Advertisement
ಬೆಳ್ತಂಗಡಿ: ಮಂಗಳೂರು -ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿಗೆ ತಾಗಿ ಕೊಂಡಿರುವ ಚಾರ್ಮಾಡಿ ಗ್ರಾ. ಪಂ.ನ ಚಿಬಿದ್ರೆ ಗ್ರಾಮದ ಹಾಲಾಜೆ ಎಂಬಲ್ಲಿ ಕೆರೆಯೊಂದರ ಹೂಳೆತ್ತುವ ಅವೈಜ್ಞಾನಿಕ ಕಾಮಗಾರಿಯಿಂದ ಅನಾರು ಮಲೆಕುಡಿಯ ಕಾಲನಿ, ಕತ್ತರಿಗುಡ್ಡೆ ಕಾಲನಿ ಸಂಪರ್ಕ ರಸ್ತೆ ಕುಸಿತಗೊಂಡು ಈ ಭಾಗದ ಜನರು ಸಂಪರ್ಕ ಕಡಿದುಕೊಳ್ಳುವ ಭೀತಿಯಲ್ಲಿದ್ದರೆ, ಹೆದ್ದಾರಿಯ ಪಕ್ಕದಲ್ಲೇ ಇರುವ ಕೆರೆ ಇನ್ನಷ್ಟು ಕುಸಿತಗೊಂಡರೆ ರಾಷ್ಟ್ರೀಯ ಹೆದ್ದಾರಿಗೂ ಕುತ್ತು ಬರಲಿದೆ.
ಒಂದೆಡೆ ರಾಷ್ಟ್ರೀಯ ಹೆದ್ದಾರಿ, ಇನ್ನೊಂದೆಡೆ ಅನಾರು ಮಲೆಕುಡಿಯರ ಕಾಲನಿ ಹಾಗೂ ಕತ್ತರಿಗುಡ್ಡೆಗೆ ಸಂಪರ್ಕ ರಸ್ತೆ. ಇದಕ್ಕೆ ತಾಗಿಕೊಂಡಿರುವ ಸರಕಾರಿ ಜಮೀನಿನಲ್ಲಿದ್ದ ಕೆರೆ ಕಳೆದ ಕೆಲವು ವರ್ಷಗಳಿಂದ ಪಾಳುಬಿದ್ದ ಸ್ಥಿತಿಯಲ್ಲಿತ್ತು. ಇಲ್ಲಿನ ಗ್ರಾ.ಪಂ. ಉದ್ಯೋಗ ಖಾತರಿ ಯೋಜನೆಯಲ್ಲಿ ಹೂಳೆತ್ತುವ ಕಾರ್ಯಕ್ಕೆ ಮುಂದಾಗಿ ಕೆರೆಯ ಸುತ್ತ ಪೊದರುಗಳನ್ನು ತೆಗೆದು ಶುಚಿಗೊಳಿಸಿದ್ದರು. ಬಳಿಕ ಈ ಕಾಮಗಾರಿ ಕೈಬಿಟ್ಟಿದ್ದರು. ಇದಾದ ಅನಂತರ ಜಿಲ್ಲಾ ಪಂಚಾಯತ್‌ನಿಂದ ಕೆರೆಯ ಹೂಳೆತ್ತಲು 2 ಲಕ್ಷ ರೂ. ಅನುದಾನ ಮಂಜೂರಾಗಿ, ಹೂಳೆತ್ತುವ ಕಾರ್ಯದೊಂದಿಗೆ ಕೆರೆಯನ್ನು ಇನ್ನಷ್ಟು ಅಗಲ ಮಾಡಲಾಯಿತು.
Related Articles
Advertisement
ಕೊಳವೆ ಬಾವಿ ಕುಸಿತದ ಭೀತಿಜೆಸಿಬಿ ಯಂತ್ರಗಳನ್ನು ಉಪಯೋಗಿಸಿ ಕೆರೆಯ ಕಾಮಗಾರಿ ನಡೆಸಲಾಗಿದ್ದು ಕೆರೆಯ ಸುತ್ತಲೂ ಮಣ್ಣು ಕುಸಿಯುತ್ತಿದೆ. ಗ್ರಾ.ಪಂ.ನ ಕೊಳವೆ ಬಾವಿ ಇದರ ದಡದಲ್ಲಿಯೇ ಇದ್ದು ಕುಸಿತದ ಭೀತಿಯಲ್ಲಿದೆ. ಚಾಲನೆಯಲ್ಲಿರುವ ಕುಡಿಯುವ ನೀರಿನ ಕೊಳವೆ ಬಾವಿಯನ್ನು ಉಳಿಸದಿದ್ದರೆ ನೀರಿನ ಸಮಸ್ಯೆಯೂ ಉದ್ಭವಿಸಬಹುದು. ಕಾಲನಿ ರಸ್ತೆ
ಅನಾರು ಹಾಗೂ ಕತ್ತರಿಗುಡ್ಡೆ ಕಾಲನಿ ಸಹಿತ ಈ ಭಾಗದಲ್ಲಿ ಸುಮಾರು 200ಕ್ಕೂ ಹೆಚ್ಚು ಮನೆಗಳಿವೆ. ಕುಸಿತದಿಂದ ಈ ಭಾಗದ ಜನರು ರಸ್ತೆ ಸಂಪರ್ಕ ಕಡಿದುಕೊಳ್ಳುವ ಭಯದಲ್ಲಿದ್ದಾರೆ. ಸುಮಾರು 20 ಅಡಿಗಳಷ್ಟು ಅಗಲವಿದ್ದ ಡಾಮರು ರಸ್ತೆ ಇದೀಗ ಕೇವಲ 8 ಅಡಿ ರಸ್ತೆಯಾಗಿ ಮಾರ್ಪಟ್ಟಿದೆ. ರಿûಾ ಹಾಗೂ ಜೀಪುಗಳು ಮಾತ್ರ ಇದರಲ್ಲಿ ಸಂಚರಿಸಲು ಸಾಧ್ಯವಾಗಿದೆ. ಈ ಭಾಗದಲ್ಲಿ ಶಾಲಾ ವಾಹನಗಳು ಸಂಚಾರ ಸ್ಥಗಿತಗೊಳಿಸಿದ್ದು ಮಕ್ಕಳನ್ನು ಶಾಲೆಗೆ ಕಳುಹಿಸಲೂ ಜನರು ಪರದಾಡು
ವಂತಾಗಿದೆ. ಮನೆ, ಕಟ್ಟಡ ಕಟ್ಟಲು ಯಾವುದೇ ಸಾಮಗ್ರಿಗಳನ್ನು, ಸಲಕರಣೆಗಳನ್ನು ಘನ ವಾಹನಗಳಲ್ಲಿ ಕೊಂಡೊಯ್ಯು
ವಂತಿಲ್ಲ. ಕಾಮಗಾರಿಗಳನ್ನು ನಿಲ್ಲಿಸಬೇಕಾದ ಅನಿವಾರ್ಯ ಎದುರಾಗಿದೆ. ಈ ರಸ್ತೆ ಕುಸಿದರೆ ಪರ್ಯಾಯ ರಸ್ತೆಗಳೇ ಇಲ್ಲವಾಗಿದ್ದು, ಕೂಡಲೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂಬುದು ಇಲ್ಲಿಯ ಜನರ ಒತ್ತಾಯವಾಗಿದೆ. ತಾತ್ಕಾಲಿಕ ಮರಳಿನ ಚೀಲದ ತಡೆಗೋಡೆ
ಕಾಮಗಾರಿ ನಡೆಸಿ ಕೆರೆ ಕುಸಿತದಿಂದ ಉಳಿದ ರಸ್ತೆಯ ಸಂಪರ್ಕ ಕಡಿತವಾಗದಂತೆ ಕುಸಿದ ಭಾಗದಲ್ಲಿ ಮರಳಿನ ಚೀಲ ಹಾಕಲಾಗಿದೆ. ಆದರೆ ಅದು ಸಾಕಷ್ಟು ಸಂಖ್ಯೆಯಲ್ಲಿಲ್ಲದ ಕಾರಣ ಈ ಚೀಲಗಳಿಂದ ರಸ್ತೆ ಉಳಿಸಲು ಸಾಧ್ಯವಾಗಲಾರದು. ಹೆದ್ದಾರಿಗೂ ಅಪಾಯ
ಇದ್ದಷ್ಟೇ ಅಗಲದಲ್ಲಿ ಕೆರೆಯ ಹೂಳೆತ್ತುವ ಕೆಲಸ ಮಾಡಿದ್ದರೆ ಇಂತಹ ಕುಸಿತ ಉಂಟಾಗುತ್ತಿರಲಿಲ್ಲ. 4 ಸುತ್ತಲೂ ಕೆರೆಯು ಕುಸಿಯದಂತೆ ತಡೆಗೋಡೆಯ ನಿರ್ಮಾಣ ಮಾಡಲೇ ಬೇಕಾದ ಅನಿವಾರ್ಯತೆ ಇದೆ. ಹೆದ್ದಾರಿ ಹಾದು ಹೋಗುವ ಭಾಗದ ಕಡೆ ಗಮನ ಹರಿಸಬೇಕಾಗಿದೆ.