Advertisement

ಪುತ್ತಿಗೆ ಗ್ರಾಮ ಪಂಚಾಯತ್‌ ಸದಸ್ಯೆಯ ಮನೆ ಬೆಂಕಿಗಾಹುತಿ

12:33 AM Apr 16, 2024 | Team Udayavani |

ಕುಂಬಳೆ: ಪುತ್ತಿಗೆ ಗ್ರಾಮ ಪಂಚಾಯತ್‌ ಸದಸ್ಯೆಯ ಮನೆ ಬೆಂಕಿಗಾಹುತಿಯಾದ ಘಟನೆ ಪುತ್ತಿಗೆಯ ಎಡನಾಡಿನಲ್ಲಿ ನಡೆದಿದೆ. ಎಡನಾಡು ನಿವಾಸಿ ರಾಮ ಭಂಡಾರಿ ಅವರ ಹೆಂಚಿನ ಮನೆ ಸೋಮವಾರ ಸಂಜೆ ಉರಿದು ನಾಶವಾಗಿದೆ.

Advertisement

ಭಂಡಾರಿಯವರ ಪತ್ನಿ ಅನಿತಾಶ್ರೀ ಪುತ್ತಿಗೆ ಗಾ.ಪಂ. ಸದಸ್ಯೆಯಾಗಿದ್ದು, ಅವರು ಮನೆಗೆ ಬೀಗ ಹಾಕಿ ಗ್ರಾ.ಪಂ.ಕಚೇರಿಗೆ ತೆರಳಿದ್ದರು. ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಮನೆಯಲ್ಲಿ ವಿದ್ಯುತ್‌ ಶಾರ್ಟ್ ಸರ್ಕ್ಯೂಟ್ ನಿಂದ ಮನೆ ಉರಿದಿರುವುದಾಗಿ ತನಿಖೆಯಿಂದ ತಿಳಿದು ಬಂದಿದೆ.

ಮನೆಯ ಮಾಡು ಅರ್ಧಭಾಗ ಉರಿದು ಹೋಗಿದೆ. ಆದರೆ ಮನೆಯೊಳಗಿನ ಸಾಮಗ್ರಿಗಳು ಉರಿದು ನಾಶವಾಗಿದೆ. ಮನೆಯವರು ಅನಾಥರಾಗಿ ಪ್ರಕೃತ ಬೇರೆಯವರ ಮನೆಯಲ್ಲಿ ವಾಸವಾಗಿದ್ದಾರೆ. ರಾಮ ಭಂಡಾರಿ ಅವರ ಪತ್ನಿ ಎಡನಾಡು ಗ್ರಾಮದ ಬಿಜೆಪಿ ಗ್ರಾಮ ಪಂಚಾಯತ್‌ ಚುನಾಯಿತ ಸದಸ್ಯೆಯಾಗಿದ್ದಾರೆ.ಓರ್ವ ಪುತ್ರ ಕಾಸರಗೋಡಿನ ವಸ್ತ್ರದ ಅಂಗಡಿಯಲ್ಲಿ ಕೆಲಸಕ್ಕಿದ್ದು ಇನ್ನೋರ್ವ ಎಂಸಿಎ ವಿದ್ಯಾರ್ಥಿಯಾಗಿದ್ದಾರೆ.

ಉಪ್ಪಳದಿಂದ ಅಗ್ನಿಶಾಮಕ ದಳ ತಂಡ ಮತ್ತು ಊರವರ ಸಹಕಾರದಿಂದ ಬೆಂಕಿಯನ್ನು ಆರಿಸಲಾಗಿದೆ. ಆದರೆ ಮನೆಯೊಳಗಿದ್ದ ಸಾಮಗ್ರಿ, ವಿದ್ಯುತ್‌ ಉಪಕರಣಗಳು ಉರಿದು ನಾಶವಾಗಿದೆ.

ವಂಚನೆ ಪ್ರಕರಣ : ಇಬ್ಬರ ಬಂಧನ
ಕಾಸರಗೋಡು: ಆನ್‌ಲೈನ್‌ ಮುಖಾಂತರ ಉದ್ಯೋಗ ಭರವಸೆ ನೀಡಿ 26 ಕೋಟಿ ರೂ. ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ಕಾಸರಗೋಡು ನಿವಾಸಿಗಳಾದ ನೌಶಾದ್‌ ಸಿ.ಎಚ್‌. ಹಾಗು ಅಹಮ್ಮದ್‌ ಕಬೀರ್‌ ಸಿ.ಎಚ್‌.ನನ್ನು ಹೈದರಾಬಾದ್‌ ಸೈಬರ್‌ ಕ್ರೈಂ ಪೊಲೀಸರು ಬಂಧಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next