರೀಕ್ಷಕ ವೆಂಕಟಸ್ವಾಮಿ, ನಗರಸಭೆ ಸದಸ್ಯ ರಾದ ಎಸ್‌.ಜೆ.ರಾಜಣ್ಣ, ಖಾದರ್‌, ಶಾರದ, ಸರಿತಾ, ರೇಣುಕಮ್ಮ, ಎಪಿಎಂಸಿ ಅಧ್ಯಕ್ಷ ನರಸಿಂಹೇಗೌಡ, ತಾಲೂಕು ವೈದ್ಯಾಧಿ ಕಾರಿ ಅಬ್ಜಲ್‌ ಉರ್‌ ರೆಹಮಾನ್‌, ಅರಣ್ಯ ವಲಯ ಅಧಿಕಾರಿ ರಾಧಾ, ಸಹಾಯಕ ಕೃಷಿ ನಿರ್ದೇಶಕ ರಂಗನಾಥ್‌, ಶಾಲೆಯ ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next