ಚಿಕ್ಕಮಗಳೂರು: ತರೀಕೆರೆ ತಾಲೂಕು ಗೇರುಮರಡಿ ಗ್ರಾಮದ ಗೊಲ್ಲರಹಟ್ಟಿಯಲ್ಲಿನ ಕಂಬಂದ ರಂಗನಾಥ ಸ್ವಾಮಿ ದೇವಸ್ಥಾನದಲ್ಲಿ ತಹಶೀಲ್ದಾರ್ ವಿ.ಎಸ್.ರಾಜೀವ್ ನೇತೃತ್ವದಲ್ಲಿ ಬಾಗಿಲು ತೆರೆದು ದಲಿತ ಮುಖಂಡರು ಪೂಜೆಸಲ್ಲಿಸಿ ದರು.
ಮಂಗಳವಾರ ಸಂಜೆ ವೇಳೆಗೆ ರಾಜ್ಯ ದಲಿತ ಸ್ವಾಭಿಮಾನಿ ಒಕ್ಕೂಟದ ಮುಖಂಡರು, ತರೀಕೆರೆ ತಾಲೂಕಿನ ದಲಿತ ಮುಖಂಡರು, ಉಪವಿಭಾಧಿ ಕಾರಿ ಡಾ.ಕಾಂತರಾಜ್, ಎಎಸ್ಪಿ ಕೃಷ್ಣಮೂರ್ತಿ ಹಾಗೂ ಡಿವೈ ಎಸ್ ಪಿ ಹಾಲಮೂರ್ತಿ ರಾವ್ ಅವರ ನೇತೃತ್ವದಲ್ಲಿ ತೆರಳಿದ ಮುಖಂಡರು ದೇವಸ್ಥಾನದ ಬಾಗಿಲು ತೆರೆಸಿದರು.
ಮುಖಂಡರು ತೆರಳುವ ವೇಳೆಗೆ ದೇವಾಲಯದ ಬಾಗಿಲು ಹಾಕ ಲಾಗಿತ್ತು. ದೇವಾಲಯದ ಅರ್ಚಕ ದಲಿತ ಯುವಕ ಜೆಸಿಬಿ ಡ್ರೈವರ್ ಮೇಲಿನ ಹಲ್ಲೆ ಪ್ರಕರಣದಲ್ಲಿ ಆರೋಪಿ ಯಾಗಿದ್ದು, ತಲೆ ಮರೆಸಿಕೊಂಡಿದ್ದಾನೆ. ದೇವಾಲಯದ ಬೀಗ ಇಲ್ಲದ ಹಿನ್ನಲೆಯಲ್ಲಿ ಸ್ಥಳೀಯ ಆಚಾರಿಯನ್ನು ಕರೆಸಿಕೊಂಡ ಅಧಿಕಾರಿ ಮತ್ತು ಮುಖಂಡರು ದೇವಸ್ಥಾನದ ಬೀಗವನ್ನು ಒಡೆದು ದೇವಸ್ಥಾನದ ಬಾಗಿಲು ತೆರೆದರು.
ದೇವಸ್ಥಾನ ಬಾಗಿಲು ತೆರೆಸಿದ ಬಳಿಕ ದೇವರಿಗೆ ಪೂಜೆ ಸಲ್ಲಿಸಲಾಯಿತು. ದಲಿತ ಮುಂಖಡರ ಗ್ರಾಮ ಪ್ರವೇಶಿಸಿ ದೇವಸ್ಥಾನ ಬಾಗಿಲು ತೆರೆದು ಪೂಜೆ ಸಲ್ಲಿಸುವ ಮಾಹಿತಿ ಹಿನ್ನಲೆ ಗ್ರಾಮದಲ್ಲಿ ಬೀಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸ ಲಾಗಿತ್ತು.ದಲಿತ ಮುಖಂಡರು ಗೊಲ್ಲರಹಟ್ಟಿ ಗ್ರಾಮಕ್ಕೆ ತೆರಳುವ ಮುಂಚೆ ತರೀಕೆರೆ ತಾಲೂಕು ಕಚೇರಿಯಲ್ಲಿ ಅಧಿಕಾರಿಗಳು ಮತ್ತು ಮುಖಂಡರ ಸಭೆ ನಡೆಯಿತು.
