Advertisement

ಕೋವಿಡ್ 19 ವೈರಸ್ ಕುರಿತು ವಿಶ್ವಸಂಸ್ಥೆಯಲ್ಲಿ ಚರ್ಚಿಸಲು ಚೀನಾ ಅಡ್ಡಗಾಲು

10:04 AM Mar 28, 2020 | Hari Prasad |

ವಿಶ್ವಸಂಸ್ಥೆ: ಕೋವಿಡ್ 19 ವೈರಸ್ ಬಗ್ಗೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಚರ್ಚೆಯಾಗಬೇಕು ಎಂದು ಮಂಡಿಸಲಾಗಿದ್ದ ಪ್ರಸ್ತಾವನೆಗೆ ಯುಎಸ್‌ಎಸ್‌ಸಿ ಅಧ್ಯಕ್ಷ ಸ್ಥಾನದಲ್ಲಿರುವ ಚೀನಾ ಅಡ್ಡಗಾಲಿಟ್ಟಿದೆ.

Advertisement

ಭದ್ರತಾ ಮಂಡಳಿ ಸದಸ್ಯ ರಾಷ್ಟ್ರ ಈಸ್ಟೋನಿಯಾ, ಗುರುವಾರದ ಸಭೆಯಲ್ಲಿ ಕೊರೊನಾ ವಿಚಾರ ಚರ್ಚೆಗೆ ಪ್ರಸ್ತಾವನೆ ಸಲ್ಲಿಸಿತ್ತು. ಈ ಪ್ರಸ್ತಾವನೆಯನ್ನು ಆಕ್ಷೇಪಿಸಿದ ಮಂಡಳಿಯ ಇತರ ಸದಸ್ಯ ರಾಷ್ಟ್ರಗಳು ಹಾಗೂ ಚೀನಾದ ಆಪ್ತ ಮಿತ್ರರಾದ ರಷ್ಯಾ ಹಾಗೂ ದಕ್ಷಿಣ ಆಫ್ರಿಕಾ ವಿರೋಧ ವ್ಯಕ್ತಪಡಿಸಿದವು.

ಮಂಡಳಿ ಅಧ್ಯಕ್ಷ ಸ್ಥಾನದಲ್ಲಿರುವ ಚೀನಾದ ಅಧಿಕಾರಾವಧಿ ಮಾ.31ರ ಬಳಿಕ ಕೊನೆಗೊಳ್ಳಲಿದೆ. ಆನಂತರ ಅಧಿಕಾರ, ಮತ್ತೂಂದು ಸದಸ್ಯ ರಾಷ್ಟ್ರವಾದ ಡೊಮಿನಿಕನ್‌ ರಿಪಬ್ಲಿಕ್‌ಗೆ ಹಸ್ತಾಂತರಗೊಳ್ಳಲಿದೆ. ಚರ್ಚೆ ನಡೆಸಲು ವೇದಿಕೆ ಸಜ್ಜಾಗಬಹುದು ಎಂದು ನಿರೀಕ್ಷಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next