Advertisement

ಅಟ್ಟದ ಮನೆ

06:00 AM Nov 05, 2018 | |

ಈ ಹಿಂದೆ ಅಟ್ಟ ಎಂದರೆ ಕಾಂಕ್ರಿಟ್‌ ಸ್ಲ್ಯಾಬ್ ಎಂದೇ ಆಗುತ್ತಿತ್ತು ಹಾಗೂ ಇದನ್ನು ಮನೆ ಕಟ್ಟುವಾಗಲೇ ಲಿಂಟಲ್‌ ಮಟ್ಟದಲ್ಲಿ ಎರಡು ಅಡಿ ಅಗಲ ಕೋಣೆಯ ಉದ್ದಕ್ಕೂ ಹಾಕಲಾಗುತ್ತಿತ್ತು. ಆದರೆ, ಈಗ ಅಟ್ಟಗಳನ್ನು ವೈವಿಧ್ಯಮಯ ವಸ್ತುಗಳಿಂದ ಮಾಡಬಹುದಾಗಿದೆ. ಪ್ಲೆ„ವುಡ್‌, ಸ್ಟೀಲ್‌ನ ಇಲ್ಲವೇ ಮರದ ಫ್ರೆàಮ್‌ವರ್ಕ್‌, ಮಾಡ್ಯುಲರ್‌ ಮಾದರಿಯಲ್ಲಿಯೂ ಮಾಡಬಹುದು.

Advertisement

ಪ್ರತಿಯೊಬ್ಬರೂ ಹೊಸ ವಿಷಯಗಳಿಗಾಗಿ ಹಪಹಪಿಸುತ್ತಾರೆ.ಆದರೂ ಕೆಲವೊಂದು ಕಾಲಾತೀತವಾಗಿ ಉಳಿಯುತ್ತದೆ. ಹೊಸ ರೂಪ ಪಡೆದುಕೊಳ್ಳುತ್ತಲೇ ಇರುತ್ತದೆ. ಮನೆಯ ವಿಚಾರದಲ್ಲೂ ಇದು ಸತ್ಯ. ವೈವಿಧ್ಯಮಯ ಸೂರುಗಳು ಈಗ ಲಭ್ಯವಿದ್ದರೂ, ಮಟ್ಟಸವಾದ ತಾರಸಿ ಇಲ್ಲವೇ ಇಳಿಜಾರಿನ ಸೂರುಗಳೇ ಹೆಚ್ಚು ಜನಪ್ರಿಯ. ಇನ್ನು ಕಿಟಕಿ ಬಾಗಿಲುಗಳ ವಿಷಯಕ್ಕೆ ಬಂದರೆ – ವಸ್ತು ವಿನ್ಯಾಸ ಒಂದಷ್ಟು ಬದಲಾದರೂ ಅವುಗಳ ಮೂಲ ಸ್ವರೂಪ ಹಾಗೆಯೇ ಇದೆ.  ಸ್ವಲ್ಪ ದಿನ ಹೆಚ್ಚು ಬಳಕೆಯಲ್ಲಿರದ ಈ ಅಟ್ಟ ಅಂದರೆ “ಆ್ಯಟಿಕ್‌’ ಇತ್ತೀಚಿನ ದಿನಗಳಲ್ಲಿ ಹೆಚ್ಚು ಜನಪ್ರಿಯವಾಗುತ್ತಿದೆ.  

