Advertisement
ಯುನೈಟೆಡ್ ಸ್ಟೇಟ್ಸ್‌ನಲ್ಲಿ ಕ್ರಿಕೆಟ್ ಅಭಿವೃದ್ಧಿಗಾಗಿ 2017ರಲ್ಲಿ ಅಮೆರಿಕ ಕ್ರಿಕೆಟ್ ಮಂಡಳಿಯನ್ನು ಸ್ಥಾಪಿಸಲಾಗಿತ್ತು. ಐಸಿಸಿಯ ಸದಸ್ಯ ರಾಷ್ಟ್ರವಾಗಲು ಅಮೆರಿಕ ಸಲ್ಲಿಸಿದ ಅರ್ಜಿಯನ್ನು ಐಸಿಸಿ ಅನುಮೋದಿಸಿದೆ. ಐಸಿಸಿ ಸದಸ್ಯ ರಾಷ್ಟ್ರವಾದ ಬಳಿಕ, ಐಸಿಸಿ ಅಭಿವೃದ್ಧಿ ಹಣಕಾಸು ನೀತಿಗೆ ಅನುಗುಣವಾಗಿ ಅಮೆರಿಕ ಕ್ರಿಕೆಟ್ ಮಂಡಳಿ ಆರ್ಥಿಕ ನೆರವು ಪಡೆಯಲಿದೆ. ಜತೆಗೆ ಅಮೆರಿಕದಲ್ಲಿ ಸ್ಥಳೀಯ ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟ್ ಅಯೋಜನೆಗೆ ಅನುಮತಿಯನ್ನೂ ನೀಡಲಾಗುವುದು.
“ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕದಲ್ಲಿ ಕ್ರಿಕೆಟ್ ಅಭಿವೃದ್ಧಿಗಾಗಿ ಯುಸ್‌ಎ ಕ್ರಿಕೆಟ್ ಮಂಡಳಿಯನ್ನು ಸ್ಥಾಪಿಸಲಾಗಿದೆ. ಅಮೆರಿಕದಲ್ಲಿ ಕ್ರಿಕೆಟಿನ ನೂತನ ಪಯಣ ಆರಂಭವಾಗಲಿದೆ. ಅಮೆರಿಕವನ್ನು ಐಸಿಸಿ ಸದಸ್ಯ ರಾಷ್ಟ್ರವನ್ನಾಗಿ ಮಾಡಲು ನಿರ್ಧರಿಸಿದ ಕಳೆದ 18 ತಿಂಗಳು ಶ್ರಮಪಟ್ಟ ಸಾವಿರಾರು ಸ್ವಯಂಸೇವಕರ ಸಮಯ ಹಾಗೂ ತ್ಯಾಗಕ್ಕೆ ಸಿಕ್ಕ ಫಲವಿದು. ಈ ಮೂಲಕ ವಿಶ್ವ ಕ್ರಿಕೆಟಿನ ಅಭಿವೃದ್ಧಿಗೆ ಶ್ರಮಿಸುತ್ತೇವೆ ಎಂಬ ಪ್ರತಿಜ್ಞೆ ಮಾಡುತ್ತೇವೆ’ ಎಂದು ಯುಎಸ್‌ಎ ಕ್ರಿಕೆಟಿನ ಅಧ್ಯಕ್ಷ, ಭಾರತೀಯ ಮೂಲದ ಪರಾಗ್ ಮರಾಠೆ ಆತ್ಮವಿಶ್ವಾಸದಿಂದ ಹೇಳಿದರು.