ಡೆಹ್ರಾಡೂನ್: ವಿಧಾನಸಭೆ ಚುನಾವಣೆ ಘೋಷಣೆಯಾಗಿರುವ ಹಿಮಾಚಲ ಪ್ರದೇಶದದಲ್ಲಿ ರಾಜಕೀಯ ಪಕ್ಷಗಳು ತಮ್ಮ ಪ್ರಚಾರದಲ್ಲಿ ತೊಡಗಿದೆ. ಚುನಾವಣಾ ಕಣ ರಂಗೇರಿದ್ದು, ಆಡಳಿತಾರೂಢ ಬಿಜೆಪಿಯು ತನ್ನ ಪ್ರಣಾಳಿಕೆ ಬಿಡುಗಡೆ ಮಾಡಿದೆ.
ಹಿಮಾಚಲ ಪ್ರದೇಶದಲ್ಲಿ ಪಕ್ಷ ಅಧಿಕಾರಕ್ಕೆ ಬಂದರೆ ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರುವುದಾಗಿ ಬಿಜೆಪಿ ಪ್ರಣಾಳಿಕೆಯಲ್ಲಿ ಭರವಸೆ ನೀಡಿದೆ.
ಇದನ್ನೂ ಓದಿ:ಇಮ್ರಾನ್ ಖಾನ್ ಪುರಾವೆ ನೀಡಿದರೆ ನಾನು ಕೂಡಲೇ ರಾಜೀನಾಮೆ ನೀಡುತ್ತೇನೆ: ಪಾಕ್ ಪಿಎಂ ಷರೀಫ್
ಬಿಜೆಪಿಯ ಪ್ರಣಾಳಿಕೆಯಾದ ಸಂಕಲ್ಪ ಪತ್ರ 2022ನ್ನು ಬಿಡುಗಡೆ ಮಾಡಿ ಮಾತನಾಡಿದ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ, ‘’ಏಕರೂಪ ನಾಗರಿಕ ಸಂಹಿತೆ ಜಾರಿಗಾಗಿ ತಜ್ಞರ ಸಮಿತಿಯನ್ನು ರಚಿಸಲಾಗುವುದು ಮತ್ತು ಅವರ ವರದಿಯ ಆಧಾರದ ಮೇಲೆ ಅದನ್ನು ರಾಜ್ಯದಲ್ಲಿ ತರಲಾಗುವುದು. ಹಂತ ಹಂತವಾಗಿ ಎಂಟು ಲಕ್ಷ ಉದ್ಯೋಗ ಸೃಷ್ಟಿ ಮತ್ತು ಐದು ಹೊಸ ವೈದ್ಯಕೀಯ ಕಾಲೇಜುಗಳ ಸ್ಥಾಪನೆ ಮಾಡಲಾಗುತ್ತದೆ’ ಎಂದರು.
“ಈ ‘ಸಂಕಲ್ಪ ಪತ್ರ’ 11 ಬದ್ಧತೆಗಳ ಮೇಲೆ ನಿಂತಿದೆ. ಈ ಬದ್ಧತೆಗಳು ಸಮಾಜದಲ್ಲಿ ಏಕರೂಪತೆಯನ್ನು ತರುತ್ತದೆ, ಯುವಕರು ಮತ್ತು ರೈತರನ್ನು ಸಬಲಗೊಳಿಸುತ್ತದೆ, ತೋಟಗಾರಿಕೆಯನ್ನು ಬಲಪಡಿಸುತ್ತದೆ, ಸರ್ಕಾರಿ ನೌಕರರಿಗೆ ನ್ಯಾಯವನ್ನು ನೀಡುತ್ತದೆ ಮತ್ತು ಧಾರ್ಮಿಕ ಪ್ರವಾಸೋದ್ಯಮದ ಪ್ರಗತಿಗೆ ಕಾರಣವಾಗುತ್ತದೆ ” ಎಂದು ನಡ್ಡಾ ಹೇಳಿದರು.