ನಗರ ಪ್ರದೇಶಗಳಲ್ಲಿ, ಅದರಲ್ಲೂ, ಮೊದಲ ತಲೆಮಾರು ನೆಲೆಸಿದ್ದಂಥ ಮನೆಗಳಲ್ಲಿ ಹಳೆಯ ಸಾಮಾನು ಸರಂಜಾಮು ಹೆಚ್ಚಿರುವುದಿಲ್ಲ. ಹಾಗಾಗಿ, ಎಲ್ಲವೂ ಕೈಗೆಟಕುವ ಎತ್ತರದಲ್ಲಿ ಅಂದರೆ ಸುಮಾರು ಏಳು ಅಡಿಗಳ ಒಳಗೆ ಶೆಲ್ಪ್, ವಾರ್ಡ್‌ರೋಬ್‌ ಇತ್ಯಾದಿಯನ್ನು ಲಿಂಟಲ್‌ ಮಟ್ಟಕ್ಕೆ ಮಾತ್ರ ಸೀಮಿತಗೊಳಿಸುತ್ತಾರೆ. ನಗರಗಳಿಗೆ ಬಂದವರು ಅದರ ಆಕರ್ಷಣೆಗೆ ಒಳಗಾಗಿ ಇಲ್ಲಿಯೇ ನೆಲೆನಿಂತರೆ, ಸಾಕಷ್ಟು ವಸ್ತುಗಳು ಸೇರಿಹೋಗುತ್ತವೆ. ಜೊತೆಗೆ ಹಬ್ಬ ಹರಿದಿನಗಳಲ್ಲಿ ಮಾತ್ರ ಬಳಸುವ ಪೂಜಾ ಸಾಮಗ್ರಿಗಳು, ದಸರಾ ಬೊಂಬೆಗಳು ಇತ್ಯಾದಿಗಳನ್ನು ಇಡಲೂ ಕೂಡ ಹೆಚ್ಚುವರಿ ಸ್ಥಳದ ಅಗತ್ಯ ಇರುತ್ತದೆ. ಆದುದರಿಂದ ಹೆಚ್ಚುವರಿ ಸಾಮಾನು ಇಡಲು ಸೂಕ್ತ ಸ್ಥಳವಾದ ಅಟ್ಟಗಳು ಮತ್ತೆ ಜನಪ್ರಿಯವಾಗುತ್ತಿವೆ.

ಅಟ್ಟದಿಂದ ಆಗುವ ಲಾಭಗಳು
ಒಂದು ಲೆಕ್ಕದ ಪ್ರಕಾರ, ಪ್ರತಿಶತ ಸುಮಾರು ಹತ್ತರಿಂದ ಇಪ್ಪತ್ತರಷ್ಟು ಹೆಚ್ಚುವರಿ ಸ್ಟೋರೇಜ್‌ ಸ್ಥಳವನ್ನು ನಮ್ಮ ಮನೆಯ ಅಟ್ಟಗಳು ನೀಡಬಹುದು. ಕೋಣೆಯನ್ನು ಅನಗತ್ಯವಾಗಿ ದಿನವೂ ಬಳಸದ ವಸ್ತುಗಳಿಂದ ಕಿಕ್ಕಿರಿಸಿಕೊಳ್ಳದೆ, ಇಂಥವನ್ನು ಸುಲಭದಲ್ಲಿ ಇರಿಸಬಹುದಾದ ಜಾಗ ಅಟ್ಟವೇ ಆಗಿರುತ್ತದೆ. ಕೆಲವೊಂದು ವಸ್ತುಗಳನ್ನು ನೆಲದ ಮೇಲೆ ಇಟ್ಟರೆ ಬಣ್ಣ ಮಾಸುವುದು, ಬೂಷ್ಟು ಹಿಡಿಯುವುದು ಆಗಬಹುದು. ಅದೇ ನೆಲದ ತೇವ ತಾಗದ ಅಟ್ಟಗಳಾದರೆ, ತಿಂಗಳಾನುಗಟ್ಟಲೆ ಸುರಕ್ಷಿತವಾಗಿ ಇರುತ್ತವೆ. ಕೆಲವೊಂದು ವಸ್ತುಗಳ ಉಪಯೋಗ ದೈಹಿಕವಾಗಿ ಇರದಿದ್ದರೂ, ಮಾನಸಿಕವಾಗಿ ಇದ್ದರೆ- ನೆನಪಿಗಾಗಿ ಉಳಿಸಿಕೊಂಡಿರುವ ವಸ್ತುಗಳು ಇತ್ಯಾದಿಯನ್ನು ಇಡಲು ಕೂಡ ಸುರಕ್ಷಿತ ಸ್ಥಳ ಅಟ್ಟವೇ ಆಗಿರುತ್ತದೆ. 

