Advertisement

ಬಾಗಲಕೋಟೆ: ಜಗಜೀವನರಾಂ ಮನುಕುಲಕ್ಕೆ ಮಾದರಿ: ಜಾನಕಿ

06:08 PM Apr 06, 2024 | Team Udayavani |

ಉದಯವಾಣಿ ಸಮಾಚಾರ
ಬಾಗಲಕೋಟೆ: ಸಮಾಜದ ಕೆಳಸ್ತರದಲ್ಲಿ ಹುಟ್ಟಿ ಬದುಕನ್ನೇ ಸವಾಲಾಗಿ ಸ್ವೀಕರಿಸಿ, ಮನುಕುಲಕ್ಕೆ ಮಾದರಿ ಎನ್ನುವಂತಹ ಕೊಡುಗೆ ನೀಡಿದ ಮಹಾನ್‌ ಚೇತನ ಡಾ|ಬಾಬು ಜಗಜೀವನರಾಮ್‌ ಎಂದು ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಹೇಳಿದರು.

Advertisement

ಜಿಪಂ ನೂತನ ಸಭಾಭವನದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ಡಾ|ಬಾಬು ಜಗಜೀವನರಾಮ್‌117ನೇ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬಡ ಕುಟುಂಬದಲ್ಲಿ ಹುಟ್ಟಿದ ಜಗಜೀವನರಾಂ ಉಪ ಪ್ರಧಾನಮಂತ್ರಿಯವರೆಗೆ ಸಾಗಿ ಬಂದ ದಾರಿ, ಜೀವನ ಮೌಲ್ಯ ಇಂದಿನ ಯುವಜನತೆಗೆ ಅನುಸರಿಸಬೇಗಿದೆ ಎಂದರು. ಮುಖ್ಯವಾಗಿ ನಮ್ಮ ಮಕ್ಕಳಲ್ಲಿ ಜಗಜೀವನರಾಮ್‌ ಅವರ ಜೀವನ ಪಾಠವನ್ನು ಹೇಳಿಕೊಟ್ಟಾಗ ಮಾತ್ರ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಎಲ್ಲ ಇದ್ದು ಸಾಧನೆ ಮಾಡುವುದು ದೊಡ್ಡದಲ್ಲಿ ನೀರಾವರಿ ಜಮೀನು ಇದ್ದು ಬತ್ತ ಬೆಳೆಯುವುದು ಕಷ್ಟವಲ್ಲ.

ಆದರೆ ಕಷ್ಟ, ತೊಂದರೆ, ಅನುಮಾನಗಳನ್ನು ಅನುಭವಿಸಿ ಮೆಟ್ಟಿ ನಿಂತು ಬೆಳೆದು ತೋರಿಸುವುದು ನಿಜವಾದ ಸಾಧನೆ. ನೀರು ಕುಡಿಯುವಲ್ಲಿ ಜಗಜೀವನರಾಂ ಅವರಿಗೆ ಸಮಾನತೆ ಇರಲಿಲ್ಲ. ತಮಗೆ ಆಗುತ್ತಿರುವ ದೌರ್ಜನ್ಯ, ಕಷ್ಟಗಳು ಮುಂದಿನ ಜನಾಂಗಕ್ಕೆ
ಆಗಬಾರದೆಂಬ ದೃಢ ನಿರ್ಧಾರ ಇಟ್ಟಿಕೊಂಡು ಅವರ ನೈತಿಕ ಜೀವನವನ್ನು ತ್ಯಾಗ ಮಾಡಿದ್ದಾರೆ. ಅವರು ಸಾಗಿ ಬಂದ ದಾರಿ ಇಂದಿನ ಯುವಜನತೆಗೆ ಆದರ್ಶವಾದಾಗ ಮಾತ್ರ ಜಯಂತಿ ಆಚರಣೆಗೆ ಅರ್ಥ ಬರುತ್ತದೆ ಎಂದರು. ಜಿಪಂ ಸಿಇಒ ಶಶಿಧರ ಕುರೇರ ಮಾತನಾಡಿ, ಹಸಿರು ಕ್ರಾಂತಿಯ ಹರಿಕಾರರಾದ ಡಾ|ಬಾಬು ಜಗಜೀವನರಾಮ್‌ ಅವರ ಕಂಡಂತಹ ಕಷ್ಟಗಳು, ಹೋರಾಟದ ಬದುಕು ಬೆಳೆದು ಬಂದ ದಾರಿ ಇಂದಿನ ಯುವ ಜನರಿಗೆ ದಾರಿದೀಪವಾಗಿದೆ. ಸ್ವಾಭಿಮಾನ ಭಾರತಕ್ಕಾಗಿ ಆಹಾರ
ಸಮತೋಲ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಹಸಿರು ಕ್ರಾಂತಿ ಹುಟ್ಟುಹಾಕಿದ್ದರು. ಶೋಷಿತ ಮತ್ತು ದುರ್ಬಲರ ವರ್ಗದವರಿಗೂ ತಮ್ಮ ಜೀವನವನ್ನೇ ಮೀಸಲಾಗಿಟ್ಟಿದ್ದರು ಎಂದು ಹೇಳಿದರು.

ಅಪರ ಜಿಲ್ಲಾಧಿಕಾರಿ ಪರಶುರಾಮ ಶಿನ್ನಾಳಕರ ಮಾತನಾಡಿದರು. ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಪ್ರಸನ್ನ ದೇಸಾಯಿ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ ನಂದಾ ಹಣಮರಟ್ಟಿ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಸಮುದಾಯದ ಬಾಂಧವರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next