ಮುಂಬೈ: ಇಲ್ಲಿನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ ನಲ್ಲಿ ನಿರ್ಮಾಣ ಹಂತದ ಫ್ಲೈ ಓವರ್ ಒಂದು ಕುಸಿದು ಬಿದ್ದ ಘಟನೆ ಶುಕ್ರವಾರ ನಡೆದಿದೆ. ಘಟನೆಯಲ್ಲಿ 13 ಮಂದಿ ಕಾರ್ಮಿಕರು ಗಾಯಗೊಂಡಿದ್ದಾರೆ.
ಬೆಳಗಿನ 4: 30 ರ ಸುಮಾರಿಗೆ ಬಿಕೆಸಿ ಮುಖ್ಯ ರಸ್ತೆ ಮತ್ತು ಸಾಂತಾ ಕ್ರೂಜ್-ಚೆಂಬೂರ್ ಲಿಂಕ್ ರಸ್ತೆಯನ್ನು ಸಂಪರ್ಕಿಸುವ ನಿರ್ಮಾಣ ಹಂತದಲ್ಲಿರುವ ಫ್ಲೈಓವರ್ ಕುಸಿದಿದೆ.
ಇದನ್ನೂ ಓದಿ:ತೈಲದ ತೆರಿಗೆಯನ್ನು ಬಡವರ ಯೋಜನೆಗೆ ಬಳಸಿ: ಎಚ್.ಡಿ. ಕುಮಾರಸ್ವಾಮಿ
ಪೊಲೀಸರು ಮತ್ತು ಅಗ್ನಿಶಾಮಕ ದಳದ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಧಾವಿಸಿದರು. ಗಾಯಗೊಂಡಿರುವ ಕಾರ್ಮಿಕರನ್ನು ಚಿಕಿತ್ಸೆಗಾಗಿ ಬಿಎನ್ ದೇಸಾಯಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
Related Articles
ಯಾವುದೇ ಜೀವಹಾನಿಯಾಗಿಲ್ಲ ಮತ್ತು ಯಾವುದೇ ವ್ಯಕ್ತಿ ಕಾಣೆಯಾಗಿಲ್ಲ “ಎಂದು ಡಿಸಿಪಿ (ವಲಯ 8) ಮಂಜುನಾಥ್ ಸಿಂಗೆ ಅವರು ಸುದ್ದಿಸಂಸ್ಥೆ ಎನ್ ಐಎ ಗೆ ತಿಳಿಸಿದರು. ಅಪಘಾತ ಹೇಗೆ ಸಂಭವಿಸಿತು ಎಂಬುದರ ಕುರಿತು ತನಿಖೆ ನಡೆಯುತ್ತಿದೆ ಎಂದರು.