ಅಟ್ಟಗಳ ವಿನ್ಯಾಸ ಅಗತ್ಯಕ್ಕೆ ತಕ್ಕಂತೆ
ಅಟ್ಟಗಳ ನಿರ್ಮಾಣ ಕುರಿತು ಪ್ಲಾನ್‌ ಮಾಡುವಾಗ, ಅವುಗಳನ್ನು ಯಾವ ಕಾರಣಕ್ಕೆ ನಾವು ಬಳಸಬಹುದು? ಎಂದು ನಿರ್ಧರಿಸುವುದು ಮುಖ್ಯ. ದಿನಬಳಕೆಯ ವಸ್ತುಗಳನ್ನು ಅಟ್ಟಗಳಲ್ಲಿ ಸಾಮಾನ್ಯವಾಗಿ ಇಡುವುದಿಲ್ಲ. ಹಾಗೇನಾದರೂ ಇಡಲೇ ಬೇಕಾದರೆ, ಅದಕ್ಕಾಗಿಯೇ ವಿಶೇಷ ವಿನ್ಯಾಸವನ್ನು ಮಾಡಬೇಕಾಗುತ್ತದೆ. ಪ್ರಮುಖವಾಗಿ, ಭಾರ ಹೆಚ್ಚಿರದ, ಗಾತ್ರದಲ್ಲಿ ಮಾತ್ರ ದೊಡ್ಡದಿರುವ ವಸ್ತುಗಳನ್ನು ಅಟ್ಟಗಳಲ್ಲಿ ಇಡುವುದು ಸುಲಭ. ಊರಿಗೋ, ಟೂರ್‌ಗೊà ಹೋಗುವಾಗ ಬಳಸುವ ವಸ್ತುಗಳಾದ ಖಾಲಿ ಸೂಟ್‌ ಕೇಸ್‌ – ಪೆಟ್ಟಿ ಇತ್ಯಾದಿಗಳು ಹಗುರವಾಗಿರುವುದರಿಂದ ಅವುಗಳನ್ನು ಎತ್ತಿ ಅಟ್ಟದ ಮೇಲೆ ಇಡುವುದು ಸುಲಭ. ಭಾರವಾದ ವಸ್ತುಗಳನ್ನು ಮೇಲುಮಟ್ಟದಲ್ಲಿ ಇಡದಿರುವುದೇ ಒಳ್ಳೆಯದು. ಅವುಗಳನ್ನು ಏರಿಸುವುದು – ಇಳಿಸುವುದು ಕಷ್ಟಕರ ಕೆಲಸ ಆಗಿರುವುದರ ಜೊತೆಗೆ, ಜಾರಿ ಕೆಳಗೆ ಬೀಳುವ ಸಾಧ್ಯತೆಯೂ ಇರುತ್ತದೆ. ದಿನವೂ  ಬಳಸದ ಹಬ್ಬದ ಅಡುಗೆಗೆ ಮಾತ್ರ ಉಪಯೋಗಿಸುವ ದೊಡ್ಡ ದೊಡ್ಡ ಪಾತ್ರೆಗಳು ಇತ್ಯಾದಿಗಳು ಭಾರ ಹೆಚ್ಚಿರದ ಕಾರಣ ಎತ್ತಿ ಇಡಬಹುದು. ಚಳಿಗಾಲದಲ್ಲಿ ಮಾತ್ರ ಬಳಸುವ ಕಂಬಳಿಗಳು, ಮಳೆಗಾಲದ ರೇನ್‌ ಕೋಟುಗಳನ್ನೂ ಸಹ ವರ್ಷದ ನಾಲ್ಕಾರು ತಿಂಗಳು ಅಟ್ಟ ಸೇರಿಸಬಹುದು. 

