Advertisement
ಸುಮಾರು 15ಕ್ಕೂ ಹೆಚ್ಚು ಪರಿಶಿಷ್ಟ ಜಾತಿ ಮತ್ತು ಪಂಗಡದ ಕುಟುಂಬಗಳು ವಾಸ್ತವ್ಯವಿರುವ ಮಜ್ಜಗುಡ್ಡೆ ಕಾಲನಿಗೆ ನೇರ ಸಂಪರ್ಕವಾಗಿರುವ ಈ 1 ಕಿ.ಮೀ. ಉದ್ದದ ಮಣ್ಣಿನ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಮಳೆ ಗಾಲದಲ್ಲಿ ವಾಹನ ಸಂಚಾರ ಮಾತ್ರವಲ್ಲ ಜನರು ನಡೆದು ಹೋಗಲೂ ಸಾಧ್ಯ ವಿಲ್ಲದಂತಿದೆ.
ಬರೆದರೂ ಫಲವಿಲ್ಲ
ಸ್ಥಳೀಯ ರಾಜಕಾರಣಿಗಳು ಗ್ರಾಮಸ್ಥರ ಬೇಡಿಕೆಗೆ ಮನ್ನಣೆ ನೀಡದೇ ಇದ್ದಾಗ ರಸ್ತೆಯ ಫಲಾನುಭವಿ ಗಿರೀಶ್ ಗೌಡ ಕೊರುಂದೂರು ಅವರು ಗ್ರಾಮಸ್ಥರ ಸಹಿಯೊಂದಿಗೆ 6 ತಿಂಗಳುಗಳ ಹಿಂದೆ ನೇರವಾಗಿ ಪ್ರಧಾನಿ ಕಾರ್ಯಾಲಯಕ್ಕೆ ಪತ್ರ ಬರೆದು ರಸ್ತೆಯನ್ನು ಅಭಿವೃದ್ಧಿಪಡಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಆದರೆ ಬಳಿಕ ದೇಶದೆಲ್ಲೆಡೆ ಕೋವಿಡ್ ಬಾಧಿಸಿದ ಕಾರಣದಿಂದಾಗಿ ಆ ಪತ್ರಕ್ಕೂ ಯಾವುದೇ ಸ್ಪಂದನೆ ಸಿಕ್ಕಿಲ್ಲ.
Related Articles
ಇದೀಗ ಕಡಬ ಗ್ರಾಮ ಪಂಚಾಯತ್ ಪಟ್ಟಣ ಪಂಚಾಯತ್ ಆಗಿ ಮೇಲ್ದರ್ಜೆಗೇರಿದೆ. ಇನ್ನಾದರೂ ಈ ರಸ್ತೆಗೆ ಕಾಯಕಲ್ಪ ದೊರೆಯಬಹುದೇ ಎನ್ನುವುದು ಸ್ಥಳೀಯ ಜನರ ಆಶಯವಾಗಿದೆ.
Advertisement
ಬೇಡಿಕೆ ಈಡೇರಲಿಈ ರಸ್ತೆಯನ್ನು ಉಪ ಯೋಗಿಸುವ ಯಾವುದೇ ಜನ ಪ್ರತಿನಿಧಿ ಇಲ್ಲದಿರುವುದು ನಮ್ಮ ಬೇಡಿಕೆ ಇದುವರೆಗೆ ಈಡೇರದಿರಲು ಕಾರಣ. ರಾತ್ರಿ ನಡೆದು ಹೋಗುವ ಜನ ರಿಗೆ ಅನುಕೂಲವಾಗುವಂತೆ ಬೀದಿ ದೀಪವನ್ನೂ ಈ ರಸ್ತೆಗೆ ಅಳವಡಿಸಿಲ್ಲ. ಪ.ಪಂ. ವ್ಯವಸ್ಥೆಯಲ್ಲಾದರೂ ನಮ್ಮ ಬೇಡಿಕೆ ಈಡೇರಲಿ ಎಂಬುದು ಸ್ಥಳೀಯ ಮುಖಂಡ ಗಿರೀಶ್ ಗೌಡ ಕೊರುಂದೂರು ಅವರ ಅಭಿಪ್ರಾಯ. ಆದ್ಯತೆ ಮೇರೆಗೆ ಅಭಿವೃದ್ಧಿ
ಕಡಬ ಈಗಾಗಲೇ ಪಟ್ಟಣ ಪಂಚಾಯತ್ ಆಗಿ ಮೇಲ್ದರ್ಜೆಗೇರಿದ್ದು, ಕಡಬ ಮತ್ತು ಕೋಡಿಂಬಾಳ ಗ್ರಾಮಗಳ ಮೂಲ ಸೌಕರ್ಯಗಳಿಗಾಗಿ ವಿಶೇಷ ಅನುದಾನಗಳು ಲಭಿಸಲಿವೆ. ಆ ಸಂದರ್ಭದಲ್ಲಿ ಆದ್ಯತೆಯ ಮೇಲೆ ಕೊರುಂದೂರು-ಮಜ್ಜಗುಡ್ಡೆ ರಸ್ತೆಯನ್ನು ಅಭಿವೃದ್ಧಿ ಪಡಿಸಲಾಗುವುದು.
-ಅರುಣ್ ಕೆ., ಮುಖ್ಯಾಧಿಕಾರಿ,
ಕಡಬ ಪಟ್ಟಣ ಪಂಚಾಯತ್