Advertisement

ಕುರುಬ ಸಮಾಜದ ಇತಿಹಾಸ ಅರ್ಥೈಸುವಿಕೆ ಅಗತ್ಯ; ಶಾಸಕ ಎಸ್‌. ರಾಮಪ್ಪ

06:09 PM Jul 18, 2022 | Team Udayavani |

ದಾವಣಗೆರೆ: ರಾಜ್ಯದಲ್ಲಿ ಮೂರನೇ ಅತಿ ದೊಡ್ಡ ಹಿಂದುಳಿದ ಸಮಾಜವಾಗಿರುವ ಕುರುಬ ಸಮಾಜದ ಇತಿಹಾಸದ ಬಗ್ಗೆ ಈಗಿನ ಪೀಳಿಗೆಗೆ ತಿಳಿಸಲು ಗ್ರಂಥಗಳ ಅಧ್ಯಯನದ ಅಗತ್ಯವಿದೆ ಎಂದು ಹರಿಹರ ಶಾಸಕ ಎಸ್‌. ರಾಮಪ್ಪ ಹೇಳಿದರು.

Advertisement

ನಗರದ ಕುವೆಂಪು ಕನ್ನಡ ಭವನದಲ್ಲಿ ಕುರುಬರ ಸಾಂಸ್ಕೃತಿಕ ಪರಿಷತ್ತು ಹಾಗೂ ಜಿಲ್ಲಾ ಕುರುಬ ಸಮಾಜದ ಎಲ್ಲ ಸಂಘಟನೆಗಳ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ಕುರುಬರ ಸಂಸ್ಕೃತಿ ದರ್ಶನ ಮಾಲಿಕೆಯ 13 ಗ್ರಂಥಗಳ ಲೋಕಾರ್ಪಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕುರುಬ ಸಮಾಜದ ಅನೇಕರಿಗೆ ಸಮಾಜದ ಇತಿಹಾಸ ಅಷ್ಟಾಗಿ ಗೊತ್ತಿಲ್ಲ. ನಮ್ಮ ಸಮಾಜದ ಇತಿಹಾಸ, ಪುರಾಣ, ದೇವರು, ಸಾಮಾಜಿಕ ಕೊಡುಗೆ ಇತರೆ ಮುಖ್ಯವಾದ ವಿಚಾರಗಳನ್ನು ತಿಳಿಸಬೇಕಾಗಿದೆ ಎಂದರು.

ಕುರುಬ ಸಮಾಜದ ಅನೇಕ ಜನರಿಗೆ ಇತಿಹಾಸವೇ ತಿಳಿದಿಲ್ಲ. 12 ವರ್ಷಗಳ ಬಳಿಕ ಹೊರ ಬಂದಿರುವ ಎಲ್ಲ 13 ಗ್ರಂಥಗಳನ್ನು ಸಮಾಜದ ಪ್ರತಿಯೊಬ್ಬರೂ ಓದಬೇಕು. ಸಮಾಜದ ಸಾಧನೆಯನ್ನು ಮಕ್ಕಳಿಗೂ ಮುಟ್ಟಿಸಬೇಕು. ಕುರುಬ ಸಮಾಜದಲ್ಲಿ ಕಾಳಿದಾಸ, ಕನಕದಾಸ ಹಾಗೂ ಸಂಗೊಳ್ಳಿ ರಾಯಣ್ಣ ಮೊದಲಾದ ಸಮಾಜದ ಪ್ರಮುಖರು ಕುರುಬರನ್ನು ಮಾತ್ರವಲ್ಲದೆ ಇತರೆ ಸಮಾಜದವರನ್ನೂ ಎಚ್ಚರಿಸಿದ್ದಾರೆ ಹಾಗೂ ಮಾರ್ಗದರ್ಶನ ನೀಡಿದ್ದಾರೆ.

ಅಂತಹ ಎಲ್ಲ ಮಹನೀಯರು, ಇತಿಹಾಸ ತಿಳಿಸಲು ಗ್ರಂಥಗಳು ಬಹಳ ಪ್ರಯೋಜನಕಾರಿ ಎಂದು ಅಭಿಪ್ರಾಯಪಟ್ಟರು. ದಾವಣಗೆರೆಯಲ್ಲಿ ಆ. 3ರಂದು ನಡೆಯಲಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜನ್ಮದಿನದ ಅಮೃತಮಹೋತ್ಸವದಲ್ಲಿ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.

