ನವದೆಹಲಿ: ಲೋಕಸಭೆಯಲ್ಲಿ ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಅವರು 2023-24ನೇ ಸಾಲಿನ ಬಜೆಟ್ ಮಂಡಿಸುತ್ತಿದ್ದ ವೇಳೆ ಬಾಯ್ತಪ್ಪಿನಿಂದ ಹೇಳಿದ ಒಂದು ಪದದ ಪರಿಣಾಮ ಸದನ ನಗೆಗಡಲಲ್ಲಿ ತೇಲಿದ ಘಟನೆ ನಡೆಯಿತು.
ಇದನ್ನೂ ಓದಿ:38 ವರ್ಷಗಳ ನಂತರ,ನಾನು ಚಿತ್ರದ ಮುಖ್ಯ ಪೋಸ್ಟರ್‌ನಲ್ಲಿದ್ದೇನೆ: ಅನುಪಮ್ ಖೇರ್ ಸಂಭ್ರಮ
15 ವರ್ಷಕ್ಕಿಂತ ಹಳೆಯ ಸರ್ಕಾರಿ ವಾಹನಗಳನ್ನು ಗುಜರಿಗೆ ಹಾಕಲಾಗುವುದು ಎಂದು ತಿಳಿಸಿದ ವೇಳೆ ನಿರ್ಮಲಾ ಸೀತಾರಾಮನ್, ಓಲ್ಡ್ ಪೊಲ್ಯೂಟಿಂಗ್ ಎಂಬ ಪದದ ಬದಲು ಓಲ್ಡ್ ಪೊಲಿಟಿಕಲ್ ವಾಹನ ಎಂಬ ಪದ ಬಳಸಿದ್ದರು. ಕೂಡಲೇ ತಪ್ಪಿನ ಅರಿವಾಗಿ ಪೊಲ್ಯೂಟಿಂಗ್ ಎಂದು ಸರಿಪಡಿಸಿಕೊಂಡರೂ ಕೂಡಾ, ಸದನದಲ್ಲಿ ಪ್ರತಿಪಕ್ಷ ಸದಸ್ಯರು ಕಾಲೆಳೆಯುವ ಮೂಲಕ ನಗೆಯ ಅಲೆಗೆ ಕಾರಣವಾಯಿತು.
ತಕ್ಷಣವೇ ಬಾಯ್ತಪ್ಪಿನಿಂದ ಆದ ಪ್ರಮಾದ ಅರಿತ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಕ್ಷಮಿಸಿ…ಓಲ್ಡ್ ಪೊಲ್ಯೂಟಿಂಗ್ ಎಂದು ಹೇಳಿ, ತಪ್ಪನ್ನು ಕಂಡು ಹಿಡಿದಿರುವುದಕ್ಕೆ ಧ್ಯಾಂಕ್ಸ್ ಎಂದು ಹೇಳುವ ಮೂಲಕ ಬಜೆಟ್ ಮಂಡನೆಯನ್ನು ಮುಂದುವರಿಸಿದ್ದ ಪ್ರಸಂಗ ನಡೆಯಿತು.