Advertisement

ಅಟ್ಟಗಳ ಕಟ್ಟುವಿಕೆ
ಈ ಹಿಂದೆ ಅಟ್ಟ ಎಂದರೆ ಕಾಂಕ್ರಿಟ್‌ ಸ್ಲಾÂಬ್‌ ಎಂದೇ ಆಗುತ್ತಿತ್ತು ಹಾಗೂ ಇದನ್ನು ಮನೆ ಕಟ್ಟುವಾಗಲೇ ಲಿಂಟಲ್‌ ಮಟ್ಟದಲ್ಲಿ ಎರಡು ಅಡಿ ಅಗಲ ಕೋಣೆಯ ಉದ್ದಕ್ಕೂ ಹಾಕಲಾಗುತ್ತಿತ್ತು. ಆದರೆ, ಈಗ ಅಟ್ಟಗಳನ್ನು ವೈವಿಧ್ಯಮಯ ವಸ್ತುಗಳಿಂದ ಮಾಡಬಹುದಾಗಿದೆ. ಪ್ಲೆ„ವುಡ್‌, ಸ್ಟೀಲ್‌ನ ಇಲ್ಲವೇ ಮರದ ಫ್ರೆàಮ್‌ವರ್ಕ್‌, ಮಾಡ್ಯುಲರ್‌ ಮಾದರಿಯಲ್ಲಿಯೂ ಮಾಡಬಹುದು. ಏಳು ಅಡಿಗಿಂತ ಎತ್ತರದಲ್ಲಿ ಬರುವ ಅಟ್ಟಗಳನ್ನು ಸಾಕಷ್ಟು ಭಾರಹೊರುವಷ್ಟು ಬಲಿಷ್ಠವಾಗಿ ವಿನ್ಯಾಸ ಮಾಡಬೇಕು. ಸಾಮಾನ್ಯವಾಗಿ ಅಟ್ಟಗಳ ಮೇಲೆ ಹೆಚ್ಚು ಭಾರ ಇಡದಿದ್ದರೂ, ಕೆಲ ಸಮಯ ಸಂದರ್ಭಗಳಲ್ಲಿ ಹೆಚ್ಚುವರಿ ಭಾರ ಹೊರುವ ಸಾಮರ್ಥಯ ಇರುವಂತೆ ವಿನ್ಯಾಸ ಮಾಡುವುದು ಉತ್ತಮ. ಈಗ ಲಭ್ಯವಿರುವ ಉತ್ತಮ ಗುಣಮಟ್ಟದ “ಆ್ಯಂಕರ್‌ ಬೋಲ್ಟ್’ -ಲಂಗರು ಬೋಲ್ಟ್ ಗಳನ್ನು ಗೋಡೆಗೆ ಹಾಕಿ ಸಾಕಷ್ಟು ಭಾರ ಹೊರುವ ಅಟ್ಟಗಳನ್ನು ರೂಪಿಸಬಹುದು.   

ಈ ಲಂಗರು ಬೋಲ್ಟ್ ಗಳು ಹಡಗುಗಳನ್ನು ಬಂದರುಗಳಲ್ಲಿ ಅತ್ತಿಂದಿತ್ತ ಅಲುಗಾಡದಂತೆ ಬಿಗಿಹಿಡಿಯಲು ಬಳಕೆಯಾಗುತ್ತವೆ.  ಇಲ್ಲೂ ವಿನ್ಯಾಸ ಮಾಡಲಾಗಿದೆ. ಗೋಡೆ ಕೊರೆದು ಆ್ಯಂಕರ್‌ ಬೋಲ್ಟ್ ಸಿಗಿಸಿದರೆ ಗಟ್ಟಿಮುಟ್ಟಾದ ಆಧಾರಗಳು ಸಿಗುತ್ತವೆ. ನಾವು ಮೂರು ನಾಲ್ಕು ಅಡಿಗಳ ಅಂತರದಲ್ಲಿ ಆಧಾರಗಳನ್ನು ಕಲ್ಪಿಸಿಕೊಂಡರೆ, ಮುಕ್ಕಾಲು ಇಂಚು ಇಲ್ಲವೇ ಒಂದು ಇಂಚು ದಪ್ಪದ ಪ್ಲೆ„ವುಡ್‌ -ಬ್ಲಾಕ್‌ ಬೋರ್‌x ಸಾಕಾಗುತ್ತದೆ. ಇನ್ನೂ ಹೆಚ್ಚಿನ ದಪ್ಪದ ಅಟ್ಟ ಬೇಕೆಂದರೆ – ಇದೇ ವಸ್ತುಗಳನ್ನು ಬಳಸಿ ಫ್ರೆàಮ್‌ವರ್ಕ್‌ ಮಾಡಿಕೊಳ್ಳಬಹುದು. 

