Advertisement
ಸರಕಾರಿ ಮತ್ತು ಅನುದಾನಿತ ಶಾಲಾ ವಿದ್ಯಾರ್ಥಿಗಳಿಗೆ ರಾಜ್ಯ ಶಿಕ್ಷಣ ಇಲಾಖೆ ಮತ್ತು ಕೇಂದ್ರ ಸರಕಾರದ ಸರ್ವಶಿಕ್ಷಾ ಅಭಿಯಾನ (ಸಮಗ್ರ ಶಿಕ್ಷಣ)ದಿಂದ ತಲಾ ಒಂದು ಜತೆ ಸಮವಸ್ತ್ರವನ್ನು ಪ್ರತೀ ವರ್ಷ ನೀಡಲಾಗುತ್ತದೆ.
Related Articles
Advertisement
ಸಮವಸ್ತ್ರಕ್ಕೆ ಸಂಬಂಧಿಸಿ ರಾಜ್ಯ ಮಟ್ಟದಲ್ಲಿ ಟೆಂಡರ್ ಪ್ರಕ್ರಿಯೆ ಪೂರ್ಣ ಗೊಂಡಿರುವುದರಿಂದ ಶೀಘ್ರದಲ್ಲಿ ವಿದ್ಯಾರ್ಥಿಗಳಿಗೆ ಸಮವಸ್ತ್ರ ಸಿಗುವ ಸಾಧ್ಯತೆಯಿದೆ. ಶಿಕ್ಷಣ ಇಲಾಖೆಯ ನಾಲ್ಕು ವಿಭಾಗಕ್ಕೂ ಏಕಕಾಲದಲ್ಲಿ ಪೂರೈಕೆ ಆಗಲಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಶೂ, ಸಾಕ್ಸ್ ಅನುಮಾನಪ್ರತೀ ವರ್ಷ ಸರಕಾರಿ ಶಾಲಾ ಮಕ್ಕಳಿಗೆ ಸಮವಸ್ತ್ರದ ಜತೆಗೆ ಶೂ, ಸಾಕ್ಸ್ ಕೂಡ ವಿತರಣೆ ಮಾಡ ಲಾಗುತ್ತಿತ್ತು. ಇವುಗಳ ಖರೀದಿ ಪ್ರಕ್ರಿಯೆ ಯನ್ನು ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ (ಎಸ್‌ಡಿಎಂಸಿ)ಯ ಮೂಲಕ ಮಾಡ ಲಾಗುತ್ತದೆ. ಇದಕ್ಕಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ ಯಿಂದ ಶಾಲೆಯ ಜಂಟಿ ಖಾತೆಗೆ ಅನುದಾನ ನೀಡಲಾಗುತ್ತದೆ. ಆದರೆ ಪ್ರಸಕ್ತ ಸಾಲಿನಲ್ಲಿ ಶೂ, ಸಾಕ್ಸ್ ಖರೀದಿಗೆ ಅನುದಾನ ಬಂದಿಲ್ಲ. ಶೂ ಬದಲಿಗೆ ಚಪ್ಪಲಿ ನೀಡಲಾಗುತ್ತಿತ್ತು. ಆದರೆ ಈ ವರ್ಷ ಯಾವುದೇ ಸೂಚನೆ ಬಂದಿಲ್ಲ ಎಂದು ಎಸ್‌ಡಿಎಂಸಿ ಸದಸ್ಯರು ತಿಳಿಸಿದ್ದಾರೆ. ಉಡುಪಿ ಜಿಲ್ಲೆಯ ಸರಕಾರಿ, ಅನುದಾನಿತ ಶಾಲೆಯ ಸುಮಾರು 80 ಸಾವಿರ, ದ.ಕ. ಜಿಲ್ಲೆಯ ಸುಮಾರು 1.20 ಲಕ್ಷ ವಿದ್ಯಾರ್ಥಿಗಳಿಗೆ ಸಮವಸ್ತ್ರ ಸರಕಾರದಿಂದ ನೀಡಲಾಗುತ್ತದೆ. ಸಮವಸ್ತ್ರ ಪೂರೈಕೆಯಾದ ಕೂಡಲೇ ಶಾಲೆಗಳಲ್ಲಿ ಮಕ್ಕಳಿಗೆ ವಿತರಣೆ ಮಾಡಲಾಗುತ್ತದೆ.
-ಮಲ್ಲೇಸ್ವಾಮಿ, ಎನ್.ಎಚ್. ನಾಗೂರ
ಶಿಕ್ಷಣ ಇಲಾಖೆ ಉಪನಿರ್ದೇಶಕರು, ದ.ಕ., ಉಡುಪಿ ಜಿಲ್ಲೆ