ಜಾನಪದ ತಜ್ಞ ಡಾ| ಮಲ್ಲಿಕಾರ್ಜುನ ಕಲಮರಹಳ್ಳಿ ಮಾತನಾಡಿ, ಗ್ರಂಥಗಳ ಲೋಕಾರ್ಪಣೆ ಕಾರ್ಯಕ್ರಮ ಸಮುದಾಯಗಳ ಸಮನ್ವಯತೆಗೆ ಸಾಕ್ಷಿಯಾಗಿದೆ. ಕುರುಬ ಸಮಾಜದ 10 ಸಂಪುಟದಲ್ಲಿ ಕುಲದ ಚರಿತ್ರೆ ಅನಾವರಣಗೊಳಿಸಿರುವುದು ಪ್ರತಿ ಸಂಸ್ಕೃತಿಯ ನಿರ್ಮಾಣವಾಗಿದೆ. ಎಲ್ಲ ತಳ ಸಮುದಾಯಗಳು ತಮ್ಮ ಕುಲದ ಚರಿತ್ರೆಯನ್ನು ಕಟ್ಟಿಕೊಳ್ಳಬೇಕಾದ ಅನಿವಾರ್ಯತೆ ಇದೆ.

Advertisement

ಜಾಗತೀಕರಣದ ಸಂದರ್ಭದಲ್ಲಿ ಕುಲ ಚಿನ್ಹೆಗಳನ್ನು ಉಳಿಸಿಕೊಳ್ಳಬೇಕಾಗಿದೆ. ಕಂಬಳಿ ಎಂಬುದು ತುಪ್ಪಳದ ವಸ್ತು ಮಾತ್ರವಲ್ಲ. ಸಾಂಸ್ಕೃತಿಕ ಗುರುತು. ದಾವಣಗೆರೆಯಲ್ಲಿ ತಯಾರಾಗುತ್ತಿದ್ದ ಕಂಬಳಿ ಈಸ್ಟ್‌ ಇಂಡಿಯಾ ಕಂಪನಿಗೂ ರವಾನೆಯಾಗುತ್ತಿತ್ತು ಎಂಬುದಾಗಿ 200 ವರ್ಷದ ಹಿಂದೆ ದಾವಣಗೆರೆಗೆ ಭೇಟಿ ನೀಡಿದ್ದ ಫ್ರಾನ್ಸಿಸ್‌ ಬುಕನನ್‌ ವಿವರಿಸಿದ್ದಾರೆ. ಸಮಾಜದ ಸಾಂಸ್ಕೃತಿಕ ಬೇರನ್ನು ಗುರುತಿಸಿಕೊಳ್ಳಬೇಕಿದೆ ಎಂದು ತಿಳಿಸಿದರು.

ಕುರುಬರ ಸಾಂಸ್ಕೃತಿಕ ಪರಿಷತ್ತು ಅಧ್ಯಕ್ಷ, ಮಾಜಿ ಸಚಿವ ಎಚ್‌.ಎಂ. ರೇವಣ್ಣ ಅಧ್ಯಕ್ಷತೆ ವಹಿಸಿದ್ದರು. ಕುಲಗುರುಗಳಾದ ಡಾ| ನಾ. ಲೋಕೇಶ್‌ ಒಡೆಯರ್‌, ಡಾ| ಉದಯಶಂಕರ್‌ ಒಡೆಯರ್‌, ಜಿಪಂ ಮಾಜಿ ಅಧ್ಯಕ್ಷ ಜಿ. ದ್ಯಾಮಪ್ಪ, ಡಾ| ಎ.ಬಿ. ರಾಮಚಂದ್ರಪ್ಪ, ಡಾ| ದಾದಾಪೀರ್‌ ನವಿಲೇಹಾಳ್‌, ಕಾ.ತ. ಚಿಕ್ಕಣ್ಣ, ಪಿ. ರಾಜಕುಮಾರ್‌ ಇತರರು ಇದ್ದರು.

Udayavani is now on Telegram. Click here to join our channel and stay updated with the latest news.

Next