ಈ ವೇಳೆ ದಲಿತ ಮುಖಂಡರು ಮಾತನಾಡಿ, ಯುವಕನ ಮೇಲಿನ ಹಲ್ಲೆ ಪ್ರಕರಣದಲ್ಲಿ ಗೊಲ್ಲರಹಟ್ಟಿ ಗ್ರಾಮದ 15 ಜನರ ಮೇಲೆ ಪ್ರಕರಣ ದಾಖಲಾಗಿದೆ.ಕೇವಲ 4ಜನ ಆರೋಪಿಗಳನ್ನು ಮಾತ್ರ ಬಂಧಿಸಲಾಗಿದೆ. ಬಂಧಿತ ಆರೋಪಿಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಒಂದು ವಾರದೊಳಗೆ ಎಲ್ಲಾ ಆರೋಪಿಗಳನ್ನು ಬಂಧಿಸ ಬೇಕು. ಅಸ್ಪೃಶ್ಯತೆಯ ಬಗ್ಗೆ ಗ್ರಾಮದ ಜನತೆಗೆ ಅರಿವು ಮೂಡಿಸಬೇಕು ತಾಲೂಕು ಸಮಾಜಕಲ್ಯಾಣ ಇಲಾಖೆ ಅಧಿಕಾರಿ ಮತ್ತು ತರೀಕೆರೆ ಡಿವೈಎಸ್ ಪಿ ಪ್ರಕರಣದಲ್ಲಿ ನಿರ್ಲಕ್ಷ ವಹಿಸಿದ್ದು ಅವರ ವಿರುದ್ದ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು.
ಒಂದು ವೇಳೆ ಒಂದು ವಾರದಲ್ಲಿ ಆರೋಪಿಗಳನ್ನು ಬಂಧಿಸದಿ ದ್ದರೇ ಹಾಗೂ ನಿರ್ಲಕ್ಷ ವಹಿಸಿದ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳದಿದ್ದರೇ ತರೀಕೆರೆ ಚಲೋ ಚಳುವಳಿ ಹಮ್ಮಿ ಕೊಳ್ಳುವುದಾಗಿ ಎಚ್ಚರಿಸಿದರು.
ಇತ್ತೀಗೆರೆ ಜೆಸಿಬಿ ಚಾಲಕ ಗೊಲ್ಲರಹಟ್ಟಿ ಗ್ರಾಮದಲ್ಲಿ ಹಳೇ ಮನೆಯ ಮಣ್ಣು ತೆಗೆಯುವ ವೇಳೆ ಡಿಶ್ ವೈಯರ್ ತುಂಡಾಗಿದ್ದು ಶಂಕರ್ ಎಂಬಾತ ಡ್ರೈವರ್ ಮೇಲೆ ಹಲ್ಲೆ ನಡೆಸಿದ್ದ. ಈ ಘಟನೆ ಅನೇಕ ತಿರುವುಗಳನ್ನು ಪಡೆದು ಕೊಂಡು, ದಲಿತ ಯುವಕ ಗ್ರಾಮ ಪ್ರವೇಶಿದ್ದರಿಂದ ಗ್ರಾಮದ ಕಂಬದ ರಂಗನಾಥ ಸ್ವಾಮಿ ದೇವಸ್ತಾನಕ್ಕೆ ಬೀಗ ಹಲಾಗಿದೆ ಎಂದು ದೊಡ್ಡ ಸುದ್ದಿಯಾಗಿತ್ತು. ಇದರ ಬೆನ್ನಲ್ಲೆ ಗ್ರಾಮದ ಶಾಲಾ ಮಕ್ಕಳು ಮೈಲಿಗೆ ಆಗುತ್ತದೆಂದು ಶಾಲೆಗೆ ಶೂ ಧರಿಸದೆ, ಚಪ್ಪಲಿ ಧರಿಸದೆ ತೆರಳುತ್ತಾರೆಂದು ಹೇಳಲಾಗಿತ್ತು. ಸೋಮವಾರ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾ ರಿ ಡಾ.ವಿಕ್ರಮ್ ಅಮಟೆ ಶಾಲೆಗೆ ತೆರಳಿ ವಿದ್ಯಾರ್ಥಿಗಳು ಶೂ, ಚಪ್ಪಲಿ ಧರಿಸಿ ಬರುವಂತೆ ತಿಳುವಳಿಕೆ ಹೇಳಿದ್ದರು.
ಮಂಗಳವಾರ ಮುಖಂಡರು ಮತ್ತು ಅಧಿಕಾರಿಗಳು ಗ್ರಾಮಕ್ಕೆ ತೆರಳಿ ದೇವಾಲಯದ ಬಾಗಿಲು ತೆರೆದು ಪೂಜೆ ಸಲ್ಲಿಸಿದ್ದಾರೆ. ಸದ್ಯ ಪ್ರಕರಣ ಶಾಂತವಾಗಿದೆ ಅನ್ನುವ ಹಾಗೆ ಮಾಡಿದ್ದರಾದರೂ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ.