Advertisement

ಹಿಂಗ್ಲಿಷ್‌ ಕೋರ್ಸ್‌ಗೆ ಸಿಕ್ಕಾಪಟ್ಟೆ ಡಿಮ್ಯಾಂಡ್‌

06:15 AM Mar 11, 2018 | |

ಲಂಡನ್‌: ಇಲ್ಲಿನ ಕಾಲೇಜೊಂದರಲ್ಲಿ ಕಳೆದ ವರ್ಷ ಆರಂಭವಾಗಿರುವ ಹಿಂಗ್ಲಿಷ್‌(ಹಿಂದಿ-ಇಂಗ್ಲಿಷ್‌ ಮಿಶ್ರಣ) ಭಾಷಾ ಕೋರ್ಸ್‌ಗೆ ವಿದ್ಯಾರ್ಥಿಗಳಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಹೀಗಾಗಿ, ಪ್ರಸಕ್ತ ವರ್ಷವೂ ಕೋರ್ಸ್‌ ಅನ್ನು ಹೆಚ್ಚಿನ ವಿದ್ಯಾರ್ಥಿಗಳಿಗೆ ಲಭ್ಯವಾಗುವಂತೆ ಮುಂದುವರಿಸಲು ಪೋರ್ಟ್ಸ್ಮೌತ್‌ ಕಾಲೇಜು ನಿರ್ಧರಿಸಿದೆ.

Advertisement

ಈ ಕುರಿತು ಮಾತನಾಡಿರುವ ಕಾಲೇಜಿನ ಇ6 ಪ್ರೋಗ್ರಾಂ ಮುಖ್ಯಸ್ಥ ಜೇಮ್ಸ್‌ ವಾಟರ್ಸ್‌, “ಕಳೆದ ವಾರವಷ್ಟೇ ಒಂದು ಕೋರ್ಸ್‌ ಮುಕ್ತಾಯವಾಗಿದೆ. ಅಷ್ಟರಲ್ಲೇ ಬಹಳಷ್ಟು ವಿದ್ಯಾರ್ಥಿಗಳು ಹಾಗೂ ಪೋಷಕರು ಹಿಂಗ್ಲಿಷ್‌ ಕೋರ್ಸ್‌ ಕುರಿತು ಆಸಕ್ತಿ ವ್ಯಕ್ತಪಡಿಸಿದ್ದಾರೆ. ಹಿಂಗ್ಲಿಷ್‌ ಕೋರ್ಸ್‌ ಪಡೆದರೆ, ಭಾರತೀಯ ಕಂಪನಿಗಳಲ್ಲಿ ಕೆಲಸ ಗಿಟ್ಟಿಸಿಕೊಳ್ಳುವುದು ಸುಲಭ ಎಂಬುದು ವಿದ್ಯಾರ್ಥಿಗಳ ಅರಿವಿಗೆ ಬಂದಿದೆ. ಕಳೆದ ಬಾರಿ 18 ವಿದ್ಯಾರ್ಥಿಗಳಷ್ಟೇ ಈ ಕೋರ್ಸ್‌ ಪಡೆದಿದ್ದರು. ಈ ಬಾರಿ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗಲಿದೆ,’ ಎಂದಿದ್ದಾರೆ. ಐರೋಪ್ಯ ಒಕ್ಕೂಟದಿಂದ ಬ್ರಿಟನ್‌ ಪ್ರತ್ಯೇಕವಾಗುವ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಉದ್ಯೋಗಾವಕಾಶದ ಕುರಿತು ಯುವಜನರಲ್ಲಿ ಕಳವಳವಿದ್ದು, ಈ ಕಾರಣಕ್ಕಾಗಿಯೇ ಹೆಚ್ಚಿನವರು ಭಾರತೀಯ ಕಂಪನಿಗಳಲ್ಲಿ ಉದ್ಯೋಗ ಪಡೆಯಲು ಹಿಂಗ್ಲಿಷ್‌ ಕೋರ್ಸ್‌ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ ಎಂದೂ ಅವರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next