Advertisement

ಅಮೆರಿಕದ ಮಾಜಿ ಡೇವಿಸ್‌ ಕಪ್‌ ನಾಯಕ ಪ್ಯಾಟ್ರಿಕ್‌ ಮೆಕೆನ್ರೊಗೆ ಸೋಂಕು ದೃಢ

09:12 AM Apr 02, 2020 | Hari Prasad |

ನ್ಯೂಯಾರ್ಕ್‌: ಅಮೆರಿಕದ ಮಾಜಿ ಡೇವಿಸ್‌ ಕಪ್‌ ನಾಯಕ ಪ್ಯಾಟ್ರಿಕ್‌ ಮಕೆನ್ರೊ ಅವರಿಗೆ ಕೋವಿಡ್ 19 ವೈರಸ್ ಸೋಂಕು ತಗಲಿರುವುದು ದೃಢಪಟ್ಟಿದ್ದು, ಈ ಬಗ್ಗೆ ಅವರು ಸಾಮಾಜಿಕ ಜಾಲತಾಣದಲ್ಲಿ ವೀಡಿಯೊ ಒಂದನ್ನು ಹಾಕಿದ್ದಾರೆ.

Advertisement

10 ದಿನಗಳ ಹಿಂದೆ ಸೋಂಕಿಗೆ ಸಂಬಂಧಿಸಿ ಸ್ವಲ್ಪಮಟ್ಟಿನ ಲಕ್ಷಣ ಕಂಡುಬಂದಾಗ ಅವರು ನ್ಯೂಯಾರ್ಕ್‌ನ ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲಿ ನಡೆದ ಪರೀಕ್ಷೆಯಲ್ಲಿ ಅವರಿಗೆ ಸೋಂಕು ಇರುವುದು ದೃಢಪಟ್ಟಿದೆ.

ಪ್ಯಾಟ್ರಿಕ್‌ ಮೆಕೆನ್ರೊ ಅವರು ಎಂಟು ಬಾರಿಯ ಚಾಂಪಿಯನ್‌ ಜಾನ್‌ ಮೆಕೆನ್ರೊ ಅವರ ಕಿರಿಯ ಸಹೋದರರಾಗಿದ್ದಾರೆ. ನಾನು ಆರೋಗ್ಯವಾಗಿರುವುದು ಒಳ್ಳೆಯ ಸಮಾಚಾರ. ನಾನು ಶೇಕಡಾ ನೂರರಷ್ಟು ಚೆನ್ನಾಗಿದ್ದೇನೆ ಎಂದು ಅವರು ಹೇಳಿದ್ದಾರೆ.

ಪ್ಯಾಟ್ರಿಕ್‌ ಅವರು ತನ್ನ ಟೆನಿಸ್‌ ಬಾಳ್ವೆ ವೇಳೆ ಒಂದು ಸಿಂಗಲ್ಸ್‌ ಮತ್ತು 16 ಡಬಲ್ಸ್‌ ಪ್ರಶಸ್ತಿ ಗೆದ್ದಿದ್ದಾರೆ. 1989ರ ಫ್ರೆಂಚ್‌ ಓಪನ್‌ ಇದರಲ್ಲಿ ಸೇರಿದೆ. ಸಹೋದರ ಜಾನ್‌ ಬಳಿಕ ಯುಎಸ್‌ ಡೇವಿಸ್‌ ಕಪ್‌ ತಂಡದ ನಾಯಕರಾಗಿ 10 ವರ್ಷ ಕರ್ತವ್ಯ ನಿರ್ವಹಿಸಿದ್ದರು. ಅವರ ನಾಯಕತ್ವದಡಿ ಅಮೆರಿಕ 2007ರಲ್ಲಿ ಡೇವಿಸ್‌ ಕಪ್‌ ಜಯಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next