ವೈವಿಧ್ಯಮಯ ಅಟ್ಟಗಳು
ಕೋಣೆಯಲ್ಲಿ ವಾರ್ಡ್‌ರೋಬ್‌ ಮಾಡಿದರೆ ಅದರ ವಿಸ್ತೀರ್ಣದಲ್ಲಿ ಎರಡು ಅಡಿ ಕಡಿತಗೊಂಡಂತೆಯೇ ಆಗುತ್ತದೆ. ಆದರೆ ಅಟ್ಟಗಳು ಏಳು ಅಡಿ ಎತ್ತರದಲ್ಲಿ ಬರುವುದರಿಂದ ಅವು ಎರಡು ಅಡಿಗಿಂತ ಹೆಚ್ಚಿದ್ದರೂ ಅಡ್ಡಿ ಇಲ್ಲ. ನಿಮ್ಮಲ್ಲಿ ಎಂದಾದರೊಮ್ಮೆ ಬಳಸುವ ವಸ್ತುಗಳು ಹೆಚ್ಚಿದ್ದರೆ ಅಥವಾ ಆ ವಸ್ತುಗಳ ಅಗಲ – ಉದ್ದ ಹೆಚ್ಚಿದ್ದರೆ, ಅಟ್ಟಗಳ ಅಗಲವನ್ನು ಹೆಚ್ಚಾಗಿ ಅಂದರೆ, ಮೂರು ಇಲ್ಲವೇ ನಾಲ್ಕು ಅಡಿಗೂ ವಿಸ್ತರಿಸಿಕೊಳ್ಳಬಹುದು. ಆದರೆ ಈ ವಿಸ್ತಾರವಾದ ಅಟ್ಟಗಳಿಗೆ ಸೂಕ್ತ ಆಧಾರಗಳನ್ನು ನೀಡಲು ಮರೆಯಬಾರದು. ಹೊರಚಾಚಿದಂತಿರುವ ಅಟ್ಟಗಳಿಗೆ ಅರ್ಧಚಂದ್ರಾಕೃತಿ, ಇಲ್ಲವೇ ಅರ್ಧ ಹೆಕ್ಸಾಗನ್‌ – ಅರ್ಧ ಆರುಮುಖದ ವಿನ್ಯಾಸವನ್ನೂ ಮಾಡಬಹುದು. 

ಅಟ್ಟಗಳಿಗೆ ಮುಚ್ಚುಗಳು 
ಹೇಳಿಕೇಳಿ ಅಟ್ಟಗಳನ್ನು  ವಸ್ತುಗಳ ತುಂಬಿಡಲು ಬಳಸುವುದರಿಂದ ಇವು ನೋಡಲು ಅಷ್ಟೇನೂ ಆಕರ್ಷಕವಾಗಿ ಕಾಣಿಸುವುದಿಲ್ಲ. ಆದುದರಿಂದ ಅಟ್ಟಗಳಿಗೆ ಸರಳವಾಗಿ ವಿನ್ಯಾಸ ಮಾಡಿದ ಬಾಗಿಲುಗಳು – ಶಟರ್ಗಳನ್ನು ಅಳವಡಿಸಬಹುದು. ಅಟ್ಟಗಳು ವಾರ್ಡ್‌ರೋಬ್‌ಗಳ ಮೇಲೆ ಬರುತ್ತಿದ್ದರೆ ಆಗ ಮ್ಯಾಚಿಂಗ್‌ – ಸರಿಹೊಂದುವಂತೆ ವಿನ್ಯಾಸ ಮಾಡಬೇಕಾಗುತ್ತದೆ. ಇಲ್ಲದಿದ್ದರೆ ಆಕರ್ಷಕ ವಿನ್ಯಾಸಗಳಿರುವ ಕರ್ಟನ್‌ಗಳನ್ನು ಕೂಡ ಹಾಕಿ ಅಟ್ಟಗಳಿಗೆ ಮುಚ್ಚುಗಳನ್ನು ತಯಾರಿಸಿಕೊಳ್ಳಬಹುದು. 

ಮಾಹಿತಿಗೆ-98441 32826
– ಆರ್ಕಿಟೆಕ್ಟ್ ಕೆ. ಜಯರಾಮ್‌

Advertisement

Udayavani is now on Telegram. Click here to join our channel and stay updated with the latest news.

Next